Bengaluru CityDistrictsKarnatakaLatestMain Post

ಹೈಜಾಕ್ ಮಾಡೋದಕ್ಕೆ ಮೇಕೆದಾಟು ಯೋಜನೆಯನ್ನು ಹೆಚ್‌ಡಿಕೆ ಮಾಡಿದ್ರಾ: ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಹೈಜಾಕ್ ಮಾಡೋದಕ್ಕೆ ಮೇಕೆದಾಟು ಯೋಜನೆಯನ್ನು ಹೆಚ್.ಡಿ.ಕುಮಾರಸ್ವಾಮಿ ಮಾಡಿದ್ದಾರಾ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.

ನಮ್ಮ ಯಾತ್ರೆಯನ್ನು ಕಾಂಗ್ರೆಸ್‌ನವರು ಹೈಜಾಕ್ ಮಾಡಿದ್ರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ಡಿಟೇಲ್ ಪ್ರಾಜೆಕ್ಟ್ ಮಾಡಿ ಕೇಂದ್ರಕ್ಕೆ ನಾವು ಕಳಿಸಿದ್ದೇವೆ. ನಾನು ಸಿಎಂ ಆಗಿದ್ದಾಗ ಡಿಪಿಆರ್ ಸಿದ್ಧಪಡಿಸಿದ್ದೆವು. ನಮ್ಮ ಯೋಜನೆ ಅನುಷ್ಠಾನಗೊಳಿಸಲಿಕ್ಕಾಗಿ ನಾವು ಪಾದಯಾತ್ರೆ ಆರಂಭಿಸುತ್ತಿದ್ದೇವೆ ಎಂದರು.

ಈ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಏಕೆ ಹೊಟ್ಟೆಯುರಿ? ಪಾದಯಾತ್ರೆ ಹೈಜಾಕ್ ಅಂದರೆ ಏನರ್ಥ? ಹೈಜಾಕ್ ಮಾಡಲು ಅದೇನು ಸರ್ಕಾರಿ ಕಾರ್ಯಕ್ರಮವಾಗಿದೆಯಾ? ಪೊಲಿಟಿಕಲ್ ಪಾರ್ಟಿಯಾಗಿ ನಾವು ಈ ಹೋರಾಟ ಮಾಡುತ್ತಿದ್ದೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮಾಜಿ ಸಿಎಂ ಎಚ್‌ಡಿಕೆ ಒಳ್ಳೆಯ ನಾಯಕ ಹಾಗೂ ಸಾಹಿತಿ: ಡಿಕೆಶಿ ವ್ಯಂಗ್ಯ

ನೈಟ್ ಕರ್ಫ್ಯೂ ಬಗ್ಗೆ ಮಾತಾನಾಡಿದ ಅವರು, ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಆದರೆ ನಾವು ಬೆಳಗ್ಗೆ ಪಾದಯಾತ್ರೆ ನಡೆಸುತ್ತೇವೆ. ನೈಟ್ ಯಾತ್ರೆ ಮಾಡಲ್ಲ. ನೈಟ್ ಕರ್ಫ್ಯೂನಿಂದ ನಮ್ಮ ಯಾತ್ರೆಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ನೀರಿನ ಮುಂದೆ ʼಕಪಟ ನಾಟಕʼ ಮಾಡುವ ಸಿದ್ದಹಸ್ತ, ಕಲ್ಲುಬಂಡೆಗಳನ್ನೇ ನುಂಗಿದ ʼರಕ್ಕಸ ರಾಜಕಾರಣ’

Leave a Reply

Your email address will not be published.

Back to top button