ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಆಂಧ್ರಪ್ರದೇಶದಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ತಿರುಪತಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
Advertisement
At Kapilatheertham falls pic.twitter.com/xZUMjGAiyU
— GoTirupati (@GoTirupati) November 18, 2021
Advertisement
ನಗರದಲ್ಲಿ ಎಲ್ಲಿ ನೋಡಿದರೆ ಅಲ್ಲಿ ನೀರು ನದಿಯಂತೆ ಹರಿಯುತ್ತಿದೆ. ತಿರುಪತಿ ಬೆಟ್ಟದಿಂದ ಜಲಾಪಾತದಂತೆ ಮಳೆ ನೀರು ಉಕ್ಕಿ ಹರಿಯುತ್ತಿದೆ. ಅಲ್ಲದೇ ರಸ್ತೆಯಲ್ಲಿ ನಿಂತಿದ್ದ ಆಟೋಗಳು, ಕಾರು ಇನ್ನಿತರ ವಾಹನಗಳು ತರಗೆಲೆಯಂತೆ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಪ್ರವಾಹ ಪರಿಸ್ಥಿತಿ ಉಂಟಾಗಿರುವ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಜನರು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಸೋನಿಯಾ ಮಗಳು, ಉಪೇಂದ್ರ ಪತ್ನಿ ಹೆಸರು ಪ್ರಿಯಾಂಕಾ ಆದ್ರೆ ಖರ್ಗೆ ಪುತ್ರ ಯಾವ ಪ್ರಿಯಾಂಕ: ಪ್ರತಾಪಸಿಂಹ ಪ್ರಶ್ನೆ
Advertisement
#Floodwater flowing into #Tirupati Kapilatheertham #RedAlert #Tirupatirains #JawadEffect #JawadCyclone #Jawad #Heavyrains pic.twitter.com/5qlYPZeyjf
— Shetpally Raju (@Shetpally0203) November 18, 2021
Advertisement
ಆಂಧ್ರದ ಚಿತ್ತೂರ್ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಲ್ಲದೇ ತಿರುಪತಿ, ತಿರುಮಲ ಮತ್ತು ಇತರೆ ಪ್ರದೇಶಗಳಲ್ಲಿ ಮಳೆ ನೀರಿನ ಮಟ್ಟ ಹೆಚ್ಚುತ್ತಿದೆ. ವಾಹನಗಳು ಕೊಚ್ಚಿ ಹೋಗುತ್ತಿರುವ, ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಬಸ್ ಮುಳುಗಿರುವ ಹಾಗೂ ತಿರುಮಲ ಬೆಟ್ಟದ ಕಪಿಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಳೆ ನೀರು ಚಿಮ್ಮುತ್ತಿರುವ ದೃಶ್ಯಗಳಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಭಾರೀ ಮಳೆ- ಬೆಂಗಳೂರು ಸೇರಿ 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ, ಅಲರ್ಟ್ ಆಗಿರಲು 13 ಜಿಲ್ಲೆಗಳಿಗೆ ಸೂಚನೆ
ಭಾರೀ ಮಳೆಗೆ ಸಂಬಂಧಿಸಿದಂತೆ ನೆಲ್ಲೂರು, ಚಿತ್ತೂರ್, ಕಡಪ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸಭೆಯನ್ನು ಕರೆದು ಜನರ ಸುರಕ್ಷತೆ ಜೊತೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.