ಬೆಂಗಳೂರು: ರಾಜ್ಯದಲ್ಲಿ ‘ಸ್ಟಿಂಗ್ ಆಪರೇಷನ್’ (Sting Operation) ಸುದ್ದಿ ಸದ್ದು ಮಾಡುತ್ತಿರುವ ಹೊತ್ತಲ್ಲೇ, ತಡರಾತ್ರಿ ಆಪ್ತ ಸಚಿವರ ಜೊತೆ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸಭೆ ನಡೆಸಿದ್ದಾರೆ.
ಸ್ಟಿಂಗ್ ಪ್ರಕರಣದ ಆರೋಪದಿಂದ ಸರ್ಕಾರ ಹಾಗೂ ಪಕ್ಷಕ್ಕೆ ಆದ ಡ್ಯಾಮೇಜ್ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಡ್ಯಾಮೇಜ್ ಕಂಟ್ರೋಲ್ ಜೊತೆಗೆ ರಾಜಕೀಯ ತಿರುಗೇಟಿನ ಬಗ್ಗೆಯೂ ಸಚಿವರ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 2023ರಲ್ಲಿ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಆಗಿದೆ – ಹೆಚ್ಡಿಕೆ ಹೊಸ ಬಾಂಬ್
ಸುಮಾರು 2 ಗಂಟೆಗಳ ಕಾಲ ಸಚಿವರ ಜೊತೆ ಸಿಎಂ ಸುದೀರ್ಘ ಚರ್ಚೆ ನಡೆಸಿದ್ದಾರೆ. ಕುಮಾರಕೃಪ ರಸ್ತೆಯ ಸಿಎಂ ಸರ್ಕಾರಿ ನಿವಾಸದಲ್ಲಿ ತಡರಾತ್ರಿ ಸಚಿವರ ಸಭೆ ನಡೆದಿದೆ.
ಯಾರ್ಯಾರು ಸಚಿವರು ಭಾಗಿ?
ಸಚಿವರಾದ ಕೆ.ಹೆಚ್.ಮುನಿಯಪ್ಪ, ಚಲುವರಾಯಸ್ವಾಮಿ, ಹೆಚ್.ಸಿ.ಬಾಲಕೃಷ್ಣ, ರಿಜ್ವಾನ್ ಅರ್ಷದ್, ಜಮೀರ್ ಅಹಮ್ಮದ್, ಕೃಷ್ಣ ಬೈರೇಗೌಡ, ಶಿವಲಿಂಗೇಗೌಡ, ರಾಮಲಿಂಗಾ ರೆಡ್ಡಿ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹೆಚ್ಡಿಕೆಯಿಂದ ಸ್ಟಿಂಗ್ ಆಪರೇಷನ್ ರೂವಾರಿ, ರೌಡಿಶೀಟರ್ ಫೋಟೋ ರಿಲೀಸ್
