T20 World Cup: ಐರ್ಲೆಂಡ್‌ ವಿರುದ್ಧ ಶ್ರೀಲಂಕಾಗೆ 20 ರನ್‌ಗಳ ಗೆಲುವು

1 Min Read

ಕೊಲಂಬೊ: ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆರನೇ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಶ್ರೀಲಂಕಾ 20 ರನ್‌ಗಳ ಜಯ ಸಾಧಿಸಿದೆ.

ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಐರ್ಲೆಂಡ್‌ 19.5 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 143 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋತಿತು.

ಶ್ರೀಲಂಕಾ ಪರ ಕುಸಾಲ್ ಮೆಂಡಿಸ್ 56, ಕಾಮಿಂಡು ಮೆಂಡಿಸ್ 44, ಪಾತುಮ್ ನಿಸ್ಸಂಕ 24 ರನ್‌ ಗಳಿಸಿದರು. ಐರ್ಲೆಂಡ್‌ ಪರ ಬ್ಯಾರಿ ಮೆಕಾರ್ಥಿ, ಜಾರ್ಜ್ ಡಾಕ್ರೆಲ್ ತಲಾ 2 ಹಾಗೂ ಮಾರ್ಕ್ ಅಡೇರ್, ಗ್ಯಾರೆತ್ ಡೆಲಾನಿ ತಲಾ 1 ವಿಕೆಟ್‌ ಪಡೆದರು.

ಐರ್ಲೆಂಡ್‌ ಪರ ಹ್ಯಾರಿ ಟೆಕ್ಟರ್ 40, ರಾಸ್ ಅಡೈರ್ 34, ಲೋರ್ಕನ್ ಟಕರ್ 21 ರನ್‌ ಗಳಿಸಿದರು. ಮಹೇಶ್ ತೀಕ್ಷಣ ಹಾಗೂ ವನಿಂದು ಹಸರಂಗ ಬೆಂಕಿ ಬೌಲಿಂಗ್‌ಗೆ ಐರ್ಲೆಂಡ್‌ ಸೋತು ಶರಣಾಯಿತು. ಇಬ್ಬರೂ ಬೌಲರ್‌ಗಳು ತಲಾ ಮೂರು ವಿಕೆಟ್‌ ಪಡೆದರು. ಮಥೀಷ ಪತಿರಾನ 2 ಹಾಗೂ ದುಷ್ಮಂತ ಚಮೀರ, ಡುನಿತ್ ವೆಲ್ಲಾಲಗೆ ತಲಾ 1 ವಿಕೆಟ್‌ ಪಡೆದರು.

Share This Article