DistrictsKarnatakaLatestMain PostUdupi

ತಾಯಿಯ ಮಡಿಲಲ್ಲೇ ಭಾಷಣ ಮಾಡಿ ಪ್ರಥಮ ಸ್ಥಾನ ಗೆದ್ದ ಬಾಲಕಿ!

ಉಡುಪಿ: ದೈಹಿಕ ಸ್ವಾಧೀನ ಕಳಕೊಂಡ ಬಾಲಕಿಯ ಸಾಧನೆಗೆ ಯಾವುದೂ ಅಡ್ಡಿಯಾಗಿಲ್ಲ. ತಾಯಿಯ ಮಡಿಲಲ್ಲಿ ಕೂತು ಪ್ರತಿಭಾ ಕಾರಂಜಿಯ ಕಾರ್ಯಕ್ರಮದಲ್ಲಿ ಆಶುಭಾಷಣ ಸ್ವರ್ಧೆ (Speech Competition) ಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದ ಕುಂದಾಪುರ (Kundapura) ದ ಮಗುವಿನ ವೀಡಿಯೋ ಈಗ ಸಖತ್ ವೈರಲ್ ಆಗಿದೆ.

ಪ್ರತಕುಂದಾಪುರ ಶ್ರೀಧರ್ ಹಾಗೂ ಗೀತ ಪುತ್ರಿ ಶ್ರೀರಕ್ಷಾ (ShriRaksha) ನಾಡಾ ಗ್ರಾಮದ ಕಡ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ವಿದ್ಯಾರ್ಥಿನಿ ಶ್ರೀರಕ್ಷಾ ಹುಟ್ಟುವಾಗಲೇ ಎರಡು ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ರು. ಆದರೆ ಕಲಿಕೆಯಲ್ಲಿ ಮಾತ್ರ ಆಕೆಗೆ ಅಪಾರ ಆಸಕ್ತಿ. ಇಡೀ ತರಗತಿಗೆ ಶ್ರೀರಕ್ಷನೇ ಮೊದಲ ಸ್ಥಾನ. ಇದನ್ನೂ ಓದಿ: ಹೋಗ್ಬೇಡಿ ಸರ್- ಮಂಡ್ಯದಲ್ಲಿ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರು

ದಿನನಿತ್ಯ ತಾಯಿ ಗೀತಾ ಅವರೇ ಶ್ರೀರಕ್ಷಾಳನ್ನು ಶಾಲೆಗೆ ಎತ್ತಿಕೊಂಡು ಬರುತ್ತಾರೆ. ಶಾಲೆಯಲ್ಲಿ ಈಕೆಗಾಗಿ ವ್ಹೀಲ್ ಚೇರ್ ವ್ಯವಸ್ಥೆ ಇದೆ. ಸಹಪಾಠಿಗಳೇ ಶಾಲೆಯಲ್ಲಿ ಈಕೆಗೆ ನೆರವಾಗುತ್ತಾರೆ . ಕ್ವಿಜ್, ಭಾಷಣ, ಹಾಡು ಹೀಗೆ ಶ್ರೀರಕ್ಷಾ ಎಲ್ಲದರಲ್ಲೂ ಮುಂದು. ಬದುಕಿನ ಸವಾಲನ್ನು ಎದುರಿಸಿ ಶ್ರೀರಕ್ಷಾ ಸಾಧನೆ ಈಗ ಎಲ್ಲರ ಖುಷಿಗೆ, ಸ್ಫೂರ್ತಿಗೆ ಕಾರಣವಾಗಿದೆ.

Live Tv

Leave a Reply

Your email address will not be published.

Back to top button