ಕಿರುತೆರೆಯ ಪ್ರತಿಷ್ಠಿತ ಶೋ ಕಾಮಿಡಿ ವಿತ್ ಕಪಿಲ್ ಶೋ (The Kapil Show)ನಲ್ಲಿ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಫೋಟೋವನ್ನು ಸಾನಿಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಸಾನಿಯಾ ಡಿವೋರ್ಸ್ ಕುರಿತಂತೆ ಮಾತನಾಡಲಿದ್ದಾರಾ ಎನ್ನುವ ಕುತೂಹಲ ಮೂಡಿದೆ.
ಸಾನಿಯಾ ಮಿರ್ಜಾ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚೆಗಷ್ಟೇ ಪಾಕ್ನ ನಟಿ ಸನಾ ಜಾವೇರದ್ ಅವರನ್ನು ಮದುವೆಯಾಗಿದ್ದರು. ನಟಿ ಸನಾ ಜಾವೇದ್ ಅವರೊಂದಿಗೆ ವಿವಾಹವಾಗಿರುವ ಫೋಟೋಗಳನ್ನು ಸ್ವತಃ ಮಲಿಕ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಕಳೆದ ಕೆಲ ದಿನಗಳಿಂದ ಶೋಯಬ್ ಮಲ್ಲಿಕ್ ಹಾಗೂ ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿಗಳು ಹರಿದಾಡುತ್ತಿತ್ತು. ಸಾನಿಯಾ ಹಾಗೂ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಸಾನಿಯಾ ಭಾರತೀಯಳಾಗಿದ್ದು (Indian), ಶೋಯೇಬ್ ಪಾಕಿಸ್ತಾನಿ (Pakistani) ಎಂಬ ವಿಚಾರಕ್ಕೆ ವಿವಾದವೂ ಉಂಟಾಗಿತ್ತು.
ಶೋಯೆಬ್ ಮದುವೆಯಾದ ಸನಾ ಜಾವೇದ್ ಸಹ ವಿಚ್ಛೇದನ ಪಡೆದವರಾಗಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಖ್ಯಾತ ನಟಿಯರಲ್ಲಿ ಒಬ್ಬರಾದ ಸನಾ ಜಾವೇದ್ ಅವರು 2020 ರಲ್ಲಿ ಉಮೈರ್ ಜಸ್ವಾಲ್ ಎಂಬವರನ್ನ ವಿವಾಹವಾಗಿದ್ದರು.