– ಡ್ರಗ್ಸ್ ಮುಕ್ತ ತಮಿಳುನಾಡಿಗೆ ಶಪಥ
ಚೆನ್ನೈ: 200 ಯೂನಿಟ್ ಉಚಿತ ವಿದ್ಯುತ್ (Free Electricity) ಹಾಗೂ ಮಹಿಳೆಯರಿಗೆ ವಿಶೇಷ ಕಾರ್ಯಪಡೆ ರಚಿಸುವುದಾಗಿ ತಮಿಳುನಾಡಿನ ನೂತನ ಸಿಎಂ ವಿಜಯ್ (Vijay) ಗ್ಯಾರಂಟಿ (Guarantee) ಘೋಷಣೆ ಮಾಡಿದ್ದಾರೆ.
ತಮಿಳುನಾಡು (Tamil Nadu) ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಈ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಗೃಹ ಬಳಕೆದಾರರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಕಡತಕ್ಕೆ ವಿಜಯ್ ಸಹಿ ಹಾಕಿದ್ದಾರೆ. ಈ ಸಂದರ್ಭ ಮಹಿಳೆಯರ ರಕ್ಷಣೆಗಾಗಿ ವಿಶೇಷ ಪಡೆ ರಚಿಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ – ಕುರ್ಚಿ ಕಿತ್ತಾಟಕ್ಕೆ ಮೋದಿ ಲೇವಡಿ
ಪ್ರಮಾಣವಚನ ಸ್ವೀಕಾರ ಬಳಿಕ ಮಾತನಾಡಿದ ವಿಜಯ್, ನಾನು ಯಾವುದೇ ರಾಜಮನೆತನದಿಂದ ಬಂದಿಲ್ಲ. ನಾನು ಕೂಡ ಕಷ್ಟವನ್ನು ಅನುಭವಿಸಿದ್ದೇನೆ. ಜನರೇ ನನ್ನನ್ನು ಆರಿಸಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ನಾನು ಮೋಸ ಮಾಡಲ್ಲ ಎಂದರು. ಇದನ್ನೂ ಓದಿ: ಡಿಎಂಕೆ ಸರ್ಕಾರದಿಂದ 10 ಲಕ್ಷ ಕೋಟಿ ಸಾಲದ ಹೊರೆ: ಮೊದಲ ಭಾಷಣದಲ್ಲಿ ಗುಡುಗಿದ ವಿಜಯ್
ತಮಿಳುನಾಡು ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡುತ್ತೇನೆ. ಜನರ ಒಂದು ಪೈಸೆಯನ್ನೂ ಮುಟ್ಟಲ್ಲ. ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸ್ವಲ್ಪ ಸಮಯ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ‘ದಳಪತಿ’ ಯುಗಾರಂಭ – ಸಿಎಂ ಆಗಿ ವಿಜಯ್ ಪ್ರಮಾಣವಚನ

