ಕ್ಯಾಲಿಫೋರ್ನಿಯಾ: ವಿಶ್ವದ ಪ್ರಖ್ಯಾತ ಎಲೆಕ್ಟ್ರಿಕ್ (Electric Car) ವಾಹನ ತಯಾರಿಕಾ ಸಂಸ್ಥೆಯಾದ ಟೆಸ್ಲಾ (Tesla) ತನ್ನ ಬಹುನಿರೀಕ್ಷಿತ ‘ಸೈಬರ್‌ಟ್ರಕ್’ (Cybertruck) ಮಾದರಿಯ ಕೆಲವು ವಾಹನಗಳಲ್ಲಿ ಗಂಭೀರ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವುಗಳನ್ನು ಹಿಂದಕ್ಕೆ ಪಡೆಯುವುದಾಗಿ (Recall) ಘೋಷಿಸಿದೆ.
ತಯಾರಿಕಾ ಹಂತದಲ್ಲಿ ಉಂಟಾದ ಸಣ್ಣ ಲೋಪವು ದೊಡ್ಡ ಮಟ್ಟದ ಅಪಘಾತಕ್ಕೆ ದಾರಿಯಾಗುವ ಸಾಧ್ಯತೆ ಇರುವುದರಿಂದ ಕಂಪನಿಯು ಈ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ.
ಯಾಕೆ ಈ ಕ್ರಮ?
ಈ ಮರುಪಡೆಯುವಿಕೆಗೆ ಮುಖ್ಯವಾಗಿ ಬ್ರೇಕ್ ರೋಟರ್‌ಗಳಲ್ಲಿನ ಬಿರುಕು ಮತ್ತು ತಪ್ಪಾದ ಗ್ರೀಸ್ ಬಳಕೆ ಕಾರಣ ಎಂದು ಗುರುತಿಸಲಾಗಿದೆ. ವಾಹನ ತಯಾರಿಕೆಯ ಸಮಯದಲ್ಲಿ ಸರಿಯಾದ ಸಂವಹನದ ಕೊರತೆಯಿಂದಾಗಿ, ಚಕ್ರದ ಭಾಗಗಳಿಗೆ ತಪ್ಪು ಮಾದರಿಯ ಗ್ರೀಸ್ ಅನ್ನು ಬಳಸಲಾಗಿದೆ.

ಈ ತಪ್ಪಾದ ಗ್ರೀಸ್ ಬಳಕೆಯಿಂದಾಗಿ ಚಕ್ರದ ರೋಟರ್‌ನಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಇದರಿಂದ ಚಕ್ರವನ್ನು ಹಬ್‌ಗೆ ಜೋಡಿಸಿರುವ ‘ಸ್ಟಡ್‌ಗಳು’ ಬೇರ್ಪಟ್ಟು, ಚಾಲನೆಯಲ್ಲಿರುವಾಗಲೇ ಚಕ್ರ ಕಳಚಿಬೀಳುವ ಅಪಾಯವಿದೆ. ಇದು ಚಾಲಕನ ನಿಯಂತ್ರಣ ತಪ್ಪಿಸಿ ಭೀಕರ ಅಪಘಾತಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತವಾಗಿದೆ. ಇದನ್ನೂ ಓದಿ: 1 ಲಕ್ಷ ದಾಟಿತು ಸಿಯೆರಾ ಬುಕ್ಕಿಂಗ್ – ಉತ್ಪಾದನೆ ಹೆಚ್ಚಿಸಿದ ಟಾಟಾ ಮೋಟಾರ್ಸ್
ಬಾಧಿತ ವಾಹನ ಮಾಲೀಕರಿಗೆ ಉಚಿತವಾಗಿ ಮುಂಭಾಗ ಮತ್ತು ಹಿಂಭಾಗದ ಬ್ರೇಕ್ ರೋಟರ್‌ಗಳು, ಹಬ್‌ಗಳು ಮತ್ತು ಲಗ್ ನಟ್‌ಗಳನ್ನು ಹೆಚ್ಚು ಬಾಳಿಕೆ ಬರುವ ಬಿಡಿಭಾಗಗಳೊಂದಿಗೆ ಬದಲಾಯಿಸಿ ಕೊಡಲಾಗುತ್ತದೆ ಎಂದು ಟೆಸ್ಲಾ ತಿಳಿಸಿದೆ.

