Bengaluru CityDistrictsKarnatakaLatestMain Post

ನಮ್ಮ ಮನೆ ಎಕ್ಸ್ ಪೋ 4ನೇ ಆವೃತ್ತಿಗೆ ಎರಡನೇ ದಿನವು ಭರ್ಜರಿ ರೆಸ್ಪಾನ್ಸ್

ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ನಮ್ಮ ಮನೆ ರಿಯಲ್ ಎಸ್ಟೇಟ್ ಎಕ್ಸ್ ಪೋ 4ನೇ ಆವೃತ್ತಿಯ ಎರಡನೇ ದಿನವು ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಮಲ್ಲೇಶ್ವರಂ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆಯುತ್ತಿರುವ ಎಕ್ಸ್ ಪೋಗೆ ಇಂದು ತೆರೆ ಬೀಳಲಿದೆ. ಮೊದಲ ದಿನವೇ ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಎಕ್ಸ್ ಪೋಗೆ ಭೇಟಿ ನೀಡಿ ತಮ್ಮ ನೆಚ್ಚಿನ ಸೂರನ್ನು ಹೊಂದುವ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲೇ ಸಾಗಿದ್ದರು, ಅದೇ ರೀತಿ ಇಂದು ಸಹ ನೂರಾರು ಸಂಖ್ಯೆಯಲ್ಲಿ ಜನ ಎಕ್ಸ್ ಪೋಗೆ ಆಗಮಿಸುತ್ತಿದ್ದು ತಮಗೆ ಬೇಕಾದ ಪ್ರಾಪರ್ಟಿಸ್‍ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ಎಕ್ಸ್ ಪೋದಲ್ಲಿ ಭಾಗಿಯಾಗುವ ಪ್ರತಿಯೊಬ್ಬ ಗ್ರಾಹಕರಿಗೂ ಲಕ್ಕಿ ಡ್ರಾಪ್ ಮೂಲಕ ಚಿನ್ನದ ನಾಣ್ಯ ಗೆಲ್ಲುವ ಸುವರ್ಣ ಅವಕಾಶವನ್ನು ಒದಗಿಸಲಾಗಿದೆ. ಪ್ರತಿ ಅರ್ಧ ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಅದೃಷ್ಟ ಗ್ರಾಹಕರನ್ನು ಆಯ್ಕೆ ಮಾಡಲಾಗುವುದು. ಇಷ್ಟೇ ಅಲ್ಲದೆ ಪ್ರಾಪರ್ಟಿ ಖರೀದಿ ಮಾಡುವ ಗ್ರಾಹಕರಿಗೆ ಸಂಸ್ಥೆಗಳಿಂದ ಕಾರು, ಬೈಕ್, ಐ ಫೋನ್ ಸೇರಿದಂತೆ ಅನೇಕ ಹೋಂ ಅಪ್ಲೈಯನ್ಸ್‌ಗಳನ್ನು ಗೆಲ್ಲುವ ಸದಾವಕಾಶ ಸಹ ಇದೆ. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

ಎಕ್ಸ್ ಪೋದಲ್ಲಿ ಧಾತ್ರಿ ಡೆವಲಪರ್ಸ್, ಸ್ಯಾನ್ ಸಿಟಿ, ಸಾಯಿ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್, ರಾಯಲ್ ಪ್ರಾಪರ್ಟಿಸ್, ಟ್ರಿನ್ಕೋ ಇನ್ಫ್ರಾ ಪ್ರೈವೇಟ್ ಲಿಮಿಟೆಡ್, ಯೂನಿಕ್ ರಿಯಾಲಿಟಿಸ್ ಸೇರಿದಂತೆ 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಎಕ್ಸ್ ಪೋದಲ್ಲಿ ಭಾಗಿಯಾಗಿವೆ. ಇದನ್ನೂ ಓದಿ: ಹುತಾತ್ಮ ಯೋಧ ಹರ್ದೀಪ್ ಸಿಂಗ್ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಭಗವಂತ್ ಮಾನ್

Leave a Reply

Your email address will not be published.

Back to top button