ಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ಬಂದಿದ್ದು, ಬೆಂಗಳೂರಿನಲ್ಲೇ (Bengaluru) 49 ಲಕ್ಷ ಮತದಾರರನ್ನ ಮತದಾರರ ಪಟ್ಟಿಯಿಂದ ಕೈ ಬಿಡುವ ಸಾಧ್ಯತೆ ಇದೆ.
ಈಗಾಗಲೇ ಆ.8ಕ್ಕೆ ಇದ್ದ ಮನೆ ಮನೆ ಪರಿಶೀಲನೆಯನ್ನು ಆಗಸ್ಟ್ 17ರವರೆಗೂ ವಿಸ್ತರಣೆ ಮಾಡಿದ್ದು, ಇದರ ಮದ್ಯೆ ಆತಂಕಪಡುವಂತಹ ವಿಚಾರ ಬಯಲಾಗಿದೆ. ಬೆಂಗಳೂರಿನಲ್ಲಿ (Bengaluru) 49 ಲಕ್ಷ ಮತದಾರರನ್ನ ಮತದಾರರ ಪಟ್ಟಿಯಿಂದ ಕೈ ಬಿಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ 1.3 ಕೋಟಿ ಮತದಾರರು ಇದ್ದು, ಅದರಲ್ಲಿ ಡೆತ್ ಅದವರು, ಶಿಫ್ಟ್ ಆದವರು, ಈಗಾಗಲೇ ಎನ್ರೋಲ್ ಆಗಿರುವರು, ಶಾಶ್ವತವಾಗಿ ಬೇರೆ ಕಡೆ ಹೋಗಿರವವರನ್ನು 49 ಲಕ್ಷ ಅಂತಾ ಗುರುತಿಸಲಾಗಿದೆ. ಇದನ್ನೂ ಓದಿ: ಅದಾನಿ ಕಂಪನಿಗೆ ಗುಡ್‌ನ್ಯೂಸ್ – ಕ್ರಿಮಿನಲ್ ಆರೋಪ ಕೈಬಿಟ್ಟ ಅಮೆರಿಕ
ಬೆಂಗಳೂರಿನಲ್ಲಿ 49 ಲಕ್ಷ ಮತದಾರರು ಹೆಸರು ಡೀಲಿಟ್ ಆಗುವ ಸಾಧ್ಯತೆ ಇದ್ದು, ಇದನ್ನ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಎಡಿಎಸ್‌ಎಸ್‌ಒ ಅಂತಾ ಗುರುತು ಮಾಡಿರೋ ಪ್ರಕರಣಗಳನ್ನ ಮಾರ್ಕ್ ಮಾಡಿ ಮಹಜರು ಮಾಡೋದಕ್ಕೆ ಸೂಚನೆ ನೀಡಲಾಗಿದೆ. ಜೊತೆಗೆ ಎರಡೆರಡು ಬಾರಿ ಮಾರ್ಕಿಂಗ್ ಮಾಡಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಇದ್ದ ವಿದ್ಯಾರ್ಥಿಗಳು, ಸೈನಿಕರು, ಬೇರೆ ರಾಜ್ಯದಿಂದ ವೃತ್ತಿಗೆ ಅಂತಾ ಬಂದವರು ತುಂಬಾ ಮಂದಿ ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ. ಆಗಾಗಿ ಮತದಾರರು ತುಂಬಾ ಜನ ಡೀಲಿಟ್ ಆಗ್ತಾ ಇದ್ದಾರೆ. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸುಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ ರಾವ್ ಅವರು ತಿಳಿಸಿದ್ದಾರೆ.ಇದನ್ನೂ ಓದಿ: ಶಿವಗಂಗೆಯಲ್ಲಿ ಟೆಕ್ಕಿ ನಾಪತ್ತೆ ಕೇಸ್ – ಅದ್ವೈತ್‌ನ ನಡೆಯ ಬಗ್ಗೆ ಈಗ ಭಾರೀ ಅನುಮಾನ

