– ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್ (Darshan) ಹಾಗೂ ಪವಿತ್ರಾ ಗೌಡಗೆ (Pavithra Gowda) ಶಾಕ್ ಎದುರಾಗಿದೆ. ಪ್ರದೋಷ್ (Pradosh) ಮಾಫಿ ಸಾಕ್ಷಿ ಹೇಳಿಕೆ ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಇತ್ತ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನೂ ವಜಾಗೊಳಿಸಲಾಗಿದೆ.
59ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಅರ್ಜಿ ವಜಾಗೊಳಿಸಿ ಆದೇಶಿಸಿದ್ದಾರೆ. ದರ್ಶನ್ ಪರ ವಾದಿಸಿದ ವಕೀಲ ಹಷ್ಮತ್ ಪಾಷ, ಹೈಕೋರ್ಟ್ ಆದೇಶದ ಪ್ರತಿ ಇಂದಷ್ಟೇ ಸಿಕ್ಕಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ. ಹೀಗಾಗಿ, ಪ್ರದೋಷ್ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ಮುಂದೂಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಮಾಫಿ ಸಾಕ್ಷಿ ತಡೆಯಲು ದರ್ಶನ್ ಕಸರತ್ತು – ಹೇಳಿಕೆ ದಾಖಲು ಮುಂದೂಡಿಕೆಗೆ ಅರ್ಜಿ
ಪ್ರದೋಷ್ಗೆ ಮುನ್ನ ಬೇರೆ ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಕೊಳ್ಳಿ. ನಾವು ಸಹಕಾರ ನೀಡುತ್ತೇವೆ. ಆದರೆ, ನಮಗೆ 10 ದಿನಗಳ ಕಾಲ ಸಮಯಾವಕಾಶ ಬೇಕು. ಹೈಕೋರ್ಟ್ ಆದೇಶದ ಪ್ರತಿ ಸಿಕ್ಕಿದೆ. ಅದನ್ನ ಪರಿಶೀಲನೆ ಮಾಡಬೇಕು. ಇವತ್ತು ಬೆಳಗ್ಗೆ ನಾವು ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಲಿಸ್ಟ್ನಲ್ಲಿ ಇರೋರನ್ನ ಯಾರನ್ನು ಬೇಕಾದ್ರೂ ಹೇಳಿಕೆ ದಾಖಲು ಮಾಡಲಿ ವಕೀಲ ಹಷ್ಮತ್ ಪಾಷ ವಾದಿಸಿದರು.
ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಸ್ವಲ್ಪ ಸಮಯ ಬೇಕಿದೆ. ಪ್ರಾಸಿಕ್ಯೂಷನ್ ಬೇರೆ ಸಾಕ್ಷಿಗಳ ಹೇಳಿಕೆ ನಡೆಸಲಿ. ಪ್ರದೋಷ್ ಹೇಳಿಕೆ ಮಾತ್ರ ಮುಂದೂಡಬೇಕು. ಪ್ರದೋಷ್ ಹೇಳಿಕೆ ದಾಖಲಿಸಲು ಪ್ರಾಸಿಕ್ಯೂಷನ್ ಅವಸರ ಮಾಡುತ್ತಿದೆ. ಸುಪ್ರೀಂ ಕೋರ್ಟ್ಗೆ ಹೋಗಲು ಸ್ವಲ್ಪ ಸಮಯ ಬೇಕಿದೆ. ಹೈಕೋರ್ಟ್ ಸೂಚಿಸಿರುವ 7 ಸಾಕ್ಷಿಗಳ ಪೈಕಿ ಪ್ರದೋಷ್ ಕೂಡ ಒಬ್ಬ. ಉಳಿದ ಸಾಕ್ಷಿಗಳ ಹೇಳಿಕೆ ದಾಖಲು ಪ್ರಕ್ರಿಯೆ ಮಾಡಲಿ. ಆದರೆ, ಪ್ರದೋಷ್ ಹೇಳಿಕೆಯನ್ನ 7ನೇ ಸಾಕ್ಷಿಯಾಗಿ ತೆಗೆದುಕೊಳ್ಳಲಿ. ಸುಪ್ರೀಂಗೆ ಅರ್ಜಿ ಸಲ್ಲಿಕೆಗೆ ಕನಿಷ್ಠ 10 ದಿನಗಳ ಸಮಯ ಬೇಕಿದೆ. ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ಮುಂದೂಡಬೇಕೆಂದು ಮನವಿ ಮಾಡಿದರು. ಇದನ್ನೂ ಓದಿ: ದರ್ಶನ್ಗೆ ಸಂಕಷ್ಟ – ಸೆ.28 ರಂದು ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸಲು ಕೋರ್ಟ್ ಆದೇಶ
ಸರ್ಕಾರಿ ಪರ ವಕೀಲ ಸಚಿನ್ ವಾದ ಮಂಡಿಸಿ, 24ರಂದೇ ಪ್ರದೋಷ್ಗೆ ಸಮನ್ಸ್ ನೀಡಲಾಗಿದೆ. ಹೈಕೋರ್ಟ್ನಲ್ಲಿ ಅರ್ಜಿ ವಾದ ಬಳಿಕವೇ ಸಮನ್ಸ್ ಜಾರಿ ಮಾಡಲಾಗಿದೆ. ಇಲ್ಲಿ ಹೊಸದಾದ ಯಾವುದೇ ಮಾಹಿತಿ, ಸಂಗತಿಗಳಿಲ್ಲ. ಈ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಮನವಿ ಮಾಡಿದರು.
ಕೋರ್ಟ್ ಹಲವು ಬಾರಿ ಹೇಳಿದೆ. ಪ್ರಾಸಿಕ್ಯೂಷನ್ ಇಸ್ ಸುಪ್ರೀಂ ಅಂತ. ಪ್ರಾಸಿಕ್ಯೂಷನ್ಗೆ ಪವರ್ ಇದೆ. ಯಾವ ಸಾಕ್ಷಿಯನ್ನ ಯಾವತ್ತೂ ಕರೆಯಬಹುದು. ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡ್ತಾರೆ. ಅಲ್ಲಿ ವಜಾ ಆದರೆ ಮತ್ತೆ ರಿವ್ಯೂ ಪೆಟಿಷನ್ ಹಾಕ್ತಾರೆ. ಅದಕ್ಕೆ ಕನಿಷ್ಠ ಎರಡರಿಂದ ಆರು ತಿಂಗಳಾಗಬಹುದು. ಅಲ್ಲಿಯತನಕ ಈ ಕೇಸ್ ಏನ್ ಮಾಡೋದು ಎಂದು ಕೇಳಿದರು.
ಪ್ರದೋಪ್ ಪರ ವಕೀಲ ಸಂತೋಷ್ ವಾದಿಸಿ, ಯಾವುದೇ ಕಾರಣಕ್ಕೂ ಅರ್ಜಿ ಪುರಸ್ಕರಿಸಬಾರದು. ಸುಖಾಸುಮ್ಮನೆ ಅರ್ಜಿಗಳನ್ನು ಹಾಕುತ್ತಿದ್ದಾರೆ. ಸೋಮವಾರವೇ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ನಟ ದರ್ಶನ್ಗೆ ಹೈಕೋರ್ಟ್ನಲ್ಲಿ ಮತ್ತೆ ಬಿಗ್ ಶಾಕ್ – ಮಾಫಿ ಸಾಕ್ಷಿ ಪ್ರಶ್ನಿಸಿದ್ದ ಅರ್ಜಿ ವಜಾ
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಿನಾಂಕ ಮುಂದೂಡುವಂತೆ ಕೋರಿ ಆರೋಪಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಸೋಮವಾರ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೋಷ್ ಹೇಳಿಕೆ ದಾಖಲಿಸಲಾಗುವುದು. ಅಲ್ಲದೇ, ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೂಡ ಕೋರ್ಟ್ ವಜಾಗೊಳಿಸಿದೆ.

