ಗಾಂಧಿನಗರ: ಭಾರೀ ಮಳೆಯಿಂದಾಗಿ ರೈಲು ರದ್ದು ಗೊಳಿಸಿದ್ದಕ್ಕೆ ಭಾರತೀಯ ರೈಲ್ವೆ ಇಲಾಖೆಯು ವಿದ್ಯಾರ್ಥಿಯೊಬ್ಬನಿಗೆ ಕಾರಿನ ಮೂಲಕ ಆತನನ್ನು ವಡೋದರಕ್ಕೆ ತಲುಪಿಸಿದ ವಿಚಿತ್ರ ಘಟನೆ ಗುಜರಾತ್‍ನಲ್ಲಿ ನಡೆದಿದೆ.
ಸತ್ಯಂ ಗಧ್ವಿ ಎಂಬಾತ ತಮಿಳುನಾಡಿನ ಐಐಟಿ ಮ್ರಾಸ್‍ನ ಏರೋಸ್ಪೇಸ್ ಇಂಜಿನಿಯರಿಂಗ್ ಆಗಿ ಓದುತ್ತಿದ್ದ. ಈ ಹಿನ್ನೆಲೆಯಲ್ಲಿ ಆತ ಏಕತಾ ನಗರ ರೈಲು ನಿಲ್ದಾಣದಿಂದ ವಡೋರಾ ನಿಲ್ದಾಣಕ್ಕೆ ಟಿಕೆಟ್ ಬುಕ್ ಮಾಡಿದ್ದ. ಆದರೆ ಭಾರೀ ಮಳೆಯಿಂದಾಗಿ ಏಕತಾ ನಗರದಲ್ಲಿ ರೈಲು ಹಳಿಗೆಲ್ಲವೂ ಕೊಚ್ಚಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ರೈಲನ್ನು ರದ್ದುಗೊಳಿಸಿದರು.
Advertisement
Advertisement
ಆದರೆ ಸ್ತಯಂ ಗಧ್ವಿ ಮೊದಲೆ ಟಿಕೆಟ್ ಬುಕ್ ಮಾಡಿದ್ದರಿಂದ ಆತನಿಗೆ ಚೈನ್ನೈ ತಲುಪಲು ಯಾವುದೇ ತೊಂದರೆ ಆಗಬಾರದು ಎಂದು ಅಲ್ಲಿನ ರೈಲ್ವೆ ಅಧಿಕಾರಿಗಳು ಒಂದು ಬಾಡಿಗೆ ಕಾರಿನ ಮೂಲಕ ಅವನನ್ನು 2 ಗಂಟೆಯಲ್ಲಿ ವಡೋರಕ್ಕೆ ಕಾರಿನ ಮೂಲಕ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಇದನ್ನೂ ಓದಿ: ತುಂಬಿ ಹರಿಯುತ್ತಿರೋ ಕಪಿಲೆಯಲ್ಲಿ ಈಜಲು ತೆರಳಿ ಯುವಕ ನಾಪತ್ತೆ
Advertisement
पश्चिम रेलवे के चाँदोद – एकता नगर रेल खंड के क्षतिग्रस्त होने के कारण रेल यातायात बंद होने से 20920 एकतानगर- एमजीआर चेन्नई सेंट्रल के एकता नगर – वडोदरा के बीच निरस्त होने के कारण इस ट्रेन के एकतानगर से एकमात्र यात्री को कार से वडोदरा पहुँचाया गया @WesternRly @RailMinIndia pic.twitter.com/6kzLaxCYwu
— DRM Vadodara (@DRMBRCWR) July 13, 2022
ಈ ಬಗ್ಗೆ ಸತ್ಯಂ ಗಧ್ವಿ ಟ್ವೀಟ್ ಮಾಡಿದ್ದು, ನಾನು ಬುಕ್ ಮಾಡಿದ ರೈಲು ಏಕತಾ ನಗರದಿಂದ ಹೊರಡಬೇಕಿತ್ತು. ಆದರೆ ಮಳೆಯಿಂದಾಗಿ ಹಳಿಗಳು ಕೊಚ್ಚಿಹೋಗಿದ್ದರಿಂದ ಕೊನೆಯ ಕ್ಷಣದಲ್ಲಿ ರೈಲನ್ನು ರದ್ದುಗೊಳಿಸಲಾಯಿತು. ಆದರೆ ಏಕತಾ ನಗರದ ಅತ್ಯಂತ ಸಹಾಯಕ ಸಿಬ್ಬಂದಿಯಿಂದಾಗಿ ಅವರು ನನಗೆ ಕಾರನ್ನು ಬಾಡಿಗೆಗೆ ನೀಡಿದರು. ರೈಲ್ವೆಯ ಪ್ರತಿಯೊಬ್ಬ ಪ್ರಯಾಣಿಕರಿಗೆ ಅವರು ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ ಎಂಬುದರಲ್ಲೇ ಅರ್ಥವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಲ್ಲೆಗೊಳಗಾಗಿದ್ದ ಮಾಜಿ ಕಾರ್ಪೋರೇಟರ್ ಪತಿ ಆಯುಬ್ ಖಾನ್ ನಿಧನ