Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಶ್ವದ ಪ್ರಮುಖ ತೈಲಮಾರ್ಗ ಹಾರ್ಮೂಜ್‌ ಜಲಸಂಧಿ ಬಂದ್‌ – ಭಾರತದ ಮೇಲೆ ಪರಿಣಾಮ ಏನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ವಿಶ್ವದ ಪ್ರಮುಖ ತೈಲಮಾರ್ಗ ಹಾರ್ಮೂಜ್‌ ಜಲಸಂಧಿ ಬಂದ್‌ – ಭಾರತದ ಮೇಲೆ ಪರಿಣಾಮ ಏನು?

Latest

ವಿಶ್ವದ ಪ್ರಮುಖ ತೈಲಮಾರ್ಗ ಹಾರ್ಮೂಜ್‌ ಜಲಸಂಧಿ ಬಂದ್‌ – ಭಾರತದ ಮೇಲೆ ಪರಿಣಾಮ ಏನು?

Public TV
Last updated: March 1, 2026 9:29 pm
Public TV
Share
2 Min Read
Strait of Hormuz closed india oil
SHARE

ಟೆಹ್ರಾನ್‌/ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಭೀತಿಯ ಬೆನ್ನಲ್ಲೇ ಇರಾನ್ (Iran) ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ ಹರ್ಮೂಜ್ ಜಲಸಂಧಿಯನ್ನು (Strait of Hormuz) ಅಧಿಕೃತವಾಗಿ ಬಂದ್ ಮಾಡಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌(IRGC) ಈಗಾಗಲೇ ಹಡಗುಗಳಿಗೆ ರೇಡಿಯೋ ಮೂಲಕ ಎಚ್ಚರಿಕೆ ನೀಡಿದ್ದು, ಯಾವುದೇ ಹಡಗು ಈ ಮಾರ್ಗದಲ್ಲಿ ಸಂಚರಿಸದಂತೆ ನಿರ್ಬಂಧ ವಿಧಿಸಿದೆ. ಇದರ ಬೆನ್ನಲ್ಲೇ ಒಮನ್ ಕರಾವಳಿ ಬಳಿಯ ಹಾರ್ಮುಜ್ ಜಲಸಂಧಿ ಮೂಲಕ ಹೋಗುತ್ತಿದ್ದ ತೈಲ ಟ್ಯಾಂಕರ್ ಸ್ಕೈಲೈಟ್‌ ಮೇಲೆ ಇರಾನ್ ದಾಳಿ ಮಾಡಿದೆ.

ಹಡಗು ಕಂಪನಿಗಳಾದ ಮಾರ್ಸ್ಕ್ ಮತ್ತು ಸಿಎಮ್‌ಎ ಸಿಜಿಎಮ್) ತಮ್ಮ ಸಂಚಾರ ಮಾರ್ಗಗಳನ್ನು ಬದಲಿಸುತ್ತಿವೆ. ಇದು ಸಾಗಾಣಿಕೆ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಬೆಳವಣಿಗೆಯಿಂದ ಕಚ್ಚಾತೈಲದ ಬೆಲೆ 10% ಹೆಚ್ಚಾಗ್ತಿದ್ದು, ಬ್ಯಾರೆಲ್ ಕಚ್ಚಾತೈಲದ ಬೆಲೆ 100 ಡಾಲರ್ ದಾಟುವ ಸಾಧ್ಯತೆ ಇದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಭಾರತದಂತಹ ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ: 15 ಭಾರತೀಯರಿದ್ದ ತೈಲ ಟ್ಯಾಂಕರ್ ಮೇಲೆ ಇರಾನ್‌ ದಾಳಿ

 

ಹರ್ಮೂಜ್ ಜಲಸಂಧಿ ಏಕೆ ಮುಖ್ಯ?
ವಿಶ್ವದ ತೈಲ ಪೂರೈಕೆಯ ಪ್ರಮುಖ ಜಲಸಂಧಿ ಇದಾಗಿದ್ದು ಒಟ್ಟು ತೈಲ ಪೂರೈಕೆಯ ಸುಮಾರು ಶೇ. 20ರಿಂದ ಶೇ. 25ರಷ್ಟು ಭಾಗ ಇಲ್ಲಿಂದ ಸಾಗುತ್ತದೆ. ಪ್ರಮುಖ ರಫ್ತುದಾರರಾದ ಸೌದಿ ಅರೇಬಿಯಾ, ಇರಾಕ್, ಯುಎಇ, ಕುವೈತ್, ಕತಾರ್ ತಮ್ಮ ತೈಲ ಮತ್ತು ಎಲ್‌ಎನ್‌ಜಿ ರಫ್ತಿಗಾಗಿ ಈ ಮಾರ್ಗವನ್ನೇ ಬಳಸುತ್ತಿವೆ. ಇದನ್ನೂ ಓದಿ: ಇರಾನ್‌ ವಿರುದ್ಧ ಹೋರಾಟದಲ್ಲಿ ಮುಸ್ಲಿಮ್‌ ದೇಶಗಳು ಅಮೆರಿಕದೊಂದಿಗೆ ಕೈ ಜೋಡಿಸಿದ್ದು ಯಾಕೆ?

ಇದು ಕೇವಲ 33 ಕಿ.ಮೀ ಅಗಲದ ಕಿರಿದಾದ ಮಾರ್ಗವಾಗಿದ್ದು ಹಡಗುಗಳು ಸಂಚರಿಸುವ ಹಾದಿ ಕೇವಲ 3 ಕಿ.ಮೀ ಮಾತ್ರ. ಸೇನಾ ಬಿಕ್ಕಟ್ಟಿನ ಸಮಯದಲ್ಲಿ ಇದನ್ನು ತಡೆಯುವುದು ಬಹಳ ಸುಲಭ.

ಭಾರತದ ಮೇಲೆ ಪರಿಣಾಮ ಏನು?
ಭಾರತವು ತನ್ನ ಕಚ್ಚಾ ತೈಲದ ಶೇಕಡಾ ಶೇ.60ಕ್ಕೂ ಹೆಚ್ಚು ಭಾಗವನ್ನು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇ. 40-50 ರಷ್ಟು ತೈಲವು ಹರ್ಮೂಜ್ ಜಲಸಂಧಿಯ ಮೂಲಕವೇ ಭಾರತವನ್ನು ತಲುಪುತ್ತದೆ. ಈ ಮಾರ್ಗ ಬಂದ್ ಆಗಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಆಗುತ್ತೆ.

ಪ್ರತಿ ಬ್ಯಾರೆಲ್‌ಗೆ 120-150 ಡಾಲರ್‌ಗಳವರೆಗೆ ಏರಿಕೆಯಾಗುವ ಸಾಧ್ಯತೆ ಇದೆ . ಭಾರತ ತನ್ನ ತುರ್ತು ತೈಲ ಸಂಗ್ರಹವನ್ನು ಬಳಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ರಷ್ಯಾದಂತಹ ಪರ್ಯಾಯ ಮೂಲಗಳಿಂದ ತೈಲ ಪಡೆಯಲು ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ಚೀನಾದ ಶಸ್ತ್ರಾಸ್ತ ನಂಬಿ ಪ್ರಾಣ ಕಳೆದುಕೊಂಡ ಖಮೇನಿ!

ತೈಲ ಬೆಲೆಯಲ್ಲಿ 1 ಡಾಲರ್ ಏರಿಕೆಯು ಭಾರತದ ವಾರ್ಷಿಕ ಆಮದು ವೆಚ್ಚವನ್ನು ಸುಮಾರು ಅಂದಾಜು 16,500 ಕೋಟಿ ಹೆಚ್ಚಿಸುತ್ತದೆ. ಭಾರತವು ದಿನವೊಂದಕ್ಕೆ ಸುಮಾರು 26 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಈ ಜಲಸಂಧಿಯ ಮೂಲಕವೇ ಪಡೆಯುತ್ತದೆ. ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಬರುವ ಬಹುಪಾಲು ತೈಲ ಈ ಮಾರ್ಗದ ಮೂಲಕವೇ ಸಾಗುತ್ತದೆ

ಭಾರತವು ತನ್ನ ನೈಸರ್ಗಿಕ ಅನಿಲದ ಅವಶ್ಯಕತೆಗಾಗಿ ಕತಾರ್ ದೇಶವನ್ನು ಅವಲಂಬಿಸಿದೆ. ಕತಾರ್‌ನಿಂದ ಬರುವ ಶೇ.100ರಷ್ಟು ಎಲ್‌ಎನ್‌ಜಿ ಈ ಕಿರಿದಾದ ಜಲಸಂಧಿಯ ಮೂಲಕವೇ ಬರಬೇಕು. ಈ ಮಾರ್ಗ ಬಂದ್ ಆದರೆ ಭಾರತದಲ್ಲಿ ಸಿಎನ್‌ಜಿ ಮತ್ತು ಕೈಗಾರಿಕಾ ಅನಿಲ ಪೂರೈಕೆಯೂ ಸ್ಥಗಿತಗೊಳ್ಳಬಹುದು.

TAGGED:indiairanStrait of Hormuzಇರಾನ್ಕಚ್ಚಾ ತೈಲಭಾರತಹರ್ಮೂಜ್ ಜಲಸಂಧಿ
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

Pakistan PM Shehbaz Sharif gets trolled over post on US Iran ceasefire Donald Trump
Latest

ಅಮೆರಿಕ – ಇರಾನ್‌ ಮಧ್ಯೆ 2ನೇ ಹಂತದ ಮಾತುಕತೆಗೆ ಪ್ರಸ್ತಾಪ – ಮುಖಭಂಗ ತಪ್ಪಿಸಲು ಪಾಕ್‌ ಶತಪ್ರಯತ್ನ

Public TV
By Public TV
31 minutes ago
Donald Trump Strait Of Hormuz
Latest

ಹಾರ್ಮುಜ್‌ಗೆ ಬಂದ್ರೆ ಕತೆ ಮುಗಿಸಿಬಿಡ್ತೀನಿ – ದಿಗ್ಬಂಧನ ಮುರಿಯುವ ಯಾವ್ದೇ ಪ್ರಯತ್ನ ಬೇಡ: ಟ್ರಂಪ್‌ ಬಿಗ್‌ ವಾರ್ನಿಂಗ್‌

Public TV
By Public TV
57 minutes ago
Modi
Districts

ನಾಳೆ ಮತ್ತೆ ಮಂಡ್ಯಕ್ಕೆ ಮೋದಿ ಭೇಟಿ – ಪ್ರಧಾನಿಗಳ ಸ್ವಾಗತಕ್ಕೆ ಮೈಸೂರು ಪೇಟ; ಏನಿದರ ವಿಶೇಷ?

Public TV
By Public TV
1 hour ago
Koppal Love Jihad
Crime

ಕೊಪ್ಪಳ ಲವ್ ಜಿಹಾದ್‌ಗೆ ಟ್ವಿಸ್ಟ್ – ಆರೋಪಿಗೆ ಅಂತರಾಜ್ಯ ಲಿಂಕ್, ಹೈಫೈ ಜೀವನಕ್ಕಾಗಿ ಬುಕ್ಕಿಗಳಿಂದ ಆರ್ಥಿಕ ಸಹಾಯ

Public TV
By Public TV
2 hours ago
ICC Womens t20 world cup 2026
Cricket

Women’s T20 WC 2026 | ಈವರೆಗಿನ ಗರಿಷ್ಠ 81.8 ಕೋಟಿ ಬಹುಮಾನ ಮೊತ್ತ ಘೋಷಿಸಿದ ICC

Public TV
By Public TV
2 hours ago
APMC 3
Bengaluru City

AMPC ಮಳಿಗೆ ಹಸ್ತಾಂತರದಲ್ಲಿ ಭಾರೀ ಗೋಲ್ಮಾಲ್‌ ಆರೋಪ – ಸಚಿವ ಶಿವಾನಂದ ಪಾಟೀಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?