ತಿರುನಂತಪುರಂ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕರೂ ಆಗಿರುವ ತಿರುವನಂಚೂರು ರಾಧಾಕೃಷ್ಣನ್ (Thiruvanchoor Radhakrishnan) ಶುಕ್ರವಾರ (ಇಂದು) ಕೇರಳಂ 16ನೇ ವಿಧಾನಸಭೆಗೆ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
Keralam Speaker election | Pro-tem Speaker G Sudhakaran says, “Thiruvanchoor Radhakrishnan (Congress MLA) is hereby declared elected as the Speaker of the 16th Kerala Legislative Assembly. He secured 101 votes.” https://t.co/rBzIpKG4q1
— ANI (@ANI) May 22, 2026
ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ (G Sudhakaran) ಮತ ಚಲಾಯಿಸದ ಕಾರಣ ರಾಧಾಕೃಷ್ಣನ್ 101 ಮತಗಳನ್ನ ಪಡೆದು ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದರು. ಇದನ್ನೂ ಓದಿ: ಹೆದ್ದಾರಿಯಲ್ಲಿ ಸಿಸಿಟಿವಿ ಅಳವಡಿಸಿ ಸೇನೆಯ ಚಲನವಲನ ಪಾಕಿಸ್ತಾನಕ್ಕೆ ರವಾನೆ – ಪಂಜಾಬ್ ವ್ಯಕ್ತಿ ಅರೆಸ್ಟ್
140 ಸದಸ್ಯರಲ್ಲಿ ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ ಚುನಾವಣಾ ಅಧಿಕಾರಿ ಆಗಿದ್ದ ಕಾರಣ ಮತದಾನದಿಂದ ದೂರ ಉಳಿದಿದ್ದರು. ಚಲಾವಣೆಯಾದ 139 ಮತಗಳಲ್ಲಿ, ಯುಡಿಎಫ್‌ನಿಂದ ಕಣಕ್ಕಿಳಿದ ರಾಧಾಕೃಷ್ಣನ್ 101 ಮತಗಳನ್ನು ಪಡೆದು ಸ್ಪೀಕರ್ ಆಗಿ ಆಯ್ಕೆಯಾದರು. ಎಲ್‌ಡಿಎಫ್‌ನ ಎಸಿ ಮೊಯ್ದೀನ್ 35 ಮತಗಳನ್ನು ಪಡೆದರೆ, ಬಿಜೆಪಿಯ ಬಿಬಿ ಗೋಪಕುಮಾರ್ 3 ಮತಗಳನ್ನ ಪಡೆದು ನಿರಾಸೆ ಅನುಭವಿಸಿದರು. ಇದನ್ನೂ ಓದಿ: ಕೇರಳ ವಿಧಾನಸಭೆಯಲ್ಲಿ ಕನ್ನಡ ಡಿಂಡಿಮ – ಎಕೆಎಂ ಅಶ್ರಫ್ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ!
#WATCH | Keralam CM VD Satheesan met newly elected Assembly Speaker Thiruvanchoor Radhakrishnan at his office in Thiruvananthapuram.
(Source: CMO) pic.twitter.com/wz6WVHsYeW
— ANI (@ANI) May 22, 2026
76 ವರ್ಷದ ರಾಧಾಕೃಷ್ಣನ್ 1991 ರಿಂದ ವಿಧಾನಸಭೆಯ ಸದಸ್ಯರಾಗಿದ್ದಾರೆ. 8 ಬಾರಿ ಶಾಸಕರಾಗಿರುವ ಅವರು 2011-2016 ರಲ್ಲಿ ಉಮ್ಮನ್ ಚಾಂಡಿ ಸರ್ಕಾರದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಸಚಿವಾಲಯದ ಉಳಿದ ಅವಧಿಗೆ ಅರಣ್ಯ, ಸಾರಿಗೆ, ಕ್ರೀಡೆ, ಸಿನಿಮಾ ಮತ್ತು ಪರಿಸರ ಖಾತೆಗಳನ್ನ ನಿರ್ವಹಿಸಿದ್ದಾರೆ.
2026 ರ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಾಯಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಸುಮಾರು 36,000 ಮತಗಳ ಅಂತರದಿಂದ ಗೆದ್ದಿದ್ದರು. ಚುನಾವಣಾ ಅಫಿಡವಿಟ್ ಪ್ರಕಾರ, ರಾಧಾಕೃಷ್ಣನ್ ಅವರ ಒಟ್ಟು ಆಸ್ತಿ ಮೌಲ್ಯ 3 ಕೋಟಿ ರೂಪಾಯಿ. ಇದರಲ್ಲಿ 12.8 ಲಕ್ಷದಷ್ಟು ಸಾಲ ಹೊಂದಿದ್ದಾರೆ. ವಾರ್ಷಿಕ ಆದಾಯ 10.1 ಲಕ್ಷ ರೂ. ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಪಶ್ಚಿಮ ಬಂಗಾಳದ ಮದರಸಾಗಳಲ್ಲೂ ವಂದೇ ಮಾತರಂ ಕಡ್ಡಾಯ

