ವಾಷಿಂಗ್ಟನ್: ಭಯೋತ್ಪಾದನೆಗೆ ಪ್ರಾಯೋಜನೆ ನೀಡುವ ರಾಷ್ಟ್ರಗಳ ಪಟ್ಟಿಯಿಂದ ಸಿರಿಯಾವನ್ನು (Syria) ಅಮೆರಿಕ (US) ಕೈಬಿಟ್ಟಿದೆ.
ಅಮೆರಿಕದ ವಿದೇಶಾಂಗ ಇಲಾಖೆಯು ಹಯಾತ್ ತಹ್ರಿರ್ ಅಲ್-ಶಾಮ್ (HTS) ಎಂದೂ ಕರೆಯಲ್ಪಡುವ ಅಲ್-ನುಸ್ರಾ ಫ್ರಂಟ್ ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಗುರುತಿಸುವುದನ್ನು ಹಿಂತೆಗೆದುಕೊಂಡಿದೆ. ಇದನ್ನೂ ಓದಿ: ಇರಾನ್ ಮೇಲೆ ಅಮೆರಿಕದ ಹೊಸ ನಿರ್ಬಂಧ – ಭಾರತದ ಅಕ್ಕಿ, ಚಹಾ ರಫ್ತಿಗೆ ಹೊಡೆತ
ಈ ಕ್ರಮವು ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸಲು ಸಿರಿಯಾದಲ್ಲಿ ಹೆಚ್ಚುವರಿ ಹೂಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಟ್ರೆಶರಿ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.
ಸಿರಿಯಾಕ್ಕೆ ನಿರ್ಬಂಧಗಳಿಂದ ಪರಿಹಾರ ನೀಡುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭರವಸೆಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸಿರಿಯಾ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ ಮಾತ್ರಕ್ಕೆ, ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟ ಮತ್ತು ಸಿರಿಯಾದಲ್ಲಿನ ಕ್ರಿಮಿನಲ್‌ಗಳನ್ನು ಹೊಣೆಗಾರರನ್ನಾಗಿ ಮಾಡುವ ನಮ್ಮ ಬದ್ಧತೆಯ ಬಗ್ಗೆ ಅಮೆರಿಕದ ನಿಲುವು ಎಂದಿಗೂ ಬದಲಾಗುವುದಿಲ್ಲ ಸ್ಪಷ್ಟಪಡಿಸಿದ್ದಾರೆ.
ಹೆಚ್‌ಟಿಎಸ್ ಅನ್ನು ಈ ಹಿಂದೆ ಅಲ್-ನುಸ್ರಾ ಫ್ರಂಟ್ ಎಂದು ಕರೆಯಲಾಗುತ್ತಿತ್ತು. ಇದು ಹಿಂದೆ ಸಿರಿಯಾದಲ್ಲಿ ಅಲ್-ಖೈದಾದ ಶಾಖೆಯಾಗಿತ್ತು. ಆದರೆ, ಅದು 2016 ರಲ್ಲಿ ಜಿಹಾದಿ ಗುಂಪಿನೊಂದಿಗಿನ ಸಂಬಂಧವನ್ನು ಮುರಿದು ತನ್ನ ಇಮೇಜ್ ಅನ್ನು ಮೃದುಗೊಳಿಸಲು ಪ್ರಯತ್ನಿಸಿತು. ಇದನ್ನೂ ಓದಿ: ಭಾರತೀಯರಿಗೆ ಶಾಕ್; ಹೆಚ್-1ಬಿ ವೀಸಾ ಶುಲ್ಕ ಹೆಚ್ಚಳಕ್ಕೆ ಮುಂದಾದ ಅಮೆರಿಕ
ಸಿರಿಯಾವನ್ನು ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದ ಕುರಿತು ಅಮೆರಿಕ ಜುಲೈನಲ್ಲಿ ತಿಳಿಸಿತ್ತು.
