ಬೆಂಗಳೂರು: ಕರ್ನಾಟಕದ ಗೃಹಜ್ಯೋತಿ (Gruha Jyothi Scheme) ಯೋಜನೆಯನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ 1.10 ಲಕ್ಷ ಜನರು ಸ್ವಯಂಪ್ರೇರಿತರಾಗಿ ಬಿಟ್ಟು ಕೊಟ್ಟಿದ್ದಾರೆ.
200 ಯೂನಿಟ್ ಉಚಿತ ವಿದ್ಯುತ್ ಪಡೆಯುತ್ತಿದ್ದ 1.10 ಲಕ್ಷ ಗ್ರಾಹಕರು ವೈಯಕ್ತಿಕ ದಾಖಲೆ ನೀಡಲು ನಿರಾಕರಿಸಿ ಯೋಜನೆಯಿಂದ ಹೊರನಡೆದಿದ್ದಾರೆ. ಇದನ್ನೂ ಓದಿ: ಸ್ಟಿಂಗ್ ಎಫೆಕ್ಟ್; ತಡರಾತ್ರಿ ಆಪ್ತ ಸಚಿವರ ಜೊತೆ ಸಿಎಂ ಸಭೆ
ಬೆಸ್ಕಾಂ ವ್ಯಾಪ್ತಿಯಲ್ಲಿ 16 ಲಕ್ಷ ಮಂದಿಯ ದಾಖಲೆಗಳು ಇನ್ನು ಲಭ್ಯವಾಗಿಲ್ಲ. ಪರಿಶೀಲನೆಗೆ ತಪ್ಪಿಸಿಕೊಂಡವರು ಅಕ್ಟೋಬರ್ 31 ರೊಳಗೆ ಉಪವಿಭಾಗೀಯ ಕಚೇರಿಗೆ ದಾಖಲೆ ಸಲ್ಲಿಸದಿದ್ದರೆ, ಯೋಜನೆಯಿಂದ ಶಾಶ್ವತವಾಗಿ ಹೊರಗುಳಿಯಲಿದ್ದಾರೆ. ಅಕ್ಟೋಬರ್ ನಂತರ ಅವಧಿ ವಿಸ್ತರಣೆ ಅನುಮಾನ ಅಂತಾ ಇಲಾಖೆ ಮಾಹಿತಿ ನೀಡಿದೆ.
