Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ: ಬೊಮ್ಮಾಯಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ: ಬೊಮ್ಮಾಯಿ

Bengaluru City

ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ: ಬೊಮ್ಮಾಯಿ

Public TV
Last updated: May 17, 2022 11:18 pm
Public TV
Share
3 Min Read
Basavaraj Bommai 1 1
SHARE

ಬೆಂಗಳೂರು: ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ. ರಸ್ತೆ, ಗಣಿಗಾರಿಕೆ, ಸೇತುವೆ ನಿರ್ಮಾಣ ಸೇರಿದಂತೆ ಎಲ್ಲಾ ವಲಯಗಳಲ್ಲಿ ಮೂಲಸೌಲಭ್ಯದಿಂದ ದೊಡ್ಡ ಬದಲಾವಣೆ ತರಬಹುದಾಗಿದ್ದು, ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ, ಯಂತ್ರೋಪಕರಣಗಳು ಬಂದಿವೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಿಎಂ ಬೊಮ್ಮಾಯಿ ಬೆಂಗಳೂರಿನ ಬಿಐಇಸಿಯಲ್ಲಿ ಮಂಗಳವಾರ ಆರಂಭವಾದ ಕಟ್ಟಡ ನಿರ್ಮಾಣ ಸಲಕರಣೆಗಳ ಎಕ್ಸ್ಕಾನ್ 2022 ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಕಂಪನಿಗಳ ನಾವೀನ್ಯತೆ, ಹೊಸ ಚಿಂತನೆಗಳ ವಿಚಾರ ವಿನಿಮಯ ಮಾಡಿಕೊಳ್ಳಲು ಎಕ್ಸ್ಕಾನ್ 2022 ವಸ್ತು ಪ್ರದರ್ಶನ ಸೂಕ್ತ ವೇದಿಕೆಯಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲಿಚ್ಛಿಸುವ ಉದ್ದಿಮೆಗಳಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.

Basavaraj Bommai

ಐಟಿಬಿಟಿ, ಸ್ಟಾರ್ಟ್ಅಪ್, ಆರ್‌ಎಂಡಿಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಈ ಅವಕಾಶವನ್ನು ಬಳಸಿಕೊಂಡು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡುವ ಮೂಲಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಸಂಸ್ಥೆಗಳಿವೆ. ಬಿಹೆಚ್‌ಇಎಲ್, ಹೆಚ್‌ಎಎಲ್ ನಂತಹ ಅನೇಕ ಬೃಹತ್ ಸಂಸ್ಥೆಗಳು ರಾಜ್ಯದಲಿದ್ದು, ರಾಜ್ಯದ ಎಕೋಸಿಸ್ಟಂ ಈ ಸಂಸ್ಥೆಗಳು ಕೊಡುಗೆ ನೀಡಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಗರಿಷ್ಟ ಸಂಖ್ಯೆಯ ಸ್ಟಾರ್ಟ್ ಅಪ್‌ಗಳಿವೆ. ದೇಶದ ಶೇ.50 ಕ್ಕಿಂತಲೂ ಹೆಚ್ಚಿನ ಸ್ಟಾರ್ಟ್ ಅಪ್‌ಗಳು ಹಾಗೂ ಯೂನಿಕಾರ್ನ್ಗಳು ರಾಜ್ಯದಲ್ಲಿವೆ. ವಿದೇಶಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. 400ಕ್ಕೂ ಹೆಚ್ಚು ಖಾಸಗಿ ಹಾಗೂ ಸರ್ಕಾರಿ ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿದ್ದು, ಅದರಲ್ಲಿ 180 ಬೆಂಗಳೂರಿನಲ್ಲಿದೆ. ಡಿಆರ್‌ಡಿಒ ಸಂಸ್ಥೆ ರಾಜ್ಯಕ್ಕೆ ಕೊಡುಗೆ ನೀಡಿದೆ. ಸೌರಶಕ್ತಿ ಸಂಗ್ರಹಣೆ, ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ರಾಜ್ಯ ಒತ್ತು ನೀಡುತ್ತಿದೆ. ಕರ್ನಾಟಕವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ನುಡಿದರು. ಇದನ್ನೂ ಓದಿ: ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ಸಕಾಲಿಕ ಅನುಷ್ಠಾನಕ್ಕೆ ಸೂಚನೆ: ಬೊಮ್ಮಾಯಿ

Basavaraj Bommai 6

ಸಂಶೋಧನೆಗಳು ತಳಹಂತದಿಂದ ನಡೆಯಬೇಕು: ಹಣದಿಂದ ಹಣ ಬರುವುದಿಲ್ಲ. ದುಡಿಮೆಯಿಂದ ಹಣ ಬರುತ್ತದೆ. ದುಡಿಮೆಯ ತಳಹಂತದಲ್ಲಿರುವವರ ಬಗ್ಗೆ ಕಾಳಜಿ ವಹಿಸಬೇಕು. ತಳಹಂತದಲ್ಲಿ ದುಡಿಯುವ ವರ್ಗಕ್ಕೆ ಸಹಾಯ ಮಾಡಲು ಹೊಸ ಚಿಂತನೆ ಮಾಡಬೇಕು. ಯೋಜನೆಯ ಪ್ರಾಯೋಗಿಕತೆ, ನೈಜತೆ ಬಗ್ಗೆ ತಿಳಿಯುವುದೇ ತಳಹಂತದಲ್ಲಿ. ಸಂಶೋಧನೆಗಳು ಈ ಹಂತದಲ್ಲಿ ನಡೆಯಬೇಕು. ಕರ್ನಾಟಕದಲ್ಲಿ ಸಣ್ಣ ಗ್ಯಾರೇಜಿನಿಂದ ಹಿಡಿದು ದೊಡ್ಡ ಕೈಗಾರಿಕೆಗಳವರೆಗೆ ಆರ್ ಆ್ಯಂಡ್ ಡಿ(ಸಂಶೋಧನೆ ಹಾಗೂ ಅಭಿವೃದ್ಧಿ) ನೀತಿಯನ್ನು ಜಾರಿಗೊಳಿಸಲಾಗಿದೆ.

ಯುವಕರಲ್ಲಿ ಸ್ವಂತಿಕೆಯನ್ನು ಹಾಗೂ ನಾವೀನ್ಯತೆಯನ್ನು ಪ್ರೋತ್ಸಾಹಿಸಬೇಕು. ಜಪಾನ್ ದೇಶದಂತೆ ಸಂಪೂರ್ಣ ಎಕೋ ಸಿಸ್ಟಂ ಸಂಶೋಧನೆಗೆ ಒತ್ತು ನೀಡುವಂತಿರಬೇಕು. ಸುಸಜ್ಜಿತ ಕ್ಯೂಬಿಕಲ್ಸ್ಗಳಲ್ಲಿ ಮಾತ್ರ ಸೀಮಿತವಾಗಿರದೇ, ಸಂಶೋಧನೆಗಳು ಎಲ್ಲೆಡೆ ನಡೆಯಬೇಕು. ಈ ದಿಸೆಯಲ್ಲಿ ಕರ್ನಾಟಕ ನಡೆಯುತ್ತಿದ್ದು, ಹಲವು ವಿನೂತನ ಯೋಜನೆಗಳನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆ ವಿರುದ್ಧ ನೋಟಿಸ್ ಜಾರಿ

BASAVARAJ BOMMAI 1

ಸವಾಲುಗಳು ಅವಕಾಶಗಳನ್ನು ಒದಗಿಸುತ್ತವೆ: ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸಾಂಕ್ರಾಮಿಕವಿದ್ದರೂ ಬೆಳೆಯಲು ಸಾಧ್ಯ ಎಂದು ಜಗತ್ತಿಗೆ ಬಿಂಬಿಸಲಾಗಿದೆ. ಸವಾಲುಗಳು ಅವಕಾಶಗಳನ್ನು ಒದಗಿಸುತ್ತವೆ. ಸವಾಲುಗಳಿಲ್ಲದಿದ್ದರೆ, ಅಭಿವೃದ್ಧಿಯೂ ಇಲ್ಲ. ಸವಾಲುಗಳು ಹೆಚ್ಚಿದ್ದಷ್ಟೂ ಅಭಿವೃದ್ಧಿ ಹೆಚ್ಚಾಗುತ್ತದೆ. ಮೊದಲನೇ ಹಾಗೂ ಎರಡನೇ ವಿಶ್ವಯುದ್ದಗಳು ಸಾರಿಗೆ, ಎಲೆಕ್ಟಾçನಿಕ್ಸ್, ಮೆಕ್ಯಾನಿಕಲ್ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನಕ್ಕೆ ಎಡೆ ಮಾಡಿಕೊಟ್ಟಿತು. ವಿಶ್ವಯುದ್ದಗಳು ಆಗದಿದ್ದರೆ ಜಾಗತಿಕ ಬೆಳವಣಿಗೆಯೂ ಆಗುತ್ತಿರಲಿಲ್ಲ. ಯಾವುದೇ ಹೊಸ ಘಟನೆ ಸಂಭವಿಸಿದಾಗ ನೂರು ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.

ಮೂಲಸೌಕರ್ಯ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಉತ್ತಮ ವೇಗವನ್ನು ಸಾಧ್ಯವಾಗಿಸುವ ಸಾರಿಗೆ ವ್ಯವಸ್ಥೆ ಅಗತ್ಯವಿದೆ. ಕ್ಷಿಪ್ರಗತಿಯಲ್ಲಿ ನಮ್ಮ ಗಮ್ಯವನ್ನು ತಲುಪಿಸುವ ವೇಗವನ್ನು ಹೊಂದಿರುವ ರೈಲುಗಳ ಅಗತ್ಯವಿದೆ. ಮೂಲಸೌಕರ್ಯದ ಪರಿಕಲ್ಪನೆ ಬದಲಾಗಿದೆ. ಎಕ್ಸ್‌ಕಾನ್-11 ನೇ ಆವೃತ್ತಿಯು ಬೆಳೆವಣಿಗೆಯ ರೇಖೆಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಿದೆ. ದೇಶಕ್ಕೆ ಲಾಭವಾಗುವಂತೆ ಬೆಳೆಯಬಹುದಾಗಿದೆ ಎಂದು ತಿಳಿಸಿದರು.

TAGGED:Basavaraj BommaibengaluruexconInfrastructureಉದ್ಯಮಎಕ್ಸ್‌ಕಾನ್ಬಸವರಾಜ ಬೊಮ್ಮಾಯಿಬೆಂಗಳೂರುಮೂಲಸೌಲಭ್ಯ
Share This Article
Facebook Whatsapp Whatsapp Telegram

Cinema news

father movie team
ಭಾವುಕ ಪ್ರಪಂಚಕ್ಕೆ ಕರೆದೊಯ್ಯುವ ‘ಫಾದರ್’ ಥೀಮ್ ಸಾಂಗ್
Cinema Latest Sandalwood Top Stories
Toxic Nayanatara
ಟಾಕ್ಸಿಕ್ ಟೀಮ್‌ನಿಂದ ನಯನತಾರಾ ಪಾತ್ರದ ಫಸ್ಟ್ ಲುಕ್ ರಿಲೀಸ್
Cinema Latest Sandalwood Top Stories
New Year Album Music
ಹೊಸ ವರ್ಷಕ್ಕೆ ಹೊಸ ಸಂಗೀತ ಸ್ಪರ್ಶ: ನ್ಯೂ ಇಯರ್ ಆಲ್ಬಂ
Cinema Latest Sandalwood Top Stories
gilli ashwini gowda
ಕೈಗೊಂಬೆಗಳು ಅಂತ ಧ್ರುವಂತ್‌, ಅಶ್ವಿನಿ ಕೆಣಕಿದ ಗಿಲ್ಲಿ – ಬಾರೋ ಅಖಾಡಕ್ಕೆ ಅಂತ ತೊಡೆ ತಟ್ಟಿದ ಅಶ್ವಿನಿ
Cinema Latest Top Stories TV Shows

You Might Also Like

nelamangala head constable suspend
Bengaluru City

8 ಎಕರೆ ಭೂಮಿ ಕಬಳಿಕೆ; ನೆಲಮಂಗಲ ಹೆಡ್‌ಕಾನ್‌ಸ್ಟೆಬಲ್‌ ಅಮಾನತು

Public TV
By Public TV
8 minutes ago
jaishankar wang yi
Latest

ಕದನ ವಿರಾಮ ನಿರ್ಧಾರದಲ್ಲಿ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ: ಚೀನಾಗೆ ಭಾರತ ತಿರುಗೇಟು

Public TV
By Public TV
52 minutes ago
CRIME
Crime

ಚಲಿಸುತ್ತಿದ್ದ ವಾಹನದಲ್ಲೇ 2 ಗಂಟೆ ಗ್ಯಾಂಗ್ ರೇಪ್ –  ಮಹಿಳೆಯನ್ನ ರಸ್ತೆಗೆ ಎಸೆದು ದುರುಳರು ಪರಾರಿ

Public TV
By Public TV
56 minutes ago
G Parameshwar
Bengaluru City

ಕುಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ, ಡ್ರಿಂಕ್ & ಡ್ರೈವ್ ಕೇಸ್ ಇರುತ್ತೆ: ಪರಮೇಶ್ವರ್ ಸ್ಪಷ್ಟನೆ

Public TV
By Public TV
2 hours ago
Siddaramaiah Pinarayi Vijayan
Latest

ಇತ್ತ ಕೋಗಿಲು ಲೇಔಟ್‌ ಜಟಾಪಟಿ, ಅತ್ತ ಕೇರಳ & ಕರ್ನಾಟಕ ಸಿಎಂ ಹ್ಯಾಂಡ್‌ಶೇಕ್‌

Public TV
By Public TV
2 hours ago
Vijayapura Bidar Tourist place
Bidar

ಹೊಸ ವರ್ಷಕ್ಕೆ ಕ್ಷಣಗಣನೆ – ವಿಜಯಪುರದ ಗೋಲಗುಂಬಜ್‌ನಲ್ಲಿ ತುಂಬಿ ತುಳುಕುತ್ತಿರುವ ಜನ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?