Connect with us

Latest

ಸ್ಕೂಟಿ ಸಮೇತ ಮಹಿಳೆಯನ್ನು 50 ಅಡಿ ದೂರದವರೆಗೆ ದೂಡಿಕೊಂಡೇ ಹೋದ!

Published

on

ಮೌಂಟ್‍ಅಬು: ಕಾರೊಂದು ಮಹಿಳೆ ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು, ಸ್ಕೂಟಿ ಸಮೇತ ಮಹಿಳೆಯನ್ನು ಸುಮಾರು 50 ಅಡಿವರೆಗೆ ದೂಡಿಕೊಂಡು ಹೋಗಿರುವ ಶಾಕಿಂಗ್ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಈ ಅಪಘಾತದ ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಾರ್ ಚಾಲಕ ಕುಡಿದು ವಾಹನವನ್ನು ಚಲಾಯಿಸುತ್ತಿದ್ದು, ಮಹಿಳೆಯ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ನಂತರ ವಾಹನವನ್ನು ನಿಲ್ಲಿಸದೇ ಸ್ಕೂಟಿ ಸಮೇತ ದೂಡಿಕೊಂಡೇ ಬಂದಿದ್ದಾನೆ.

ಸ್ಥಳದಲ್ಲಿದ್ದ ಸ್ಥಳೀಯರು ವಾಹನವನ್ನು ತಡೆದು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ವೇಳೆ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ ಅಪಘಾತ ನಡೆದಾಗ ಮಹಿಳೆಯ ಪತಿಯ ಸಹ ಜೊತೆಗಿದ್ದನು. ಈ ಅಪಘಾತದಲ್ಲಿ ಮಹಿಳೆ ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

Click to comment

Leave a Reply

Your email address will not be published. Required fields are marked *