ವಿಜಯಪುರ: ಪಂಚನದಿಗಳ ಬೀಡು ಎಂದೇ ಹೆಸರಾಗಿರುವ ವಿಜಯಪುರ (Vijayapura) ಜಿಲ್ಲೆಯಲ್ಲಿ ಇದೀಗ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಆಲಮಟ್ಟಿ ಜಲಾಶಯದಲ್ಲಿ (Almatti Dam) ಕೇವಲ 9 ಟಿಎಂಸಿ ನೀರಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಜಿಲ್ಲೆಯ ಜನರು ನೀರಿಗಾಗಿ ಕೃಷ್ಣಾ ನದಿ (Krishna River) ಮೇಲೆ ಅವಲಂಬಿತರಾಗಿದ್ದಾರೆ. ಪಕ್ಕದ ಬಾಗಲಕೋಟೆ (Bagalkote) ಜಿಲ್ಲೆ ಕೂಡ ಕೃಷ್ಣಾ ನದಿ ಮೇಲೆ ಅವಲಂಬಿತವಾಗಿದೆ. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗೆ ಆಲಮಟ್ಟಿ ಜಲಾಶಯದಿಂದಲೇ ನೀರು ಸಪ್ಲೈ ಆಗುತ್ತದೆ. ಆದರೆ ಸದ್ಯ ಜಲಾಶಯದಲ್ಲಿ 9 ಟಿಎಂಸಿ ನೀರು ಮಾತ್ರ ಬಳಕೆಗೆ ಸಂಗ್ರಹವಿದ್ದು, ಇಷ್ಟರಲ್ಲಿಯೇ ಜೂನ್ ತಿಂಗಳು ಕೂಡ ಕಳೆಯಬೇಕಾಗಿದೆ. ಇದರಿಂದ ಅವಳಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ – ಯಾರಿದು ಅಭಿಜಿತ್ ದಿಪ್ಕೆ?
ಈಗಾಗಲೇ ಜಿಲ್ಲೆಯಲ್ಲಿ ಕೆಲವು ಕಡೆ ವಾರಕೊಮ್ಮೆ ನೀರು ಬಂದ್ರೆ, ಕೆಲವೆಡೆ 15 ದಿನಕ್ಕೆ ನೀರು ಬರ್ತಿವೆ. ಇನ್ನು ಜಿಲ್ಲೆಯಲ್ಲಿ ಬಿಸಿಲು ಕೂಡ ಹಿಂದೆಂದು ಕಂಡರಿಯದಂತೆ ಹೆಚ್ಚಿದೆ. ಇದರಿಂದ ಬಾಷ್ಟೀಕರಣ ಕೂಡ ಈ ಬಾರಿ ಹೆಚ್ಚಾಗಿದೆ. ಇನ್ನೂ ಈ ಬಾರಿ ಜೂ.15ರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಇನ್ನೊಂದು ತಿಂಗಳು 9 ಟಿಎಂಸಿ ನೀರಿನಲ್ಲೇ ಜನರು, ಜಾನುವಾರುಗಳು ಜೀವನ ನಡೆಸಬೇಕಿದೆ.
ಇತ್ತ ಜಿಲ್ಲೆಯ ಭೀಮಾ ನದಿ ಕೂಡ ಸಂಪೂರ್ಣ ಖಾಲಿ ಆಗಿದ್ದು, ಒಂದು ವೇಳೆ ಜೂನ್‌ನಲ್ಲಿ ಮಳೆ ಆಗದಿದ್ರೆ ಅವಳಿ ಜಿಲ್ಲೆಯಲ್ಲಿ ನೀರಿಗಾಗಿ ಬಡಿದಾಟ ಶುರುವಾಗಲಿದೆ.ಇದನ್ನೂ ಓದಿ: ವಿವಿಧ ಅಭಿವೃದ್ದಿ ನಿಗಮ ನೇಮಕಾತಿಗೆ ಅರ್ಜಿ ಆಹ್ವಾನ – ಕೆಇಎ

