Connect with us

International

ವಿಡಿಯೋ: ರಸ್ತೆ ದಾಟುವಾಗ ಟ್ರಕ್ ಕೆಳಗೆ ಸಿಲುಕಿದ್ರೂ ಮಹಿಳೆ ಪಾರು!- ಡ್ರೈವರ್‍ಗೆ ಭೇಷ್ ಅಂದ್ರು ಜನ

Published

on

ಬೀಜಿಂಗ್: ಮಹಿಳೆಯೊಬ್ಬರು ರಸ್ತೆ ದಾಟುವಾಗ ಟ್ರಕ್ ಕೆಳಗೆ ಸಿಲುಕಿದ್ರೂ ಪವಾಡ ಸದೃಶವಾಗಿ ಪಾರಾಗಿರೋ ಘಟನೆ ಚೀನಾದಲ್ಲಿ ನಡೆದಿದೆ.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಲ್ಲಿನ ಮಾಧ್ಯಮವೊಂದು ಫೇಸ್ ಬುಕ್ ನಲ್ಲಿ ವಿಡಿಯೋವನ್ನ ಹಂಚಿಕೊಂಡಿದೆ. ಮಹಿಳೆ ಮೊದಲು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಿದ್ದಾರೆ. ನಂತರ ಕೈಯಲ್ಲಿ ಏನೋ ಹಿಡಿದು ಮರಳಿ ಮತ್ತೊಂದು ಬದಿಗೆ ಹೋಗುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಟ್ರಕ್ ಬಂದಿದ್ದು ಮಹಿಳೆ ಗಾಬರಿಯಿಂದ ನಿಲ್ಲಲು ಪ್ರಯತ್ನಿಸಿದ್ದಾರೆ. ಆದ್ರೆ ಕಾಲು ಜಾರಿ ಟ್ರಕ್ ಕೆಳಗೆ ಹೋಗಿದ್ದಾರೆ.

ಬಿದ್ದ ರಭಸಕ್ಕೆ ಮಹಿಳೆ 180 ಡಿಗ್ರಿಯಲ್ಲಿ ತಿರಿಗಿದ್ದಾರೆ. ಟ್ರಕ್ ನ ಟೈರ್ ಮಹಿಳೆ ತಲೆಯಿಂದ ಕೆಲವೇ ಇಂಚಿನಷ್ಟು ದೂರವಿತ್ತು. ಆದ್ರೆ ಚಾಲಕ ಸೂಕ್ತ ಸಮಯಕ್ಕೆ ಬ್ರೇಕ್ ಹಾಕಿದ್ದರಿಂದ ಆಕೆ ಪಾರಾಗಿದ್ದಾರೆ.

ತಕ್ಷಣ ಚಾಲಕ ಟ್ರಕ್ ಕೆಳಗೆ ಇಳಿದು ಮಹಿಳೆಯನ್ನು ರಕ್ಷಿಸಲು ಬಂದಿದ್ದಾರೆ. ಆದರೆ ಮಹಿಳೆಗೆ ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಡಿಯೋವನ್ನ ಸಮಾಜಿಕ ಜಾಲತಾಣದಲ್ಲಿ ನೋಡಿದವರು ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾಲಕ ಸರಿಯಾದ ಸಮಯಕ್ಕೆ ಬ್ರೇಕ್ ಹಾಕಿದ್ದಕ್ಕೆ ಆಕೆಯ ಜೀವ ಉಳಿದಿದೆ ಎಂದು ಕಮೆಂಟ್ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *