ವಾಷಿಂಗ್ಟನ್: ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ತಮ್ಮ ಏಕಸ್ವಾಮ್ಯ ಹಾಗೂ ಬಿಗಿಹಿಡಿತವನ್ನು ಉಳಿಸಿಕೊಳ್ಳಲು ಕೆಲ ಹೆಸರಿಸದ ಭಾರತೀಯ ಟೆಲಿಕಾಂ ದೊರೆಗಳು (Oligarchs) ಸ್ಟಾರ್ಲಿಂಕ್ (Starlink) ಅನ್ನು ತಡೆಯುತ್ತಿದ್ದಾರೆ ಎಂದು ಸ್ಪೇಸ್ಎಕ್ಸ್ (SpaceX) ಮುಖ್ಯಸ್ಥ ಎಲಾನ್ ಮಸ್ಕ್(Elon Musk) ಗಂಭೀರ ಆರೋಪ ಮಾಡಿದ್ದಾರೆ.
ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆಗೆ ಅನುಮತಿ ನೀಡದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪ ಮಾಡಿದ ಮಸ್ಕ್, “ದುರದೃಷ್ಟವಶಾತ್, ಭಾರತೀಯ ಗ್ರಾಹಕರ ಮೇಲೆ ತಮ್ಮ ಏಕಸ್ವಾಮ್ಯದ ಬಿಗಿಹಿಡಿತವನ್ನು ಕಾಯ್ದುಕೊಳ್ಳಲು ಕೆಲವು ಪ್ರಭಾವಿ ಉದ್ಯಮಿಗಳು ನಮಗೆ ಅಡ್ಡಿಪಡಿಸುತ್ತಿದ್ದಾರೆ. ಅವರು ಯಾರೆಂದು ನೀವು ಊಹಿಸಬಹುದು ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ “ಇದು ಭಾರತದ ಜನರಿಗೆ ಎಸಗುತ್ತಿರುವ ಅಪರಾಧ! ಎಂದು ಬರೆದಿರುವ ಮಸ್ಕ್ ಮತ್ತೊಂದು ಪೋಸ್ಟ್ನಲ್ಲಿ, “ಪ್ರಸ್ತುತ ದರಗಳನ್ನು ಭರಿಸಲು ಸಾಧ್ಯವಾಗದ ಅಥವಾ ಸಂಪರ್ಕವೇ ಇಲ್ಲದ ಜನರಿಗೆ ಭಾರತದಲ್ಲಿ ಸ್ಟಾರ್ಲಿಂಕ್ ವೇಗದ ಮತ್ತು ಕೈಗೆಟುಕುವ ದರದ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲಿದೆ” ಎಂದು ತಿಳಿಸಿದ್ದಾರೆ.
Unfortunately, we are being blocked by certain oligarchs in order to maintain their monopolistic chokehold on the Indian people. You can guess who they are …
This is a crime against the people of India!
— Elon Musk (@elonmusk) October 7, 2026
ಭಾರತ ಸರ್ಕಾರವು ಉಪಗ್ರಹ ಸಂವಹನ ಸೇವೆಗಳನ್ನು ಒದಗಿಸಲು ಸ್ಟಾರ್ಲಿಂಕ್ ಸೇರಿದಂತೆ ಮೂರು ಕಂಪನಿಗಳಿಗೆ ಪರವಾನಗಿ ನೀಡಿದೆ. ಅಗತ್ಯ ಮೂಲಸೌಕರ್ಯಗಳನ್ನು ಸಿದ್ಧಪಡಿಸಿಕೊಂಡಿದ್ದರೂ, ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ಸ್ಟಾರ್ಲಿಂಕ್ ಇನ್ನೂ ಅಂತಿಮ ನಿಯಂತ್ರಣಾ ಅನುಮತಿಗಳಿಗಾಗಿ ಕಾಯುತ್ತಿದೆ. ಇದನ್ನೂ ಓದಿ: ಕಳಪೆ ಸ್ಕ್ರೀನ್ ಗಾರ್ಡ್ಗಳಿಗೆ ಬೀಳಲಿದೆ ಬ್ರೇಕ್ : ಮೊಬೈಲ್ ಸ್ಕ್ರೀನ್ ಪ್ರೊಟೆಕ್ಟರ್ಗಳಿಗೆ BIS ಪ್ರಮಾಣಪತ್ರ ಕಡ್ಡಾಯ
Starlink in India would enable high-speed, affordable Internet connectivity for those who can’t afford current prices or who don’t have a connection at all!
— Elon Musk (@elonmusk) October 7, 2026
ಅನುಮತಿ ನೀಡಿಲ್ಲ ಯಾಕೆ?
ಭಾರತದ ಗೃಹ ಸಚಿವಾಲಯದ ಅಡಿಯಲ್ಲಿರುವ ಭದ್ರತಾ ಸಂಸ್ಥೆಗಳು ಸ್ಟಾರ್ಲಿಂಕ್ಗೆ ಅಂತಿಮ ಕ್ಲಿಯರೆನ್ಸ್ ನೀಡಲು ಹಿಂಜರಿಯುತ್ತಿವೆ. ಇರಾನ್ನಂತಹ ದೇಶಗಳಲ್ಲಿ ಪರವಾನಗಿ ಇಲ್ಲದಿದ್ದರೂ ಯುದ್ಧದ ಸಮಯದಲ್ಲಿ ಸ್ಟಾರ್ಲಿಂಕ್ ಟರ್ಮಿನಲ್ಗಳನ್ನು ಬಳಸಲಾಗಿತ್ತು ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಹೆಚ್ಚು ಜಾಗರೂಕವಾಗಿದೆ.
ಭಾರತೀಯ ಟೆಲಿಕಾಂ ನಿಯಮಗಳ ಪ್ರಕಾರ, ದೇಶದ ಭದ್ರತಾ ಅಗತ್ಯತೆಗಳಿಗೆ ಅನುಗುಣವಾಗಿ ಕಣ್ಗಾವಲು ನಡೆಸಲು ಹಾಗೂ ಡೇಟಾವನ್ನು ಭಾರತದ ಒಳಗೇ ಸುರಕ್ಷಿತವಾಗಿಡಲು ಸ್ಟಾರ್ಲಿಂಕ್ ಒಪ್ಪಬೇಕಾಗುತ್ತದೆ. ವಿದೇಶಿ ಸರ್ಕಾರಗಳಿಂದ ಒತ್ತಡ ಬಂದಾಗ ಸ್ಟಾರ್ಲಿಂಕ್ ಭಾರತದ ನಿಯಮಗಳನ್ನು ಹೇಗೆ ಪಾಲಿಸುತ್ತದೆ ಎಂಬ ಬಗ್ಗೆ ಸರ್ಕಾರಕ್ಕೆ ಇನ್ನೂ ಕೆಲವು ಆತಂಕಗಳಿವೆ. ಅಲ್ಲದೆ, ಭಾರತದ ಹೊರಗೆ ಖರೀದಿಸಿದ ಟರ್ಮಿನಲ್ಗಳನ್ನು ಭಾರತದಲ್ಲಿ ಬಳಸದಂತೆ ಬ್ಲಾಕ್ ಮಾಡುವ ನಿಯಮಗಳಿಗೂ ಸ್ಟಾರ್ಲಿಂಕ್ ಬದ್ಧವಾಗಬೇಕಿದೆ.

