ಮಂಡ್ಯ: ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ (Srirangapatna Dasara) ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್ 15ರಂದು ಖ್ಯಾತ ನಟ ವಿ.ರವಿಚಂದ್ರನ್ ಅವರು ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ (N Chaluvaraya Swamy) ಅವರು ಇಂದು ಈ ಕುರಿತು ಅಧಿಕೃತ ಮಾಹಿತಿ ನೀಡಿ, ಉತ್ಸವದ ಆಕರ್ಷಕ ಲೋಗೋವನ್ನು ಬಿಡುಗಡೆ ಮಾಡಿದ್ದಾರೆ. ಶ್ರೀರಂಗಪಟ್ಟಣ ದಸರಾ ಜೊತೆಗೆ ಅ.11ರಂದು ಕೆಆರ್‌ಎಸ್ ಜಲಾಶಯದ ಸಮೀಪ ಕಾವೇರಿ ಆರತಿ ಕಾರ್ಯಕ್ರಮವು 6 ದಿನಗಳ ಕಾಲ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: Asian Games 2026: ಶಾಟ್ ಪುಟ್‌ನಲ್ಲಿ ತಜಿಂದರ್‌ಪಾಲ್‌ಗೆ ಬೆಳ್ಳಿ, ಮಹಿಳೆಯರ 400 ಮೀಟರ್ ಓಟದಲ್ಲಿ ಪ್ರಾಚಿಗೆ ಕಂಚು
ಯಾವ ದಿನ ಯಾವ ಕಾರ್ಯಕ್ರಮ?
ಅಕ್ಟೋಬರ್ 12 ಮತ್ತು 13:
ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಮೈಸೂರು ಮಾದರಿಯಲ್ಲೇ ಶ್ರೀರಂಗಪಟ್ಟಣದಲ್ಲಿ ಯುವ ಸಂಭ್ರಮ ಕಾರ್ಯಕ್ರಮ.
ಅಕ್ಟೋಬರ್ 15 ರಿಂದ 18:
ಅಧಿಕೃತವಾಗಿ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಆರಂಭ.
ದಸರಾ ಲೋಗೋದ ವಿಶೇಷತೆಗಳು:
ಈ ಬಾರಿಯ ದಸರಾ ಲೋಗೋ ಶ್ರೀರಂಗಪಟ್ಟಣದ ಸಾಂಸ್ಕೃತಿಕ ಪರಂಪರೆ ಮತ್ತು ರಾಜಮನೆತನದ ವೈಭವವನ್ನು ಸಾರುವಂತಿದ್ದು, ಲೋಗೋದ ಮೇಲ್ಭಾಗದಲ್ಲಿರುವ ಚಿನ್ನದ ಬಣ್ಣದ ಕಲಾತ್ಮಕ ಗೋಪುರವು ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ದೇವಾಲಯದ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಬಳಿ ಆತ್ಮಾಹುತಿ ಬಾಂಬ್ ದಾಳಿ – 11 ಸಾವು, 30 ಮಂದಿಗೆ ಗಾಯ
416ನೇ ವರ್ಷದ ಸಂಭ್ರಮ:
ಗೋಪುರದ ಕೆಳಭಾಗದಲ್ಲಿ 416ನೇ ಎಂದು ನಮೂದಿಸುವ ಮೂಲಕ ಉತ್ಸವದ ಐತಿಹಾಸಿಕ ಪರಂಪರೆಯನ್ನು ಸೂಚಿಸಲಾಗಿದೆ.
ಜಂಬೂಸವಾರಿ ದೃಶ್ಯ:
ಕಡು ಹಸಿರು ಹಿನ್ನೆಲೆಯ ವೃತ್ತದೊಳಗೆ ಚಿನ್ನದ ಬಣ್ಣದಲ್ಲಿ ಅಲಂಕೃತಗೊAಡ ಆನೆ, ಜಂಬೂಸವಾರಿ ಅಂಬಾರಿ ಹಾಗೂ ಮಾವುತನ ಸುಂದರ ಚಿತ್ರಣವಿದೆ. ಇದನ್ನೂ ಓದಿ: ದರ್ಶನ್‌ಗೆ ಮತ್ತೆ ಶಾಕ್ – ಮಾಫಿ ಸಾಕ್ಷಿ ಹೇಳಿಕೆ ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿ ವಜಾ
3ಡಿ ಶೈಲಿಯ ನಾಮಫಲಕ:
ಕೆಳಭಾಗದ ಮರೂನ್ ಬಣ್ಣದ ನಾಮಫಲಕದಲ್ಲಿ ಶ್ರೀರಂಗಪಟ್ಟಣ ಮತ್ತು 3ಆ ಶೈಲಿಯಲ್ಲಿ ಹೊಳೆಯುವ ದಸರಾ ಪದವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಚಿನ್ನ, ಕಡು ಹಸಿರು ಮತ್ತು ಕೆಂಪು ಬಣ್ಣಗಳ ಸಂಯೋಜನೆಯು ಈ ಲೋಗೋಗೆ ರಾಜಮನೆತನದ ಗತ್ತನ್ನು ತಂದುಕೊಟ್ಟಿದೆ. ಇದನ್ನೂ ಓದಿ: ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ: ಕೃಷ್ಣ ಬೈರೇಗೌಡ
ರಾಜ್ಯದಲ್ಲಿ ಬರಗಾಲದ ಛಾಯೆ ಇದ್ದರೂ, ನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಕ್ಕೆ ಯಾವುದೇ ಧಕ್ಕೆಯಾಗದಂತೆ ದಸರಾ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇದನ್ನೂ ಓದಿ: ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಬಣದ ಶಾಸಕನ ಕಾರಿನ ಮೇಲೆ ಮೊಟ್ಟೆ, ಕಲ್ಲೆಸೆತ

