ಸ್ಟಾಕ್ಹೋಮ್: ಸ್ವೀಡನ್ ದೇಶದ ರಾಜಧಾನಿಯಲ್ಲಿ ಸ್ಟಾಕ್ಹೋಮ್ ನಲ್ಲಿ ಸಾಹಸಿ ಯುವಕನೊಬ್ಬ ಪ್ಯಾರಾಚೂಟ್ ಹಾಕಿಕೊಂಡು 24ನೇ ಮಹಡಿಯಿಂದ ಜಿಗಿದಿದ್ದಾನೆ. ಯುವಕನ ದುರಾದೃಷ್ಟ ಎಂಬಂತೆ ಪ್ಯಾರಾಚೂಟ್ ತೆರೆಯದೇ ಇದ್ದಿದ್ದರಿಂದ ಕಾಂಕ್ರೀಟ್ ನೆಲದ ಮೇಲೆ ಬಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ವಿಡಿಯೋ: ರಸ್ತೆ ದಾಟುವಾಗ ಟ್ರಕ್ ಕೆಳಗೆ ಸಿಲುಕಿದ್ರೂ ಮಹಿಳೆ ಪಾರು!- ಡ್ರೈವರ್‍ಗೆ ಭೇಷ್ ಅಂದ್ರು ಜನ
ಸಾಹಸಿ ಯುವಕನೋರ್ವ ನಗರದಲ್ಲಿ 24 ಮಹಡಿಯ 246 ಅಡಿ ಎತ್ತರವುಳ್ಳ ಕಟ್ಟಡದಿಂದ ಜಿಗಿಯುವ ಮೂಲಕ ಸಾಹಸ ಪ್ರದರ್ಶನಕ್ಕೆ ಮುಂದಾಗಿದ್ದಾನೆ. ಕಟ್ಟಡ ಕೆಳಗಡೆಯಿಂದ ಸ್ನೇಹಿತನೊಬ್ಬ ಆತನ ಸಾಹಸದ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲು ನಿಂತಿದ್ದನು. ಯುವಕ ಕಟ್ಟಡದಿಂದ ಧುಮುಕಿದ ಕೂಡಲೇ ರಕ್ಷಣಾ ಕವಚ ಪ್ಯಾರಾಚೂಟ್ ಓಪನ್ ಆಗಿಲ್ಲ. ಬರೋಬ್ಬರಿ 246 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾನೆ. ಈ ಎಲ್ಲ ದೃಶ್ಯಗಳು ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಡಂಪರ್ ಡಿಕ್ಕಿಯಾದ್ರೂ ಬಚಾವ್- ಡಿಕ್ಕಿಗೆ ನೆಲಕ್ಕೆ ಉರುಳಿ ಮೊಬೈಲ್ ಎತ್ತಿಕೊಂಡು ಹೋದ!
Advertisement
Advertisement
ಕಟ್ಟಡದಿಂದ ಬಿದ್ದ ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ಯವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವಕನಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸ್ಕೂಟಿ ಸಮೇತ ಮಹಿಳೆಯನ್ನು 50 ಅಡಿ ದೂರದವರೆಗೆ ದೂಡಿಕೊಂಡೇ ಹೋದ!
Advertisement
ಸ್ಥಳೀಯ ಪತ್ರಿಕೆಗಳ ಪ್ರಕಾರ, ಯುವಕ ಕಟ್ಟಡದಿಂದ ಬಿದ್ದ ನಂತರ ಆತನ ಸ್ನೇಹಿತನೊಬ್ಬ ಅದೇ ಕಟ್ಟಡದಿಂದ ಪ್ಯಾರಾಚೂಟ್ ಧರಿಸಿ, ಜಿಗಿದು ಯಶಸ್ವಿಯಾಗಿದ್ದಾನೆ ಎಂದು ಪ್ರಕಟಿಸಿವೆ. ಇದನ್ನೂ ಓದಿ: ವಿಡಿಯೋ: ಬೈಕ್ ಸ್ಕಿಡ್ ಆಗಿ ಟ್ರಕ್ ಕೆಳಗೆ ಹೋಯ್ತು- ಸವಾರ ಆರಾಮಾಗಿ ಎದ್ದು ಹೋದ!
Advertisement
ಇದನ್ನೂ ಓದಿ: ಅಚ್ಚರಿ ವಿಡಿಯೋ: ಟ್ರಕ್ ಚಕ್ರದ ಕೆಳಗೆ ಸಿಲುಕಿದರೂ ಬದುಕಿ ಬಂದ ಬೈಕ್ ಸವಾರ
https://www.youtube.com/watch?v=WM5yHBick8o