CrimeLatestMain PostNational

ಭಾರತೀಯ ಮೂಲದ ಗ್ಯಾಸ್ ಸ್ಟೇಷನ್ ಮಾಲೀಕನ ಕೊಲೆ

ನ್ಯೂಯಾರ್ಕ್: ಪೊಲೀಸ್ ಠಾಣೆ ಬಳಿಯೇ ಭಾರತೀಯ ಮೂಲದ ಗ್ಯಾಸ್ ಸ್ಟೇಷನ್ ಮಾಲೀಕನನ್ನು ದರೋಡೆಕೋರರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.

ಅಮಿತ್ ಕುಮಾರ್ ಪಟೇಲ್ (45) ಕೊಲೆಯಾದ ವ್ಯಕ್ತಿ. ಜಾರ್ಜಿಯಾದ ಪೂರ್ವ ಕೊಲಂಬಸ್‌ನಲ್ಲಿರುವ ಬ್ಯೂನಾ ವಿಸ್ಟಾ ರಸ್ತೆಯಲ್ಲಿರುವ ಸೈನೋವಸ್ ಬ್ಯಾಂಕ್‌ನ ಹೊರಗೆ ಈ ಘಟನೆ ನಡೆದಿದೆ ಎಂದು ಮಸ್ಕೋಜಿ ಕೌಂಟಿ ಕೊರೋನರ್ ಅಧಿಕಾರಿ ತಿಳಿಸಿದ್ದಾರೆ.

ಬ್ಯಾಂಕ್ ಕಟ್ಟಡವು ಕೊಲಂಬಸ್ ಪೊಲೀಸ್ ಇಲಾಖೆಯ ಪೂರ್ವ ಆವರಣದಲ್ಲಿದೆ. ಪೊಲೀಸ್ ಠಾಣೆಯ ಪ್ರದೇಶ ದ್ವಾರವು ದುಷ್ಕರ್ಮಿಗಳು ಗುಂಡು ಹಾರಿಸಿದ ಸ್ಥಳದಿಂದ ಕೆಲವೇ ಅಡಿಗಳಷ್ಟು ದೂರದಲ್ಲಿತ್ತು.

ಪಟೇಲ್ ಅವರು ಸ್ಟೀಮ್ ಮಿಲ್ ರಸ್ತೆ ಮತ್ತು ಬ್ಯೂನಾ ವಿಸ್ಟಾ ರಸ್ತೆಯ ಮೂಲೆಯಲ್ಲಿರುವ ಚೆವ್ರಾನ್ ಗ್ಯಾಸ್ ಸ್ಟೇಷನ್‌ನ ಮಾಲೀಕರಾಗಿದ್ದರು. ಇದನ್ನೂ ಓದಿ: ಟ್ರೈನ್ ಟಿಕೆಟ್ ರದ್ದು ಮಾಡಿದ್ದಕ್ಕೆ ದಂಡ ವಿಧಿಸಿದವನನ್ನೇ ಕೊಂದ ಸಹೋದರರು!

ಪಟೇಲ್ ಅವರು ವಾರಾಂತ್ಯದಲ್ಲಿ ಬ್ಯಾಂಕಿನ ಜಮೆ ಮಾಡಲು ಬಂದಾಗ ಪ್ರವೇಶದ್ವಾರದಲ್ಲಿಯೇ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಹಣವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಅಮಿತ್‌ಕುಮಾರ್ ಅವರ ಬ್ಯುಸಿನೆಸ್ ಪಾರ್ಟ್ನರ್ ವಿನ್ನಿ ಪಟೇಲ್ ತಿಳಿಸಿದ್ದಾರೆ.

Leave a Reply

Your email address will not be published.

Back to top button