ಬೆಂಗಳೂರು: ರಾಜ್ಯದ ಜನ ಎದುರು ನೋಡ್ತಿರುವ SIR ಕರಡು ಮತದಾರರ ಪಟ್ಟಿ ಇಂದು (ಆ.24) ರಿಲೀಸ್ ಆಗಲಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದಿಯಾ, ಇಲ್ವಾ ಎಂದು ಚೆಕ್ ಮಾಡಿಕೊಳ್ಳಬಹುದು. ಬರೋಬ್ಬರಿ 1.07 ಕೋಟಿ ಮತದಾರರು ಹೆಸರು ಡಿಲೀಟ್ ಆಗಿದ್ದು, ಮ್ಯಾಪಿಂಗ್ ಆಗದಿರುವ 43 ಲಕ್ಷ ಮತದಾರರಿಗೆ ಬಿಎಲ್‌ಓಗಳು ನೋಟಿಸ್ ಜಾರಿ ಮಾಡಲಿದ್ದಾರೆ.
ಎಸ್‌ಐಆರ್‌ನ (SIR) ಮನೆ ಮನೆ ಸಮೀಕ್ಷೆ ಮುಕ್ತಾಯದ ಬಳಿಕ ಕರಡು ಮತದಾರರ ಪಟ್ಟಿ ಇಂದು ರಿಲೀಸ್ ಆಗ್ತಿದೆ. ರಾಜ್ಯದಲ್ಲಿ 5.55 ಕೋಟಿ ಎನಮ್ಯೂರೇಷನ್ ಫಾರಂ ವಿತರಣೆ ಮಾಡಿ, ಮತದಾರರಿಂದ ಫಾರಂ ಭರ್ತಿ ಮಾಡಿಸಿ ಕರಡು ಮತದಾರರ ಪಟ್ಟಿ ರಿಲೀಸ್ ಮಾಡ್ತಿದೆ. ಇದನ್ನೂ ಓದಿ: ಎಸ್‌ಐಆರ್‌ನಲ್ಲಿ ಮ್ಯಾಪಿಂಗ್ ಆಗದೇ ಇರುವವರಿಗೆ ಜಾರಿಯಾಗಲಿದೆ ನೋಟಿಸ್
ಈಗಾಗಲೇ ಚುನಾವಣಾ ಆಯೋಗ (Election Commission) ತಿಳಿಸಿರುವ ಮಾಹಿತಿ ಪ್ರಕಾರ, 4.34 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಪ್ರಕಟ ಆಗಲಿದೆ. 1.07 ಕೋಟಿ ಮತದಾರರನ್ನ ಎಎಸ್‌ಡಿಡಿಒ ಅಂತಾ ಗುರುತು ಮಾಡಲಾಗಿದೆ. ಇವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟ ಆಗುವುದಿಲ್ಲ. ಅದರ ಜೊತೆಗೆ ಅನ್ ಮ್ಯಾಪಿಂಗ್ ಆಗಿರುವ ರಾಜ್ಯದ 43 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಜೊತೆಗೆ ಸೂಕ್ತ ದಾಖಲಾತಿಗಳನ್ನ ಸಲ್ಲಿಸಿ ನಾವು ಮತದಾರರು ಅಂತಾ ರುಜುವಾತು ಮಾಡಿಕೊಳ್ಳಬೇಕಿದೆ.
ರಾಜ್ಯದಲ್ಲಿ 43.84 ಲಕ್ಷ ಮತದಾರರಿಗೆ ನೋಟಿಸ್ ಬರಲಿದೆ. ಬೆಂಗಳೂರಿನಲ್ಲಿ 23 ಲಕ್ಷ ಮತದಾರರಿಗೆ ನೋಟಿಸ್ ಬರಲಿದೆ. ನೋಟಿಸ್ ಪಡೆದ ಮತದಾರರು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿ ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗಿದೆ. ನೋಟಿಸ್ ಪಡೆದು ಪ್ರತಿಕ್ರಿಯೆ ನೀಡುವಾಗ ನಾವು ಮತದಾರರು ಅಂತಾ ಪ್ರೂವ್ ಮಾಡಬೇಕಿದೆ. ಆಗ ಮತದಾರರ ಪಟ್ಟಿಯಲ್ಲಿ ಹೆಸರು ಪಡೆಯಲು ಸಾಧ್ಯತೆ ಇದೆ.ಇದನ್ನೂ ಓದಿ: ಕೋಳಿ ಫಾರ್ಮ್ ಹೆಸರಲ್ಲಿ ಡ್ರಗ್ಸ್ ಫ್ಯಾಕ್ಟರಿ – ಮೂರು ರಾಜ್ಯಗಳಿಗೆ ಸಪ್ಲೈ ಮಾಡ್ತಿದ್ದ 7 ಮಂದಿ ಅಂದರ್
ಯರ‍್ಯಾರಿಗೆ ನೋಟಿಸ್?
1. ಮ್ಯಾಪಿಂಗ್ ಆಗದೇ ಇರುವವರಿಗೆ ನೋಟಿಸ್ ಜಾರಿ
2. ಮತದಾರರ ಸ್ಥಳ, ಗ್ರಾ.ಪಂ ವ್ಯಾಪ್ತಿಯಲ್ಲಿ ನೋಟಿಸ್
3. ನೋಟಿಸ್ ಜಾರಿ ಮಾಡಿ ಬಿಆರ್‌ಓಗಳಿಂದ ತನಿಖೆ
4. ನಾನು ಮತದಾರ ಅಂತಾ ಪ್ರೂವ್ ಮಾಡಿಕೊಳ್ಳಬೇಕು
5. ನೋಟಿಸ್ ಬಳಿಕ ದಾಖಲಾತಿ ಸಲ್ಲಿಕೆ ಮಾಡಬೇಕು
6. 12 ದಾಖಲಾತಿಗಳಲ್ಲಿ ಒಂದು ದಾಖಲಾತಿ ಕೊಡಬೇಕು
7. ನೋಟಿಸ್ ಪಡೆದ 7 ದಿನಗಳಲ್ಲಿ ಪ್ರತಿಕ್ರಿಯೆ ನೀಡಬೇಕು
ಕರಡು ಮತದಾರರ ಪಟ್ಟಿ ರಿಲೀಸ್ ಆದ ಬಳಿಕ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ ಇಲ್ವಾ ಅಂತಾ ಚೆಕ್ ಮಾಡಿಕೊಳ್ಳಬಹುದಾಗಿದೆ. ಚುನಾವಣಾ ಆಯೋಗದ ವೆಬ್ ಸೈಟ್, ಸೋಷಿಯಲ್ ಮೀಡಿಯಾ ಬಿಎಲ್‌ಓ ಕಛೇರಿಗಳಲ್ಲಿ ಪ್ರಕಟ ಮಾಡಲಾಗುತ್ತದೆ.
ಮತದಾರರ ಪಟ್ಟಿಯಲ್ಲಿ ಹೆಸರು ಇನ್ನಿತರ ದೋಷ ಇದ್ರೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಆಗಸ್ಟ್ 24 ರಿಂದ ಸೆಪ್ಟೆಂಬರ್ 23ರವರೆಗೆ ಕಾಲಾವಕಾಶ ಇದೆ. ಅಂತಿಮ ಮತದಾರರ ಪಟ್ಟಿ ಪ್ರಕಟ ಅಕ್ಟೋಬರ್ 10ನೇ ತಾರೀಖು ರಿಲೀಸ್ ಆಗಲಿದೆ. ಫಾರಂ 6 ಅಡಿ ಕೂಡ ಹೊಸದಾಗಿ ಮತದಾರರು ಸೇರ್ಪಡೆ ಆಗಬಹುದು. ಒಂದಷ್ಟು ಮಂದಿ ಸೇರ್ಪಡೆ ಆದರೆ ಡಿಲೀಟ್ ಸಂಖ್ಯೆ ಕಡಿಮೆ ಆಗಲಿದೆ.ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಆದೇಶ
