ಬೆಂಗಳೂರು: ಖಾಲಿ ಇರುವ ಒಂದು ಮಹಿಳಾ ಸಚಿವ ಸ್ಥಾನವನ್ನು (Woman Ministerial Post) ಆದಷ್ಟು ಬೇಗ ತುಂಬೋದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹಿಳಾ ಕೋಟಾ ತುಂಬುವ ವಿಚಾರ ಆದಷ್ಟು ಬೇಗ ಸಂಪುಟ ಸೇರ್ಪಡೆ ಆಗುತ್ತದೆ. ಸೋಮವಾರ ಸ್ವಲ್ಪ ಸಿಎಂ ಮತ್ತು ಮಾಜಿ ಸಿಎಂ ಅವರು ನಿರ್ಧಾರ ಮಾಡೋದಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಎಸ್‌ಆರ್ ಶ್ರೀನಿವಾಸ್ ಬೇಸರ – KSRTC ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ
ಮಹಿಳೆಯಲ್ಲಿ ಕಾಂಗ್ರೆಸ್‌ಗೆ ಮೀಸಲಾತಿ ಇಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಹಿಳೆಯರನ್ನು ಲೋಕಸಭೆ ಸ್ಪೀಕರ್ ಮಾಡಿದ್ದು, ಅಧ್ಯಕ್ಷರು ಮಾಡಿದ್ದು, ಪ್ರಧಾನಿ, ರಾಷ್ಟ್ರಪತಿ ಮಾಡಿದ್ದು ಕಾಂಗ್ರೆಸ್. ಬಿಜೆಪಿ ಅವರ ಬಳಿ ಮಹಿಳೆ ಬಗ್ಗೆ ಕಲಿಯೋದು ಏನಿದೆ ಇವರೆಲ್ಲಾ ಮನುವಾದಿಗಳು. ಇವರಿಗೆ ಮಹಿಳೆಯರ ಬಗ್ಗೆ ಗೌರವ ಇದೆಯಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅವರಿಗೆ ಯಾವುದೇ ಅಸಮಾಧಾನ ಇಲ್ಲ: ಯತೀಂದ್ರ ಸ್ಪಷ್ಟನೆ
ಗಾಯತ್ರಿ ಶಾಂತೇಗೌಡ ಹೆಸರು ಬಿಟ್ಟ ವಿಚಾರಕ್ಕೆ ಅದಕ್ಕೆ ಕಾರಣ ಏನು ಇಲ್ಲ. ಕಾಂಬಿನೇಷನ್‌ನಲ್ಲಿ ಏರುಪೇರು ಆಗಿರಬಹುದು. ಕ್ಯಾಬಿನೆಟ್ ಮಾಡೋದು ಸಿಎಂ ಅವರ ಪರಮಾಧಿಕಾರ ಮತ್ತು ಪಕ್ಷದ ನಿರ್ಧಾರ. ಈ ಬಗ್ಗೆ ಸಿಎಂ ಮತ್ತು ಪಕ್ಷ ನಿರ್ಧಾರ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದಿನೇಶ್ ಗುಂಡೂರಾವ್‌ಗೆ ಕೈತಪ್ಪಿದ ಸಚಿವ ಸ್ಥಾನ – ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು
ಮಂಕಾಳು ವೈದ್ಯ ಹೆಸರು ಪಟ್ಟಿಯಿಂದ ಬಿಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸೋಮವಾರ ಯಾರೋ ಎಐಸಿಸಿ ಆಫೀಸ್‌ನಲ್ಲಿ ಸಂಭಾವ್ಯ ಪಟ್ಟಿಗೆ ಸಹಿ ಹಾಕಿಸಿಕೊಂಡಿದ್ದಾರೆ. ನಿನ್ನೆ ಆಲ್ ಪಾರ್ಟಿ ಮೀಟಿಂಗ್ ಇತ್ತು. ಆ ಗಡಿಬಿಡಿಯಲ್ಲಿ ಪ್ರಿಂಟ್ ಮಾಡಿದ್ದಾರೆ. ಇವರು ಅದೇ ಅಂದುಕೊಂಡು ಸಹಿ ಮಾಡಿರಬಹುದು ಅಂತ ಕೇಳಿ ಪಟ್ಟಿದ್ದೇವೆ. ಅದನ್ನ ಸರಿ ಪಡಿಸಿದ್ದಾರೆ. ಅದು ಇಂಟರ್ನಲ್ ಕಮ್ಯೂನಿಕೇಷನ್ ಎಂದರು. ಇದನ್ನೂ ಓದಿ: ಸಂಪುಟದಲ್ಲಿ ಸಿದ್ದರಾಮಯ್ಯ ಮಾತಿಗೆ ಬೆಲೆ ಇಲ್ಲ – ಡಿಕೆಶಿ ವಿರುದ್ಧ ಸುಧಾಕರ್ ಕಿಡಿ
