ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ ‘ದಿ ಕಾಶ್ಮೀರ್ ಫೈಲ್ಸ್’ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು. ದೇಶಕ್ಕೆ ದೇಶವೇ ಈ ಸಿನಿಮಾದ ಬೆನ್ನಿಗೆ ನಿಂತಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಈ ಸಿನಿಮಾದ ಬಗ್ಗೆ ಒಲವು ತೋರಿ, ತೆರಿಗೆ ವಿನಾಯಿತಿಯನ್ನೂ ಘೋಷಣೆ ಮಾಡಿದ್ದರು. ಹೀಗಾಗಿ ದೇಶಾದ್ಯಂತ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತು. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ಶ್ವಾನ ನಿಧನ
Advertisement
ಇದೀಗ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸಿಂಗಾಪುರದಲ್ಲಿ ಪ್ರದರ್ಶಿಸಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಅದಕ್ಕೆ ಇನ್ಫೋಕಾಮ್ ಮಿಡಿಯಾ ಡೆವಲಪ್ ಮೆಂಟ್ ಅಥಾರಿಟಿ, ಸಂಸ್ಕೃತಿ, ಸಮುದಾಯ ಮತ್ತು ಯುವ ಸಚಿವಾಲಯ ಹಾಗೂ ಗೃಹ ಸಚಿವಾಲಯ ಇದಕ್ಕೆ ಸಮ್ಮತಿ ಸೂಚಿಸಿಲ್ಲ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಅಧಿಕಾರಿಗಳು ಮೌಲ್ಯಮಾಪನ ಮಾಡಲಾಗಿದ್ದು, ಇದು ಪ್ರದರ್ಶನಕ್ಕೆ ಯೋಗ್ಯವಾದ ಚಿತ್ರವಲ್ಲ ಎಂಬ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಪ್ರದರ್ಶನಕ್ಕೆ ನಿರಾಕರಿಸಲಾಗಿದೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ
Advertisement
Advertisement
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವರ್ಗೀಕರಣ ಮಾರ್ಗಸೂಚಿಯನ್ನೂ ಮೀರಿದೆ. ಏಕಮುಖವಾಗಿ ಚಿತ್ರೀಕರಿಸಲಾಗಿದೆ. ಅಲ್ಲದೇ, ಪ್ರಚೋದನಕಾರಿ ಆಗುವಂತಹ ಸಾಕಷ್ಟು ಅಂಶಗಳನ್ನು ಈ ಸಿನಿಮಾ ಹೊಂದಿದೆ. ಸಂಘರ್ಷಕ್ಕೆ ಕಾರಣವಾಗುವ ಅಂಶಗಳು ಈ ಸಿನಿಮಾದಲ್ಲಿ ಇರುವುದರಿಂದ ಚಿತ್ರ ಪ್ರದರ್ಶನಕ್ಕೆ ನಿರಾಕರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ ಎಂದು ವರದಿಗಳು ಬಹಿರಂಗವಾಗಿವೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ
Advertisement
1990ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಹಿಂದೂಗಳ ಮಾರಣಹೋಮ ಕುರಿತಾದ ಸಿನಿಮಾ ಇದಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆಯನ್ನು ಪ್ರಮುಖವಾಗಿ ಇಟ್ಟುಕೊಂಡು ತಯಾರಿಸಲಾದ ಚಿತ್ರ ಇದಾಗಿದ್ದು, ಇದೊಂದು ನೈಜಘಟನೆಯನ್ನು ಆಧರಿಸಿದ ಚಿತ್ರವೆಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಹೀಗಾಗಿಯೇ ಸಿಂಗಾಪುರ ದೇಶದ ಸಿನಿಮಾ ನಿಯಮಾವಳಿಗಳಿಗೆ ಈ ಚಿತ್ರ ವಿರುದ್ಧವಾಗಿದೆ ಎಂದು ವರದಿ ನೀಡಲಾಗಿದೆಯಂತೆ.