ಐಪಿಎಲ್ ಕ್ರಿಕೆಟ್ ಪ್ರೇಮಿಗಳಲ್ಲಿ ಮೈ ರೋಮಾಂಚನಗೊಳಿಸುವ ಆಟ. ಕಡಿಮೆ ಎಸೆತಗಳಲ್ಲಿ ಹೆಚ್ಚು ಹೆಚ್ಚು ರನ್ ಹೊಳೆ ಹರಿಯುವ ಕ್ರಿಕೆಟ್ ಮಾದರಿಯಾಗಿರುವ ಟಿ ಟ್ವೆಂಟಿ. ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಹೋಲಿಸಿಕೊಂಡರೆ ವೇಗವಾಗಿ ಮುಗಿಯುವ ಈ ಕ್ರಿಕೆಟ್ ಮಾದರಿಯಲ್ಲಿ ಹಲವಾರು ಪ್ರತಿಷ್ಠಿತ ಟೂರ್ನಿಗಳು ಕೂಡ ಆಯೋಜನೆಯಾಗಿವೆ.
Advertisement
2003ರಲ್ಲಿ ಆರಂಭಗೊಂಡ ಐಪಿಎಲ್ ಪಂದ್ಯಗಳಲ್ಲಿ 200 ರನ್‍ಗಳ ಗಡಿ ದಾಟಿದ ಉದಾಹರಣೆಗಳು ಇವೆ. ಅದೇ ರೀತಿ ಅಲ್ಪ ಮೊತ್ತ ಕಲೆಹಾಕಿದ ಕೆಟ್ಟ ದಾಖಲೆಗಳೂ ಇವೆ. ಆದರೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಹಾಗೂ ಅತಿ ಕಡಿಮೆ ರನ್ ಕಲೆಹಾಕಿರುವ ತಂಡ ಎಂಬ ದಾಖಲೆಯ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ಇಂದಿಗೂ ಮೊದಲ ಸ್ಥಾನದಲ್ಲಿದೆ. ಇದನ್ನೂ ಓದಿ: ಸಿಎಸ್‍ಕೆ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ
Advertisement
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
2013ರ ಐಪಿಎಲ್ ಆವೃತ್ತಿಯಲ್ಲಿ ಪುಣೆ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‍ಗಳ ಅಂತ್ಯಕ್ಕೆ 263 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಮಿಂಚಿನ ಆಟವಾಡಿದ ಕ್ರಿಸ್‍ಗೇಲ್ 66 ಎಸೆತಗಳಲ್ಲಿ 175 ರನ್ ಗಳಿಸಿದರೆ ವಿರಾಟ್‍ಕೊಹ್ಲಿ 36 ಎಸೆತಗಳಲ್ಲಿ 33 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಂತರ ಬ್ಯಾಟಿಂಗ್ ಪ್ರಾರಂಭಿಸಿದ ಪುಣೆ ವಾರಿಯರ್ಸ್ 133 ರನ್‍ಗಳಿಗೆ ಆಲ್‍ಔಟ್ ಆಯಿತು. ಆರ್‌ಸಿಬಿ 130 ರನ್‍ಗಳ ಭರ್ಜರಿ ಜಯ ಸಾಧಿಸಿತ್ತು. 2016ರ ಆವೃತ್ತಿಯಲ್ಲೂ ಆರ್‌ಸಿಬಿ 248 ರನ್‍ಗಳನ್ನು ಕಲೆಹಾಕುವ ಮೂಲಕ ಐಪಿಎಲ್ ಸರಣಿಯ ಅತ್ಯಧಿಕ ರನ್‍ಗಳಿಸಿದ ತಂಡದ ಖ್ಯಾತಿ ಪಡೆಯಿತು.
Advertisement
Advertisement
ಚೆನ್ನೈ ಸೂಪರ್ ಕಿಂಗ್ಸ್(CSK)
2010ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 246 ರನ್‍ಗಳಿಸುವ ಮೂಲಕ ದಾಖಲೆ ಮಾಡಿತ್ತು. ರಾಜಸ್ತಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುರಳಿ ವಿಜಯ್ 56 ಎಸೆತಗಳಲ್ಲಿ 127 ರನ್‍ಗಳಿಸುವ ಮೂಲಕ ಪಂದ್ಯಶ್ರೇಷ್ಠರಾಗಿದ್ದರು. ಈ ಗುರಿ ಬೆನ್ನತ್ತಿದ ರಾಜಾಸ್ತಾನ್ ರಾಯಲ್ಸ್ ತಂಡವು 223ರನ್ ಗಳನ್ನು ಪೇರಿಸಿತ್ತು. 246 ರನ್‍ಗಳಿಸಿದರೂ ಸಿಎಸ್‍ಕೆ 23 ರನ್‍ಗಳ ಅಂತರದಲ್ಲಷ್ಟೇ ಗೆಲುವು ಸಾಧಿಸಲು ಸಾಧ್ಯವಾಯಿತು. ಇದನ್ನೂ ಓದಿ: ಈ ಸಲ ಕಪ್ ನಮ್ದೆ – ಆರ್ಸಿಬಿಗೆ ಹರುಷ ತುಂಬಿದ ಹೊಸ ಸ್ಫೂರ್ತಿ ಗೀತೆ
ಕೋಲ್ಕತ್ತಾ ನೈಟ್ ರೈಡರ್ಸ್ (KKR)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 2018ನೇ ಐಪಿಎಲ್ ಆವೃತ್ತಿಯಲ್ಲಿ ಅತಿಹೆಚ್ಚು ರನ್‍ಗಳಿಸಿದ ತಂಡವಾಗಿ ಹೊರಹೊಮ್ಮಿತ್ತು. ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡ ಕೆಕೆಆರ್ 245 ರನ್‍ಗಳ ಗುರಿ ನೀಡಿತ್ತು. ಇದರ ಬೆನ್ನತ್ತಿದ ಪಂಜಾಬ್ ತಂಡವು 8 ವಿಕೆಟ್‍ಗ ನಷ್ಟಕ್ಕೆ 214 ರನ್‍ಗಳಿಸಿ ಕೆಕೆಆರ್‍ಗೆ ಮಂಡಿಯೂರಿತು. ಸುನೀಲ್ ನರೇನ್ 36 ಎಸೆತಗಳಲ್ಲಿ 75 ರನ್‍ಗಳಿಸಿದ್ದರು. ಅಲ್ಲದೆ, ಬೌಲಿಂಗ್‍ನಲ್ಲೂ ಒಂದು ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠರಾಗಿದ್ದರು.
ಮುಂಬೈ ಇಂಡಿಯನ್ಸ್ (MI)
2021ನೇ ಐಪಿಲ್ ಆವೃತ್ತಿಯಲ್ಲಿ ರೋಹಿತ್‍ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಸನ್‍ರೈಸಸ್ ಹೈದ್ರಾಬಾದ್ 9 ವಿಕೆಟ್‍ಗಳ ನಷ್ಟಕ್ಕೆ 235 ರನ್‍ಗಳಿಸಿತ್ತು. ಈ ಪಂದ್ಯದಲ್ಲಿ ಇಶಾನ್‍ಕಿಶನ್ 32 ಎಸೆತಗಳಲ್ಲಿ 84 ರನ್‍ಗಳಿಸಿದರೆ ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 82 ರನ್‍ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣವಾಗಿತ್ತು. ಆದೆರೆ, ಹೈದ್ರಾಬಾದ್ ತಂಡವು 8 ವಿಕೆಟ್ ನಷ್ಟಕ್ಕೆ 193 ರನ್‍ಗಳನ್ನು ಕಲೆಹಾಕಿತ್ತು. ಹಾಗಾಗಿ ಮುಂಬೈ ತಂಡವು 42 ರನ್‍ಗಳ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಯಿತು.
ಕಿಂಗ್ಸ್ ಇಲವೆನ್ ಪಂಜಾಬ್ (KIIP)
2011ರ ಐಪಿಲ್ ಆವೃತ್ತಿಯಲ್ಲಿ ಆರ್‍ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ಕೇವಲ 2 ವಿಕೆಟ್‍ಗಳನ್ನು ಕಳೆದುಕೊಂಡು 232 ರನ್‍ಗಳಿಸುವ ಮೂಲಕ ದಾಖಲೆ ಬರೆದಿತ್ತು. ಆಸ್ಟ್ರೇಲಿಯಾ ಕ್ರಿಕೆಟಿಗ ಆಡಂ ಗಿಲ್‍ಕ್ರಿಸ್ಟ್ 55 ಎಸೆತಗಳಿಗೆ 106 ಪೇರಿಸಿ ಪಂದ್ಯಶ್ರೇಷ್ಠರಾಗಿದ್ದರು. ಆದರೆ, ಆರ್‍ಸಿಬಿ 17ನೇ ಓವರ್‍ಗೆ 121 ರನ್‍ಗಳಿಸುವ ಮೂಲಕ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತ್ತು. 111 ರನ್‍ಗಳ ಭಾರೀ ರನ್‍ಗಳ ಅಂತರದಿಂದ ಪಂಜಾಬ್ ಗೆಲುವು ಸಾಧಿಸಿತ್ತು.