ಬೆಂಗಳೂರು: ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ (Pink Line Metro) ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಗೆ ಸಜ್ಜಾಗುತ್ತಿದ್ದು, ಇಂದು (ಸೆ.2) ಸಚಿವ ಕೃಷ್ಣ ಬೈರೇಗೌಡ (Krishna Byregowda) ಅವರು ಮೆಟ್ರೋ ಟ್ರಯಲ್ ವೇಳೆ ಪ್ರಯಾಣಿಸಿ, ಪರಿಶೀಲನೆ ನಡೆಸಿದ್ದಾರೆ.
ತಾವರೆಕೆರೆ-ಗೊಟ್ಟಿಗೆರೆ ನಡುವಿನ ಮೆಟ್ರೋ ಪರೀಕ್ಷಾ ಸಂಚಾರವನ್ನು ಜಯದೇವ ಆಸ್ಪತ್ರೆ ಬಳಿಯ ನಿಲ್ದಾಣಕ್ಕೆ ತೆರಳಿ ಸಚಿವ ಕೃಷ್ಣ ಬೈರೇಗೌಡರು ಪರಿಶೀಲಿನೆ ನಡೆಸಿದರು. ಸಚಿವರಿಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ಮೆಟ್ರೋ ಎಂಡಿ ಸಾಥ್ ನೀಡಿದರು. ಇದನ್ನೂ ಓದಿ: ಫೆಬ್ರವರಿ 8 ರಿಂದ ಯಲಹಂಕದಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ!
The 7.5-km Kalena Agrahara–Tavarekere stretch of Bengaluru’s Pink Line is ready for inauguration and will soon be open to the public. We are hopeful of receiving a date from the Government of India in September.
Along with MP Tejaswi Surya, MLA M. Krishnappa, Metro MD P.C. Jafar… pic.twitter.com/9BwxeZK0Ks
— Krishna Byre Gowda (@krishnabgowda) September 2, 2026
ಈ ವೇಳೆ ಲೋಕೋಪೈಲೆಟ್ ಕ್ಯಾಬಿನ್‌ನಲ್ಲಿ ಕೂತು ಮಾಹಿತಿ ಪಡೆದುಕೊಂಡ್ರು. ಇನ್ನು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿಯೂ ನಿಲ್ದಾಣದ ಪರಿಶೀಲನಾ ಕಾರ್ಯ ನಡೆಸಿದರು. ಬಳಿಕ ಮೆಟ್ರೋ ಅಭಿವೃದ್ಧಿಯ ವಿಚಾರದಲ್ಲಿ ತೇಜಸ್ವಿ ಸೂರ್ಯ ಮನವಿ ಪತ್ರ ಸಲ್ಲಿಕೆ ಮಾಡಿದರು.
ಆಗಸ್ಟ್ನಲ್ಲಿ ನೀಡಲಾಗಿದ್ದ ಡೆಡ್‌ಲೈನ್ ಮಿಸ್ ಆಗಿರುವ ಕಾರಣ ಸೆಪ್ಟೆಂಬರ್ ಅಂತ್ಯದಲ್ಲಿ ಉದ್ಘಾಟನೆಯಾಗುವ ಸಾಧ್ಯತೆಯಿದೆ. ಬಳಿಕ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ 7.5 ಕಿಮಿ ಉದ್ದದ ಮೆಟ್ರೋ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.ಇದನ್ನೂ ಓದಿ: ನೇಪಾಳ ವಿನಾಶಕಾರಿ ಪ್ರವಾಹಕ್ಕೆ ಮಡಿದವರ ಸಂಖ್ಯೆ 1,127ಕ್ಕೆ ಏರಿಕೆ
