– ಕಾಂಗ್ರೆಸ್ ನಾಯಕರೇ ಭಯೋತ್ಪಾದಕರು
– ಮೋಸದ ಗಂಧ ಸಿದ್ದರಾಮಯ್ಯಗೆ ಗೊತ್ತು
– ಧರ್ಮದ ಗಂಧ ಈಶ್ವರಪ್ಪಗೆ ಗೊತ್ತಿದೆ
ಚಿತ್ರದುರ್ಗ: ಕಾಂಗ್ರೆಸ್ ಅವರಿಗೆ ತಾಕತ್ತಿದ್ದರೆ ಬಿಜೆಪಿ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪ ಸಾಬೀತು ಪಡಿಸಲಿ ಎಂದು ಸಾರಿಗೆ ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯ ಪ್ರಚಾರಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ 10%ನ ಪಿತಾಮಹರು ಅವರೇ. ಒಂದು ವೇಳೆ ಕಾಂಗ್ರೆಸ್ ಅವರಿಗೆ ತಾಕತ್ತಿದ್ದರೆ ಬಿಜೆಪಿ ಸರ್ಕಾರದ ವಿರುದ್ಧದ 40% ಆರೋಪ ಸಾಬೀತು ಪಡಿಸಲಿ. ಕೇವಲ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಸರಿಯಲ್ಲ. ಒಂದು ವೇಳೆ ಅವರ ಆರೋಪ ಸಾಬೀತು ಪಡಿಸಿದರೆ ರಾಜಕಾರಣವನ್ನೇ ಬಿಟ್ಟು ಕೊಡುತ್ತೇವೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಅಪ್ಪು ಸಮಾಧಿ ನೋಡಲು ಓಡುತ್ತ ಹೊರಟ ಮೂರು ಮಕ್ಕಳ ತಾಯಿ
Advertisement
Advertisement
ಬಿಟ್ ಕಾಯಿನ್ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಅಧಿಕಾರಿಗಳು ತಪ್ಪಿತಸ್ಥರನ್ನು ಜೈಲಿಗೆ ಹಾಕಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅನೇಕ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ಹಾಗು ಆರ್‍ಎಸ್‍ಎಸ್ ನನ್ನು ಭಯೋತ್ಪಾದಕರು ಎಂದಿದ್ದಾರೆ. ಸಿದ್ದರಾಮಯ್ಯ ಅವರು ಯಾರದ್ದೋ ಮತ ಓಲೈಕೆಗಾಗಿ ಬಿಜೆಪಿ ವಿರುದ್ಧ ಮಾತನಾಡ್ತಿದ್ದಾರೆ. ಆದರೆ ಭಯೋತ್ಪಾದಕರು ನಾವಲ್ಲ, ಕಾಂಗ್ರೆಸ್ ನಾಯಕರೇ ಭಯೋತ್ಪಾದಕರೆಂದು ತಿರುಗೇಟು ನೀಡಿದರು.
Advertisement
ಈ ದೇಶದಲ್ಲಿ ಬಿಜೆಪಿ ಸರ್ಕಾರವಿದ್ದು, ಮೋದಿ ಅವರು ಪ್ರಧಾನಿ ಆಗಿರೋದ್ರಿಂದ ಕೋವಿಡ್ ನಿಂದ ಭಾರತ ಮತ್ತು ದೇಶ ರಕ್ಷಣೆಯಾಗಿದೆ. ಆದರೆ ಒಂದು ವೇಳೆ ಕಾಂಗ್ರೆಸ್ ಆಡಳಿತವಿದ್ದಿದ್ದರೆ ದೇಶಕ್ಕೆ ಬೇರೆ ದೇಶಗಳ ದುಸ್ಥಿತಿ ಬರುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.
Advertisement
ಸಚಿವ ಈಶ್ವರಪ್ಪ ಓರ್ವ ಶೋಮ್ಯಾನ್ ಎಂದಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಗರಂ ಆದ ಅವರು, ಹಿರಿಯ ನಾಯಕರಾದ ಈಶ್ವರಪ್ಪ ಅವರು ಹಿಂದಿನಿಂದಲೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಬಿಜೆಪಿಯಲ್ಲಿ ಹಿಂದುಳಿದವರ ಪರ ಹೋರಾಟ ಮಾಡಿಕೊಂಡು ಬಂದ ದೊಡ್ಡ ವ್ಯಕ್ತಿಯಾಗಿದ್ದಾರೆ. ಅವರ ಬಗ್ಗೆ ಮನಬಂದಂತೆ ಮಾತನಾಡಬಾರದು. ಸಿದ್ದರಾಮಯ್ಯ ಅವರಿಗಿಂತ ಈಶ್ವರಪ್ಪ ಅವರು ಸೀನಿಯರ್ ಲೀಡರ್ ಎಂದು ಗುರುತಿಸಿಕೊಂಡಿದ್ದಾರೆ ಎಂದು ಈಶ್ವರಪ್ಪ ಪರ ಬ್ಯಾಟ್ ಬೀಸಿದರು. ಇದನ್ನೂ ಓದಿ: 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ – ಕಂಟೈನ್ಮೆಂಟ್ ಝೋನ್ ಆಯ್ತು ವೃದ್ಧಾಶ್ರಮ
ರಾಜಕಾರಣದೊಂದಿಗೆ ಪಕ್ಷ ನಿಷ್ಠೆ, ಹಿಂದುತ್ವ ಪರ ಹೋರಾಟ ಮಾಡಿದಂತ ವ್ಯಕ್ತಿ ಈಶ್ವರಪ್ಪ ಅವರಾಗಿದ್ರೆ, ತಮ್ಮ ಸ್ವಾರ್ಥಕ್ಕಾಗಿ ಪಕ್ಷ ಬದಲಾಯಿಸುತ್ತ ಕೆಲವರನ್ನು ತುಳಿದವರು ಸಿದ್ದರಾಮಯ್ಯ ಆಗಿದ್ದಾರೆ. ಜೊತೆಗೆ ಮೋಸದ ಗಂಧ ಸಿದ್ದರಾಮಯ್ಯ ಅವರಿಗೆ ಗೊತ್ತು. ಧರ್ಮದ ಗಂಧ ಈಶ್ವರಪ್ಪಗೆ ಗೊತ್ತಿದೆ ಎಂದರು.
ನಮ್ಮ ಪಕ್ಷದ ದೊಡ್ಡವರ ಬಗ್ಗೆ ಮೋದಿ, ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಾರೆ. ಹಿರಿಯರ ಬಗ್ಗೆ ಮಾತನಾಡಿದ ತಕ್ಷಣ ನಾವು ದೊಡ್ಡವರಾಗ್ತಿವಿ ಅಂತ ಅವರು ಭಾವಿಸಿದ್ದಾರೆ. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದ್ದು, ಈ ಕಾಂಗ್ರೆಸ್ ಪಕ್ಷ ಧೂಳೀಪಟ ಆಗಲಿದೆ ಎಂದು ಟೀಕಿಸಿದರು.
ಈ ವೇಳೆ ಶಾಸಕರಾದ ತಿಪ್ಪಾರೆಡ್ಡಿ, ಪೂರ್ಣಿಮಾ ಅವರು ಸಹ ಇದ್ದರು.