CrimeDistrictsKarnatakaLatestMain PostYadgir

ಯಾದಗಿರಿ ಪೊಲೀಸರ ಲಂಚಾವತಾರದ ವೀಡಿಯೋ ವೈರಲ್

ಯಾದಗಿರಿ: ಹಾಡಹಗಲೇ ಯಾದಗಿರಿ ಪೊಲೀಸರು ಲಂಚಾವತಾರಕ್ಕೆ ಮುಂದಾಗಿದ್ದಾರೆ. ಪೊಲೀಸರು ಲಂಚ ಪಡೆದುಕೊಂಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

ಮರಳು ಟಿಪ್ಪರ್ ಮಾಲೀಕರ ಜೊತೆ ಯಾದಗಿರಿ ಗ್ರಾಮೀಣ ಠಾಣಾ ಸಿಬ್ಬಂದಿ ಲಂಚ ಪಡೆದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಾಲೂಕಿನ ಕೌಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಹಣ ಪಡೆದ ಆರೋಪ ಕೇಳಿ ಬರುತ್ತಿದೆ.

MONEY

ಠಾಣೆಯ ಪಿಎಸ್‌ಐ ಸುರೇಶ್ ತಮ್ಮ ವಾಹನದಲ್ಲಿದ್ದಾಗ ಅವರ ವಾಹನ ಚಾಲಕ, 30 ಸಾವಿರ ರೂ. ಲಂಚ ಪಡೆಯಲಾಗಿದೆ. ಒಂದು ಮರಳು ಟಿಪ್ಪರ್‌ಗೆ 50 ಸಾವಿರ ಲಂಚದ ಬೇಡಿಕೆಯಿಡಲಾಗಿದ್ದು, ಮುಂಗಡವಾಗಿ 30 ಸಾವಿರ ರೂ.ನ್ನು ಪೊಲೀಸರು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ:  ಹಿರಿಯೂರಿನಲ್ಲಿ ಭೀಕರ ಸರಣಿ ಅಪಘಾತ- ನಾಲ್ವರು ಸ್ಥಳದಲ್ಲೇ ಸಾವು

ಲಂಚ ಪಡೆದ ವೀಡಿಯೋ ವೈರಲ್ ಹಿನ್ನೆಲೆ ವಾಹನ ಚಾಲಕ ಕಂ ಕಾನ್ಸ್ಟೇಬಲ್ ಪ್ರಭುಗೌಡ ಅಮಾನತು ಮಾಡಲಾಗಿದೆ. ಆದರೆ ಕಾನ್ಸ್ಟೇಬಲ್ ಪ್ರಭುಗೌಡ ಲಂಚ ಪಡೆಯುವಾಗ ಪಿಎಸ್‌ಐ ಸುರೇಶ್ ಜೀಪ್‌ನಲ್ಲಿಯೇ ಇದ್ದರೂ, ಪಿಎಸ್‌ಐ ಸುರೇಶ್ ವಿರುದ್ಧ ಎಸ್ಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ಕಳೆದ 70 ವರ್ಷದಿಂದ ಕಾಂಗ್ರೆಸ್ ಕಟ್ಟಿದ್ದನ್ನು ಬಿಜೆಪಿ 7 ವರ್ಷದಲ್ಲಿ ಮಾರುತ್ತಿದೆ: ಪ್ರಿಯಾಂಕಾ ಗಾಂಧಿ

ಇತ್ತೀಚೆಗೆ ಹಿರಿಯ ಅಧಿಕಾರಿಗಳು ಮಾಡುವ ತಪ್ಪುಗಳಿಗೆ ರಕ್ಷಕರಾಗಿರುವ ಎಸ್‌ಪಿ, ಕಿರಿಯ ಸಿಬ್ಬಂದಿ ಶಿಕ್ಷೆ ನೀಡುತ್ತಿದ್ದಾರೆ. ಯಾದಗಿರಿ ಗ್ರಾಮೀಣ ಠಾಣೆಯ ಪಿಎಸ್‌ಐ ಸುರೇಶ್, ಪದೇ ಪದೇ ತಪ್ಪು ಮಾಡುತ್ತಿದ್ದರು ಎಸ್‌ಪಿ ವೇದಮೂರ್ತಿ ಕೃಪಕಟಾಕ್ಷದಿಂದ ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಪೊಲೀಸರ ಭ್ರಷ್ಟಾಚಾರಕ್ಕೆ ಜಿಲ್ಲೆಯಲ್ಲಿ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

Leave a Reply

Your email address will not be published.

Back to top button