ಕೊಲಂಬೊ: ಶ್ರೀಲಂಕಾದ (Srilanka) ಜೈಲಿನಲ್ಲಿ ಕೈದಿಗಳ ಎರಡು ಗುಂಪಿನ ಮಧ್ಯೆ ಗಲಾಟೆಯಾದ ಪರಿಣಾಮ 25 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ.
ಕೊಲಂಬೊದ ನೆಗೊಂಬೊ (Negombo) ಜೈಲಿನಲ್ಲಿ ಈ ರಕ್ತಪಾತ ನಡೆದಿದೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳ (Prisoners) ನಡುವೆ ಭಾನುವಾರವೇ (ಜು.5) ಈ ಗಲಾಟೆ ಆರಂಭವಾಗಿತ್ತು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮದುವೆಗೆ ಒತ್ತಾಯಿಸಿದ್ದಕ್ಕೆ ಪ್ರೇಯಸಿ ಕೊಂದು ಶವ ಸುಟ್ಟ ಪ್ರಿಯಕರ; ಮಂಡ್ಯ ಮರ್ಡರ್ ಮಿಸ್ಟರಿಗೆ ಸಿಕ್ತು ಕ್ಲೈಮ್ಯಾಕ್ಸ್
ಕೈದಿಗಳ ನಡುವಿನ ಈ ಮಾರಾಮಾರಿಗೆ ನಿಖರವಾದ ಕಾರಣ ಏನೆಂಬುದು ತಿಳಿದುಬಂದಿಲ್ಲ. ಸದ್ಯ ಅಧಿಕಾರಿಗಳು ಜೈಲಿನ ಆವರಣವನ್ನು ಪರಿಶೀಲಿಸುತ್ತಿದ್ದು, ಮೃತಪಟ್ಟವರು ಮತ್ತು ಗಾಯಗೊಂಡವರ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಸ್ಥಳೀಯ ಮಾಧ್ಯಮ ಪ್ರಸಾರ ಮಾಡಿರುವ ದೃಶ್ಯಗಳಲ್ಲಿ, ಜೈಲಿನ ಮುಖ್ಯ ದ್ವಾರದ ಹೊರಗೆ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿರುವುದು ಕಂಡುಬಂದಿದೆ. ಗಾಯಗೊಂಡ ಕೈದಿಗಳನ್ನು ಪೊಲೀಸ್ ಬಸ್‌ಗಳ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿರುವುದು ಕಂಡುಬಂದಿದೆ. ಬಸ್ಸಿನಲ್ಲಿ ಕೆಳಗೆ ನೆಲದ ಮೇಲೆಯೂ ಕೈದಿಗಳು ರಕ್ತಸಿಕ್ತವಾಗಿ ಬಿದ್ದಿರುವ ದೃಶ್ಯಗಳು ಜೈಲಿನ ಒಳಗಿನ ಭೀಕರತೆಗೆ ಕನ್ನಡಿ ಹಿಡಿದಂತಿವೆ.ಇದನ್ನೂ ಓದಿ: PUBLiC TV Impact | ಮೊಬೈಲ್ ಟಾರ್ಚ್ ಹಿಡಿದು KKRTC ಬಸ್ ಚಾಲನೆ – ಮೂವರು ಅಮಾನತು
