Connect with us

International

ವಿಡಿಯೋ: ಬೈಕ್ ಸ್ಕಿಡ್ ಆಗಿ ಟ್ರಕ್ ಕೆಳಗೆ ಹೋಯ್ತು- ಸವಾರ ಆರಾಮಾಗಿ ಎದ್ದು ಹೋದ!

Published

on

ಬೀಜಿಂಗ್: ವೇಗವಾಗಿ ಬರುತ್ತಿದ್ದ ಬೈಕ್ ಸ್ಕಿಡ್ ಆಗಿ ಟ್ರಕ್ ಅಡಿಗೆ ಜಾರಿಕೊಂಡು ಹೋದ್ರೂ ಸವಾರ ಬದುಕುಳಿದಿರುವ ಘಟನೆ ಚೀನಾದಲ್ಲಿ ನಡೆದಿದೆ. ಟ್ರಕ್ ಅಡಿಗೆ ಸಿಲುಕಿದ ಬೈಕ್ ನಜ್ಜುಗುಜ್ಜಾದ್ರೆ ಇತ್ತ ಬೈಕ್ ಸವಾರ ಮೇಲೆದ್ದು ಅಲ್ಲಿಂದ ಆರಾಮಾಗಿ ನಡೆದುಕೊಂಡು ಹೋಗಿದ್ದಾನೆ.

ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮೈ ಜುಮ್ಮೆನಿಸುವಂತಿದೆ. ಮೊದಲಿಗೆ ಟ್ರಕ್‍ವೊಂದು ಬಂದಿದ್ದು ಅದರ ಬಲಗಡೆಯ ರಸ್ತೆಯಿಂದ ಬೈಕ್ ಸವಾರ ಬರೋದನ್ನ ಕಾಣಬಹುದು. ಈ ವೇಳೆ ಬೈಕ್ ಸ್ಕಿಡ್ ಆಗಿ ಸೀದಾ ಟ್ರಕ್ ಅಡಿಗೆ ಹೋಗಿದೆ. ಅಪಾಯದ ಮುನ್ಸೂಚನೆ ಸಿಕ್ಕ ಕೂಡಲೇ ಸವಾರ ಬೈಕ್ ಬಿಟ್ಟು ಪಕ್ಕಕ್ಕೆ ವಾಲಿದ್ದಾನೆ. ಇದರಿಂದಾಗಿ ಆತ ಬಚಾವಾಗಿದ್ದು, ಟ್ರಕ್ ಕೆಳಗೆ ಹೋದ ಬೈಕ್ ನಜ್ಜುಗುಜ್ಜಾಗಿದ್ದನ್ನ ಕಾಣಬಹುದು.

ಆದ್ರೆ ಬೈಕ್ ಸವಾರ ಮಾತ್ರ ತನ್ನ ಬೈಕ್‍ಗೆ ಏನಾಯಿತು ಎಂದು ನೋಡುವ ಗೋಜಿಗೆ ಹೋಗದೆ ಎದ್ದು ಸೀದಾ ನಡೆದುಕೊಂಡು ಹೋಗಿದ್ದಾನೆ.

https://www.youtube.com/watch?v=QV5qvxZeei4

Click to comment

Leave a Reply

Your email address will not be published. Required fields are marked *

www.publictv.in