ಧಾರವಾಡ: ಪ್ರಸಕ್ತ ವರ್ಷದ ಹಿಂಗಾರು ಬೆಳೆ ಸುಭಿಕ್ಷವಾಗಿದೆ. ಮಳೆ ಚೆನ್ನಾಗಿ ಆಗುತ್ತದೆ ಎಂದು ಕೋಡಿಮಠದ (Kodi Mutt) ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Shivananda Shivayogi Rajendra Swamiji) ಭವಿಷ್ಯ ನುಡಿದಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ಮುಂಗಾರು ಮಳೆ ಆಗುವುದಿಲ್ಲ, ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ಅನ್ನಕ್ಕೆ ಕೊರತೆಯಾಗುತ್ತದೆ, ಜನ ಅಸುನೀಗುತ್ತಾರೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದೆ. ಅದೇ ಪ್ರಕಾರ ಆಗಿದೆ. ಆದರೆ, ಈ ಬಾರಿ ಹಿಂಗಾರು ಮಳೆಯಾಗಲಿದೆ. ಜನರಿಗೆ ಸುಭಿಕ್ಷೆ ಮತ್ತು ನೆಮ್ಮದಿ ಸಿಗಲಿದೆ. ಜಲಚರಗಳಿಗೆ ಒಳ್ಳೆಯದಾಗಲಿದೆ ಎಂದರು. ಇದನ್ನೂ ಓದಿ: ಶೋರೂಮ್ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು – ಬೈಕ್ ಸವಾರರಿಗೆ ಗಂಭೀರ ಗಾಯ
ಅಖಂಡ ಕರ್ನಾಟಕ ಒಂದಾಗಿ ಹೋಗಬೇಕು. ಇದು ಆಗಬೇಕಾದರೆ ಸಾಹಿತ್ಯಿಕ, ಸಾಂಸ್ಕೃತಿಕ ನೆಲೆಗಟ್ಟು, ಜನ ಜೀವನ, ಮಳೆ, ಬೆಳೆ ಚೆನ್ನಾಗಿ ಆಗಬೇಕು. ಆ ದೃಷ್ಟಿಯಿಂದ ಇಂದು ಧಾರವಾಡ ಜಂಬೂ ಸವಾರಿ ನಡೆಯುತ್ತಿದೆ. ಇದು ಅಖಂಡ ರಾಜ್ಯದ ಸಂಸ್ಕೃತಿಯ ಪ್ರತೀಕ. ಮೈಸೂರಿನಲ್ಲಿ ಒಂದು ಹಾಗೂ ಉತ್ತರ ಕರ್ನಾಟಕದಲ್ಲಿ ಈ ಜಂಬೂ ಸವಾರಿಗಳು ಏಕತಾ ಮನೋಭಾವದ ಸಂದೇಶ ನೀಡುತ್ತಿವೆ. ವರ್ಷದಿಂದ ವರ್ಷಕ್ಕೆ ಮನುಷ್ಯನ ಜೀವನ ಉಚ್ಛವಾಗಿದೆ. ಮನುಷ್ಯ ಮನುಷ್ಯನಾಗಿ ಬಾಳಬೇಕಾದರೆ ನಮ್ಮ ಹಿರಿಯರ ಆದರ್ಶ ಮುಖ್ಯವಾದದ್ದು. ಆ ಆದರ್ಶದ ಸಂಕೇತವೇ ಈ ದಸರಾ ಕಾರ್ಯಕ್ರಮ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದಲ್ಲಿ ಪ್ರಭುತ್ವ ಬದಲಾವಣೆಯೇ ಪಾಶ್ಚಿಮಾತ್ಯ ಶಕ್ತಿಗಳ ಅಂತಿಮ ಗುರಿ: ಮೋಹನ್ ಭಾಗವತ್ ಎಚ್ಚರಿಕೆ
ರಾಜ್ಯ ರಾಜಕಾರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಅದರ ಬಗ್ಗೆ ನನಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ. ದೈವ ಕೃಪೆ ಎಲ್ಲರಿಗೂ ಆಗಲಿ. ನಮಗೆ ಬೇಕಾಗಿದ್ದು ಮಳೆ ಬೆಳೆ. ರೋಗ ರುಜಿನಗಳು ದೂರಾಗಿ ಮನುಷ್ಯನಿಗೆ ನೆಮ್ಮದಿ ಬರಬೇಕು, ಶಾಂತಿ ಬರಬೇಕು ಎಂದು ನುಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಗೃಹಜ್ಯೋತಿ ತಿರಸ್ಕರಿಸಿದ 1.10 ಲಕ್ಷ ಜನ
