ಬೆಂಗಳೂರು: ಸ್ಟಿಂಗ್ ಆಪರೇಷನ್ ಕೇಸ್ನಲ್ಲಿ (Sting Operation Case) ಸಿದ್ದರಾಮಯ್ಯ (Siddaramaiah) ತಣಿಸಲು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಮೇಲೆ ಕಮೀಷನರ್ ಕೈಯಲ್ಲಿ ಆರೋಪ ಮಾಡಿಸಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು (Sriramulu) ಆರೋಪ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ಕಾಫಿ ಲೋಟದಲ್ಲಿ ಚಂಡ ಮಾರುತ ರೀತಿ ಚರ್ಚೆ ಆಗುತ್ತಿದೆ. ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾರೆ. ಅವರನ್ನು ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಸ್ಟಿಂಗ್ ಪ್ರಕರಣ ಬೇರೆ ಕಡೆ ತಿರುಗಿಸುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವಧು-ವರನಿಗೆ ನಂದಿನಿ ಹಾಲು – ಮೊಸರು ಗಿಫ್ಟ್ ಕೊಟ್ಟು ಸರ್ಕಾರದ ವಿರುದ್ಧ ಆಕ್ರೋಶ
ಯತೀಂದ್ರ ಅವರೇ ನಮ್ಮ ಪಕ್ಷದವರು ಸ್ಟಿಂಗ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಕಾಂಗ್ರೆಸ್ನಲ್ಲಿ ಒಬ್ಬ ಲೇಡಿ ವಿಚಾರಣೆ ಮಾಡಿದ್ದಾರೆ. ಹರಿಪ್ರಸಾದ್ ಕೃಪಾ ಆಳ್ವಾ ಅವರನ್ನು ಉಚ್ಚಾಟನೆ ಮಾಡಿದರೆ ಸಾಲಲ್ಲ. ಸಾಕಷ್ಟು ಜನ ಸಿದ್ದರಾಮಯ್ಯ ಇಳಿಸಲು ಇದನ್ನ ಮಾಡಿದ್ದಾರೆ. ಗೃಹ ಸಚಿವರು ಆರ್ಎಸ್ಎಸ್ ಬಗ್ಗೆ ಮಾತಾಡೋದು ಬಿಟ್ಟು ಸ್ಟಿಂಗ್ ಬಗ್ಗೆ ಮಾತಾಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಿದ್ರಾಮಯ್ಯ ವಿರುದ್ಧದ ಸ್ಟಿಂಗ್ ಕೇಸ್ – ಕೃಪಾ ಆಳ್ವಾ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು
ಕೃಪಾ ಆಳ್ವಾ ಉಚ್ಚಾಟನೆ ಮಾಡಿದ್ದಾರೆ. ಯತೀಂದ್ರ ಅವರೇ ಇದನ್ನ ನಮ್ಮ ಪಕ್ಷದವರು ಮಾಡಿದ್ದಾರೆ ಅಂತ ಹೇಳಿದ ಮೇಲೆ ಕುಮಾರಸ್ವಾಮಿ ಕೊರಳಿಗೆ ಯಾಕೆ ಕಟ್ಟಲು ಹೋಗುತ್ತಿದ್ದೀರಾ? ಮೊದಲ ದಿನದಿಂದ ಕುಮಾರಸ್ವಾಮಿ ಇದರ ಬಗ್ಗೆ ಹೇಳುತ್ತಿದ್ದಾರೆ. ಅದಕ್ಕೆ ಅವರ ಕೊರಳಿಗೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಬಹಳ ಫೋರ್ಸ್ ಆಗಿ ದೆಹಲಿಗೆ ಹೋಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ತಣ್ಣಗೆ ಮಾಡಲು ಪೊಲೀಸ್ ಕಮೀಷನರ್ ಹತ್ರ ಮಾತಾಡಿಸಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ನ.5ರಂದು ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಬಿಕೆ ಹರಿಪ್ರಸಾದ್
