ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ (Tamil Nadu Assembly Election) ಮತ ಎಣಿಕೆ ಅಂತಿಮ ಹಂತಕ್ಕೆ ಬಂದಿದ್ದು, ಅಂತಿಮ ಫಲಿತಾಂಶ ಹೊರಬೀಳುವ ಮುನ್ನವೇ ನಟ ವಿಜಯ್ (Vijay) ಮನೆಯಲ್ಲಿ ಸಂಭ್ರಮಾಚರಣೆ ಶುರುವಾಗಿದೆ.
ಸದ್ಯ ಟಿವಿಕೆ (TVK) ಪಕ್ಷ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ದೇಶದಲ್ಲಿಯೇ ಅಚ್ಚರಿ ಮೂಡಿಸಿದೆ. ಜೊತೆಗೆ ತಮಿಳುನಾಡಿನಲ್ಲಿ ಟಿವಿಕೆ ಬೆಂಬಲಿಗರು ಹಾಗೂ ವಿಜಯ್ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಇದನ್ನೂ ಓದಿ: ತಮಿಳುನಾಡಲ್ಲಿ ಹೊಸ ಯುಗಾರಂಭ: ಡಿಕೆಶಿ
Whistle celebrations by Thalapathy family 🙏🏼🙏🏼 #ElectionResult2026pic.twitter.com/mO6ywlRLBS
— Actor Vijay Team (@ActorVijayTeam) May 4, 2026
ತಮಿಳುನಾಡಿನಲ್ಲಿ ಟಿವಿಕೆ ಮುನ್ನಡೆ ಸಾಧಿಸಿದ ಹಿನ್ನೆಲೆ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರ ಚೆನ್ನೈನ ನೀಲಾಂಕರೈ ಬಳಿಯ ನಿವಾಸದಲ್ಲಿ ಕುಟುಂಬಸ್ಥರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ವಿಜಯ್ ನಿವಾಸದ ಮುಂದೆ ಅಭಿಮಾನಿಗಳು ಪುಷ್ಟವೃಷ್ಠಿ ಸುರಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ವಿಜಯ್‌ರನ್ನ ನಟನಾಗಿ ನೋಡಿದ್ರು, ಮುಂದೆ ಸಿಎಂ ಆಗಿ ನೋಡ್ತಾರೆ: ಡಿವಿಎಸ್
WATCH || Celebrations have begun at TVK Chief Vijay’s residence. pic.twitter.com/ReeJGE6VI2
— TIMES NOW (@TimesNow) May 4, 2026
ವಿಜಯ್ ಅವರ ತಂದೆ ಚಂದ್ರಶೇಖರ್ ಹಾಗೂ ಕುಟುಂಬಸ್ಥರು ಫಲಿತಾಂಶ ನೋಡಿ ಸಂಭ್ರಮಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ತಮಿಳುನಾಡಲ್ಲಿ ಟಿವಿಕೆಗೆ ಮುನ್ನಡೆ – ವಿಜಯ್‌ಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ












