ಕರ್ನಾಟಕದಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರೆಯಲಿದೆ. ಮುಂದಿನ ಐದು ದಿನಗಳವರೆಗೂ ಮಳೆ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಜಿಲ್ಲೆಗಳಿಗೆ ವಿವಿಧ ಅಲರ್ಟ್ ನೀಡಿದೆ. ರಾಜ್ಯದ ಮೇಲೆ ಮೇಲ್ಮೈ ಸುಳಿಗಾಳಿ ಇರೋದ್ರಿಂದ ಮಳೆ ಆಗಲಿದೆ ಅಂತಾ ಭಾರತೀಯ ಹವಾಮಾನ ಇಲಾಖೆಯವರು ಎಚ್ಚರಿಕೆ ನೀಡಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಳೆಯಾಗಲಿದ್ದು, ಮುಂದಿನ ಐದು ದಿನದವರೆಗೂ ಜಿಲ್ಲೆಗಳಿಗೆ ವಿವಿಧ ಅಲರ್ಟ್ಗಳನ್ನ ಭಾರತೀಯ ಹವಾಮಾನ ಇಲಾಖೆ ನೀಡಿದೆ. ಕರಾವಾಳಿ ಜಿಲ್ಲೆಗಳಿಗೆ ಮುಂದಿನ 3 ಆರೆಂಜ್ ಅಲರ್ಟ್, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ 2 ಮತ್ತು 3ನೇ ದಿನ ಆರೆಂಜ್ ಅಲರ್ಟ್, ಉತ್ತರ ಒಳನಾಡಿನ ಜಿಲ್ಲೆಗಳಿಗೆ 4 ರಿಂದ 5 ದಿನ ಮಳೆ ಯಲೋ ಅಲರ್ಟ್ ಮತ್ತು ಪಶ್ವಿಮ ಘಟ್ಟ ಜಿಲ್ಲೆಗಳಾದ ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಜಿಲ್ಲೆಗಳಿಗೆ ಐದು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement
Advertisement
ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 27-20
ಮಂಗಳೂರು: 28-24
ಶಿವಮೊಗ್ಗ: 27-21
ಬೆಳಗಾವಿ: 27-21
ಮೈಸೂರು: 27-21
ಮಂಡ್ಯ: 28-21
ಕೊಡಗು: 23-18
ರಾಮನಗರ: 28-21
ಹಾಸನ: 26-19
ಚಾಮರಾಜನಗರ: 27-21
ಚಿಕ್ಕಬಳ್ಳಾಪುರ: 27-20
ಕೋಲಾರ: 28-21
ತುಮಕೂರು: 27-20
ಉಡುಪಿ: 28-24
ಕಾರವಾರ: 29-25
ಚಿಕ್ಕಮಗಳೂರು: 24-19
ದಾವಣಗೆರೆ: 28-21
ಚಿತ್ರದುರ್ಗ: 28-21
ಹಾವೇರಿ: 29-22
ಬಳ್ಳಾರಿ: 30-23
ಗದಗ: 29-22
ಕೊಪ್ಪಳ: 30-22
ರಾಯಚೂರು: 30-24
ಯಾದಗಿರಿ: 29-23
ವಿಜಯಪುರ: 30-22
ಬೀದರ್: 28-22
ಕಲಬುರಗಿ: 29-23
ಬಾಗಲಕೋಟೆ: 31-22