LatestMain PostNational

ಲಕ್ನೋ ಅಗ್ನಿ ದುರಂತ – ನಿರ್ಲಕ್ಷ್ಯವಹಿಸಿದ 15 ಅಧಿಕಾರಿಗಳನ್ನು ಅಮಾನತುಗೊಳಿಸಿದ ಯೋಗಿ

ಲಕ್ನೋ: ಉತ್ತರ ಪ್ರದೇಶದ(Uttar Pradesh) ಲಕ್ನೋದಲ್ಲಿ(Lucknow) ಹೊಟೇಲ್ ಒಂದರಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರ ಆದೇಶದ ಮೇರೆಗೆ 15 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಘಟನೆ ಬಗ್ಗೆ ನಿರ್ಲಕ್ಷ್ಯ ವಹಿಸಿದಕ್ಕಾಗಿ ಹಾಗೂ ಅಕ್ರಮ ನಡೆಸಿದ ಆರೋಪದ ಮೇಲೆ 5 ಸರ್ಕಾರಿ ಇಲಾಖೆಗಳ ಒಟ್ಟು 15 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮಾತ್ರವಲ್ಲದೇ 4 ನಿವೃತ್ತ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಲಕ್ನೋ ಪೊಲೀಸ್ ಕಮಿಷನರ್ ಎಸ್‌ಬಿ ಶಿರಾಡ್ಕರ್ ಹಾಗೂ ಕಮಿಷನರ್ ರೋಷನ್ ಜೇಕಬ್ ಅವರನ್ನೊಳಗೊಂಡ ದ್ವಿಸದಸ್ಯ ತನಿಖಾ ಸಮಿತಿ ಈ ಬಗ್ಗೆ ವರದಿ ಸಲ್ಲಿಸಿದ ಬಳಿಕ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿದ ರಾಜ್ಯ ಸರ್ಕಾರದ ವಕ್ತಾರರು, ಲಕ್ನೋವಿನ ಹೋಟೆಲ್ ಲೆವಾನಾದಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನಿರ್ಕಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ತನಿಖಾ ವರದಿಯನ್ನು ಸ್ವಿಕರಿಸಿದ ಬಳಿಕ ಆದಿತ್ಯನಾಥ್ ಅವರು ಈ ಸೂಚನೆಯನ್ನು ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ‘ಕುದುರೆ ವ್ಯಾಪಾರ’ ಆರೋಪ – ಕಾಂಗ್ರೆಸ್ ಶಾಸಕ, ಬಿಜೆಪಿ ನಾಯಕಿಯ ಹಾದಿಬೀದಿ ರಂಪಾಟ

ಮುಖ್ಯಮಂತ್ರಿಗಳ ಸೂಚನೆಯಂತೆ ಗೃಹ ಇಲಾಖೆ, ಇಂಧನ ಇಲಾಖೆ, ನೇಮಕಾತಿ ಇಲಾಖೆ, ಲಕ್ನೋ ಅಭಿವೃದ್ಧಿ ಪ್ರಾಧಿಕಾರ(ಎಲ್‌ಡಿಎ) ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅವರನ್ನು ಅಮಾನತುಗೊಳಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ನಿವೃತ್ತ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.

ಲಕ್ನೋದ ಹಜರತ್‌ಗಂಜ್ ಪ್ರದೇಶದ ಹೋಟೆಲ್ ಲೆವಾನಾದಲ್ಲಿ ಸೋಮವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ತಮಿಳುನಾಡು ಹುಡುಗಿಯನ್ನು ಮದುವೆಯಾಗಲು ರಾಹುಲ್ ಸಿದ್ಧವಂತೆ!

Live Tv

Leave a Reply

Your email address will not be published.

Back to top button