ಬೆಂಗಳೂರು: ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಮೊದಲ ಬಾರಿಗೆ ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಬಣ್ಣ ಹಚ್ಚಲಿದ್ದು, ಪಡ್ಡೆ ಹುಡುಗರ ಕನಸಿಗೆ ಲಗ್ಗೆ ಇಡಲಿದ್ದಾಳೆ.
‘ಡಿಕೆ; ಮತ್ತು ‘ಲವ್ ಯೂ ಆಲಿಯಾ’ ಎರಡೂ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸನ್ನಿ ಸ್ಯಾಂಡಲ್ವುಡ್ ಸಿನಿರಸಿಕರನ್ನು ರಂಜಿಸಲು ಗಾಂಧಿನಗರಕ್ಕೆ ಬರಲಿದ್ದಾರೆ. ಡಿಕೆ ಸಿನಿಮಾದಲ್ಲಿ ಸೇಸಮ್ಮಳಾಗಿ ಸೊಂಟ ಬಳುಕಿಸಿ, ನಂತರ `ಲವ್ ಯು ಆಲಿಯಾ’ದಲ್ಲಿ ಕಾಮಾಕ್ಷಿಯಾದಾಗ್ಲಂತೂ ಇನ್ನು ಸ್ವಲ್ಪ ಹೊತ್ತು ಹೆಜ್ಜೆ ಹಾಕಬಾರಾಗಿತ್ತಾ ಅಂತಾ ಸನ್ನಿ ಅಭಿಮಾನಿಗಳು ಆಸೆ ಪಟ್ಟಿದ್ದರು.
ಇದನ್ನೂ ಓದಿ: ದೇವರನಾಡು ಕೇರಳದಲ್ಲಿ ಸಮೂಹ `ಸನ್ನಿ’ – ಸನ್ನಿ ಲಿಯೋನ್ ನೋಡಲು ಮುಗಿಬಿದ್ದ ಲಕ್ಷ-ಲಕ್ಷ ಜನ
`ನಿನ್ನದೇ ಹೆಜ್ಜೆ ಡಾಟ್ ಕಾಂ’ ಎಂಬ ಸಿನಿಮಾದಲ್ಲಿ ಫುಲ್ ಫ್ಲೆಡ್ಜ್ ಹೀರೋಯಿನ್ ಆಗಿ ಸನ್ನಿ ಮಿಂಚಲಿದ್ದಾಳೆ. ಮೋಹನ್ ಹಾಸನ್ ಅನ್ನೋ ನಿರ್ದೇಶಕ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಸನ್ನಿ ಪತಿ ಡೇನಿಯಲ್ ವೇಬರ್ ಪರಿಚಯ ಹೊಂದಿದ್ದ ನಿರ್ದೇಶಕ ಮೋಹನ್ ಹಾಸನ್ ಮಾದಕ ನಟಿಯ ಕಾಲ್ ಶೀಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಸನ್ನಿ ಸಿನಿಮಾಗೆ ಸಹಿ ಹಾಕಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ.
ಸಿನಿಮಾ ಸಾಫ್ಟ್ ವೇರ್ ಕಂಪನಿಯಲ್ಲಿ ನಡೆಯುವ ಸುಂದರ ಲವ್ ಸ್ಟೋರಿಯನ್ನು ಹೊಂದಿದೆ. ಸನ್ನಿ ಜೊತೆ ಒಬ್ಬ ಕನ್ನಡದ ಸ್ಟಾರ್ ನಟರನ್ನೇ ಸಿನಿಮಾದಲ್ಲಿ ಪೇರ್ ಮಾಡಲು ನಿರ್ದೇಶಕ ಕಂ. ನಿರ್ಮಾಪಕ ಮೋಹನ್ ಹಾಸನ್ ಇಚ್ಚಿಸಿದ್ದಾರೆ. ಆದರೆ ಮೋಹನ್ ಹಾಸನ್ ಮಾತ್ರ ಹೀರೋ ಹೆಸರನ್ನು ಬಹಿರಂಗಗೊಳಿಸದೇ ಗೌಪ್ಯವಾಗಿರಿಸಿದ್ದಾರೆ.
ಇದನ್ನೂ ಓದಿ: ವಿವಾದಕ್ಕೆ ಕಾರಣವಾಗಿದೆ ಸನ್ನಿ ಮತ್ತು ಮಗುವಿನ ಫೋಟೋ!