ಬೆಂಗಳೂರು: ತಮಿಳುನಾಡಿನ (Tamil Nadu) ಮತ ಎಣೆಕೆಯಲ್ಲಿ ಟಿವಿಕೆ (TVK) ಭಾರೀ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆ ಪಕ್ಷದ ಮುಖ್ಯಸ್ಥ ನಟ ವಿಜಯ್‌ಗೆ (Vijay) ಸಿಎಂ ಸಿದ್ದರಾಮಯ್ಯ (Siddaramaiah) ಅಭಿನಂದನೆ ಸಲ್ಲಿಸಿದರು.
ನಗರದಲ್ಲಿ (Bengaluru) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಇರಬಹುದು. ಇನ್ನೂ ಟಿವಿಕೆ ಹೊಸ ಪಕ್ಷ ವಿಜಯ್ ಅಲೆಯಿಂದ ಮುನ್ನಡೆ ಸಾಧಿಸಿರಬಹುದು ಎಂದರು. ಬಳಿಕ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ತಮಿಳುನಾಡಲ್ಲಿ ನಮ್ಮ ಸರ್ಕಾರ ಫಿಕ್ಸ್ ಎಂದ TVK
ಇನ್ನೂ ಉಪ ಚುನಾವಣೆ ನಿರೀಕ್ಷೆ ಇತ್ತು, ದಾವಣಗೆರೆಯಲ್ಲಿ ನಮ್ಮ ಕಾರಣದಿಂದ ಲೀಡ್ ಕಡಿಮೆ ಆಗಬಹುದು. ಆದರೆ ನಾವು ಗೆಲ್ಲುತ್ತೇವೆ. ಬಾಗಲಕೋಟೆಯಲ್ಲೂ ನಾವು ಗೆಲ್ಲುತ್ತೇವೆ. ಪಶ್ಚಿಮ ಬಂಗಾಳದಲ್ಲಿ ನಮ್ಮದೇನು ಇರಲಿಲ್ಲ. ಅಲ್ಲಿ ಬಿಜೆಪಿ ಮುನ್ನಡೆಗೆ ಆಡಳಿತ ವಿರೋಧಿ ಅಲೆ ಇರಬಹುದು. ಅಸ್ಸಾಂನ ಸೋಲನ್ನು ಒಪ್ಪುತ್ತೇವೆ. ಇನ್ನೂ ಕೇರಳದಲ್ಲಿ ನಮ್ಮ ನಿರೀಕ್ಷೆ ಮೀರಿ ಮುನ್ನಡೆ ಗಳಿಸಿದ್ದೇವೆ ಎಂದರು.
ತಮಿಳುನಾಡು
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏ.23 ರಂದು ಮತದಾನ ನಡೆದಿತ್ತು. ರಾಜ್ಯದಲ್ಲಿ ದಾಖಲೆಯ 4,654 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ 3,579 ಪುರುಷ ಮತ್ತು 443 ಮಹಿಳಾ ಮತದಾರರು ಸ್ಪರ್ಧಿಸಿದ್ದರು. 84.69% ಮತದಾನ ನಡೆದಿತ್ತು. ರಾಜ್ಯದಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕಿದ್ದವು. ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ನಟ ವಿಜಯ್ ನೇತೃತ್ವದ ಟಿವಿಕೆ, ಎನ್‌ಟಿಕೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು.
ಕಳೆದ ಚುನಾವಣೆಯಲ್ಲಿ 10 ವರ್ಷಗಳ ನಂತರ ಎಐಎಡಿಎಂಕೆ (AIADMK) ಆಡಳಿತವನ್ನು ಅಂತ್ಯಗೊಳಿಸಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತು. ಡಿಎಂಕೆ ಮೈತ್ರಿಕೂಟ: 159 ಸ್ಥಾನಗಳು (ಡಿಎಂಕೆ ಏಕಾಂಗಿಯಾಗಿ 133 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆಯಿತು). ಎಐಎಡಿಎಂಕೆ ಮೈತ್ರಿಕೂಟ: 75 ಸ್ಥಾನ ಗೆದ್ದಿದ್ದವು. ಇದನ್ನೂ ಓದಿ: Tamil Nadu Trends | ಅಪ್ಪ-ಮಗನಿಗೆ ಹಿನ್ನಡೆ – ಶತಕದ ಗಡಿ ದಾಟಿದ ‘ಜನ ನಾಯಗನ್’












