ಬೀಜಿಂಗ್: ಚೀನಾದ (China) ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈಗ ಚೀನಾವನ್ನು ಹಾಡಿ ಹೊಗಳಿದ್ದಾರೆ.
ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ಪೀಪಲ್‌ನಲ್ಲಿ ನಡೆದ ಐತಿಹಾಸಿಕ ಜಿ-2 (G2) ಶೃಂಗಸಭೆಯ ಆರಂಭಿಕ ಮಾತುಕತೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ( Xi Jinping) ಅವರನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಜಿನ್‌ಪಿಂಗ್ ಅವರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ನಿಮ್ಮೊಂದಿಗೆ ಇರುವುದು ಮತ್ತು ನಿಮ್ಮ ಸ್ನೇಹಿತನಾಗಿರುವುದು ನನಗೆ ಹೆಮ್ಮೆಯ ವಿಷಯ. ಚೀನಾ ಮತ್ತು ಅಮೆರಿಕ ನಡುವಿನ ಸಂಬಂಧವು ಹಿಂದೆಂದಿಗಿಂತಲೂ ಉತ್ತಮವಾಗಲಿದೆ ಎಂದು ಆಶಾವಾದವನ್ನು ವ್ಯಕ್ತಪಡಿಸಿದರು.
ನಾನು ಜಿನ್‌ಪಿಂಗ್ ಅವರನ್ನು ಒಬ್ಬ ಶ್ರೇಷ್ಠ ನಾಯಕ ಎಂದು ಎಲ್ಲರ ಬಳಿ ಹೇಳುತ್ತೇನೆ. ಕೆಲವರಿಗೆ ನಾನು ಹೀಗೆ ಹೇಳುವುದು ಇಷ್ಟವಾಗುವುದಿಲ್ಲ, ಆದರೆ ಇದು ಸತ್ಯ. ನಾನು ಕೇವಲ ಸತ್ಯವನ್ನಷ್ಟೇ ಹೇಳುತ್ತೇನೆ ಎಂದರು. ತನಗೆ ನೀಡಲಾದ ಅದ್ಧೂರಿ ರಾಜತಾಂತ್ರಿಕ ಸ್ವಾಗತವನ್ನು ನೋಡಿ, ಇದು ಕೆಲವೇ ಜನರಿಗೆ ಮಾತ್ರ ಸಿಗುವಂತಹ ಅತ್ಯುನ್ನತ ಗೌರವ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಟ್ರಂಪ್ Vs ಕ್ಸಿ ಜಿನ್‌ಪಿಂಗ್ – ಈಗ ಅಮೆರಿಕದ ವಸ್ತುಗಳಿಗೆ 125% ತೆರಿಗೆ ಹಾಕಿದ ಚೀನಾ
Chinese President Xi Jinping said on Thursday that he expects 2026 to be a “historic, landmark year” that opens up a new chapter in China-U.S. relations. #XiTrumpMeeting https://t.co/K959GTIku7 pic.twitter.com/rAYhTWKzmD
— China Xinhua News (@XHNews) May 14, 2026
ಚೀನಾ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುತ್ತಾ, ನೀವು ಮಾಡಿರುವ ಕೆಲಸಗಳ ಬಗ್ಗೆ ಮತ್ತು ಚೀನಾದ ಮೇಲೆ ನನಗೆ ಅಪಾರ ಗೌರವವಿದೆ ಎಂದು ಹರ್ಷಿಸಿದರು.
ತನ್ನೊಂದಿಗೆ ಬಂದಿರುವ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್, ಆಪಲ್ ಸಿಇಒ ಟಿಮ್ ಕುಕ್ ಮತ್ತು ಎನ್‌ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಅವರಂತಹ ಬಿಲಿಯನೇರ್ ಉದ್ಯಮಿಗಳನ್ನು ಜಿನ್‌ಪಿಂಗ್‌ಗೆ ಪರಿಚಯಿಸುತ್ತಾ, ನಾನು ಜಗತ್ತಿನ ಅತ್ಯುತ್ತಮ ಉದ್ಯಮಿಗಳನ್ನು ಇಲ್ಲಿಗೆ ಕರೆತಂದಿದ್ದೇನೆ. ನಿಮಗೆ ಗೌರವ ಸಲ್ಲಿಸಲು ಕೇವಲ ಪ್ರಮುಖ ವ್ಯಕ್ತಿಗಳು ಮಾತ್ರ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತ, ಚೀನಾ ನರಕದ ಕೂಪಗಳು| ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು: ಟ್ರಂಪ್ ಕೆಂಡಾಮಂಡಲ
ಜಿನ್‌ಪಿಂಗ್ ಹೇಳಿದ್ದೇನು?
ಟ್ರಂಪ್ ಮೆಚ್ಚುಗೆಗೆ ಪ್ರತಿಯಾಗಿ ಮಾತನಾಡಿದ ಕ್ಸಿ ಜಿನ್‌ಪಿಂಗ್, ಚೀನಾ ಮತ್ತು ಅಮೆರಿಕ ದೇಶಗಳು ಪರಸ್ಪರ ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು ಎಂದು ಕರೆ ನೀಡಿದರು.
ವಿಶ್ವವು ಇಂದು ಒಂದು ಹೊಸ ಜಾಗತಿಕ ಅಡ್ಡರಸ್ತೆಯಲ್ಲಿದೆ ಮತ್ತು ಇಡೀ ಜಗತ್ತು ಈ ಮಹತ್ವದ ಸಭೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಚೀನಾ-ಅಮೆರಿಕ ನಡುವಿನ ಸುದೃಢ ಮತ್ತು ಸ್ಥಿರವಾದ ಬಾಂಧವ್ಯವು ಇಡೀ ಜಗತ್ತಿಗೆ ಸಿಗುವ ಒಂದು ದೊಡ್ಡ ವರ ಎಂದು ಬಣ್ಣಿಸಿದರು.
Chinese President Xi Jinping holds talks with U.S. President Donald Trump in Beijing
Xi says China-US presidential meeting in Beijing attracts global attention
Xi says China, US must jointly answer questions of times
Xi expects 2026 to be “historic, landmark year” for China-US… pic.twitter.com/Yts4df6jtN
— China Military Bugle (@ChinaMilBugle) May 14, 2026
ಉದಯೋನ್ಮುಖ ಶಕ್ತಿಯೊಂದು ಹಳೆಯ ಬಲಿಷ್ಠ ಶಕ್ತಿಯನ್ನು ಮೀರಿಸಲು ಹೊರಟಾಗ ಸಂಘರ್ಷ ಅನಿವಾರ್ಯ ಎಂಬ ಜಾಗತಿಕ ರಾಜತಾಂತ್ರಿಕ ಸಿದ್ಧಾಂತವನ್ನು ಎರಡೂ ದೇಶಗಳು ಮೀರಿ ನಿಲ್ಲಬೇಕಿದೆ. ನಾವು ಪರಸ್ಪರ ಯಶಸ್ಸನ್ನು ಸಾಧಿಸುತ್ತಾ, ಒಟ್ಟಿಗೆ ಅಭಿವೃದ್ಧಿ ಹೊಂದುವ ಹೊಸ ಮಾದರಿಯ ಬಲಿಷ್ಠ ರಾಷ್ಟ್ರಗಳ ಸಂಬಂಧವನ್ನು ಜಗತ್ತಿಗೆ ಪರಿಚಯಿಸಬೇಕು ಎಂದು ಕರೆ ನೀಡಿದರು.
Xi expects 2026 to be “historic, landmark year” for China-US relations: Xinhua (Video: Xinhua) pic.twitter.com/ImFjl9zWP4
— Global Times (@globaltimesnews) May 14, 2026
ಟ್ರಂಪ್ ಭೇಟಿ ನೀಡಿದ್ದೇಕೆ?
ಚೀನಾ ತನ್ನ ಮಾರುಕಟ್ಟೆಯನ್ನು ಅಮೆರಿಕದ ಪ್ರಮುಖ ಉದ್ಯಮಗಳಿಗೆ ಮುಕ್ತವಾಗಿ ತೆರೆಯಬೇಕು ಎಂಬುದು ಟ್ರಂಪ್ ಅವರ ಮುಖ್ಯ ಬೇಡಿಕೆಯಾಗಿದೆ. ಅಮೆರಿಕದ ಸೋಯಾಬೀನ್, ಗೋಮಾಂಸ ಮತ್ತು ಬೋಯಿಂಗ್ ವಿಮಾನದ ಬಿಡಿಭಾಗಗಳನ್ನು ಚೀನಾ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವಂತೆ ಮಾಡಿ ವ್ಯಾಪಾರ ಕೊರತೆಯನ್ನು ನೀಗಿಸುವುದು ಟ್ರಂಪ್ ಉದ್ದೇಶವಾಗಿದೆ.
ಭಯ ದೇಶಗಳ ನಡುವೆ ಕಳೆದ ವರ್ಷ ಆರಂಭವಾಗಿದ್ದ ಸುಂಕದ ಸಮರಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದ್ದು, ಈ ಒಪ್ಪಂದವನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಇರಾನ್ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಚೀನಾದ ಸಹಾಯದಿಂದ ಯುದ್ಧಕ್ಕೆ ಕೊನೆ ಹಾಡಿ ಜಾಗತಿಕ ಆರ್ಥಿಕತೆಯನ್ನು ಸ್ಥಿರಗೊಳಿಸುವುದು ಟ್ರಂಪ್ ಅವರ ಮತ್ತೊಂದು ಪ್ರಮುಖ ರಾಜತಾಂತ್ರಿಕ ಕಾರ್ಯಸೂಚಿಯಾಗಿದೆ.

