Connect with us

ಶಿವಮೊಗ್ಗದ ಕಾಲೇಜಿನಲ್ಲಿ ಬುರ್ಖಾ ವಿವಾದ- ಕೇಸರಿ ಶಾಲು ಧರಿಸಿ ಬರ್ತಿರೋ ವಿದ್ಯಾರ್ಥಿಗಳು

ಶಿವಮೊಗ್ಗದ ಕಾಲೇಜಿನಲ್ಲಿ ಬುರ್ಖಾ ವಿವಾದ- ಕೇಸರಿ ಶಾಲು ಧರಿಸಿ ಬರ್ತಿರೋ ವಿದ್ಯಾರ್ಥಿಗಳು

ಶಿವಮೊಗ್ಗ: ಮಲೆನಾಡಿನ ಶಿಕ್ಷಣ ಸಂಸ್ಥೆಗಳಿಗೂ ವಸ್ತ್ರಸಂಹಿತೆ ವಿವಾದ ಕಾಲಿಟ್ಟಿದೆ. ಕುವೆಂಪು ವಿವಿಯ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ಬುರ್ಖಾ ವಿವಾದ ಆರಂಭಗೊಂಡಿದೆ.

ಕಾಲೇಜಿನಲ್ಲಿ ಇದೂವರೆಗೂ ಸಮವಸ್ತ್ರ ಕಡ್ಡಾಯವಾಗಿತ್ತು. ಆದರೆ ಕೆಲವರು ಶಾಲಾ ಕೊಠಡಿಯೊಳಗೆ ಬುರ್ಖಾ ಧರಿಸಿ ಬರುತ್ತಿದ್ದರು. ಇದನ್ನು ಖಂಡಿಸಿ ಗುರುವಾರದಂದು ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಸಂಜೆ ವೇಳೆ ವಿವಿ ಕುಲಸಚಿವ ಭೋಜಾನಾಯ್ಕ ಪತ್ರಿಕಾ ಹೇಳಿಕೆ ನೀಡಿ, ಕ್ಯಾಂಪಸ್ ನಲ್ಲಿ ಸಮವಸ್ತ್ರ ಕಡ್ಡಾಯವಿಲ್ಲ. ಆದರೆ, ಐಡಿ ಕಾರ್ಡ್ ಕಡ್ಡಾಯ ಎಂದು ತಿಳಿಸಿದ್ದರು. ಇದು ವಿದ್ಯಾರ್ಥಿಗಳ ಇನ್ನಷ್ಟು ಕೆರಳಿಸಿದೆ.

ಸಾವಿರಾರು ರೂ. ವೆಚ್ಚ ಮಾಡಿ ಸಮವಸ್ತ್ರ ಕೊಂಡಿದ್ದೇವೆ. ಈಗ ಸಮವಸ್ತ್ರ ಕಡ್ಡಾಯವಿಲ್ಲ ಎನ್ನುತ್ತಿದ್ದಾರೆ. ಕ್ಯಾಂಪಸ್ ನಲ್ಲಿ ಬುರ್ಖಾ ನಿಷೇಧಿಸುವ ಬದಲು ಸಮವಸ್ತ್ರವನ್ನೇ ರದ್ದು ಮಾಡಿದ್ದಾರೆ. ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಇಂದು ಕೂಡ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುತ್ತಿದ್ದಾರೆ. ಕಾಲೇಜು ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

Advertisement
Advertisement