ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.
ಸಿಕ್ಕಿಂ ಮೂಲದ 22 ವರ್ಷದ ಐಪಿ ಹಂಗ್ಮಾ ಮೃತ ಯುವತಿ. ಪ್ರಿಯಕರ ಫುರ್ಬಾ ಲೇಪ್ಸಾ ಕೊಲೆಗೈದ ಆರೋಪಿ.
ಇಬ್ಬರೂ ಮೂಲತಃ ಸಿಕ್ಕಿಂ ನಿವಾಸಿಗಳಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಪ್ರೀತಿಯ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.ಇದನ್ನೂ ಓದಿ: ಸ್ಕೂಟರ್ ಡಿಕ್ಕಿ ಹೊಡೆದು ರಸ್ತೆ ಮೇಲೆ ಬಿದ್ದ ಪೊಲೀಸ್ ಮೇಲೆ ಹರಿದ ಟ್ರಕ್; ದಾರುಣ ಸಾವು
ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ಫುರ್ಬಾ ಲೇಪ್ಸಾ, ಯುವತಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಐಪಿ ಹಂಗ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ಳಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಚಂಡೀಗಢದಲ್ಲಿ ಹಾಡಹಗಲೇ ಭೀಕರ ಹತ್ಯೆ – ಮೆಡಿಕಲ್ ಶಾಪ್‌ಗೆ ನುಗ್ಗಿ ಕ್ಯಾಷಿಯರ್‌ಗೆ ಗುಂಡಿಕ್ಕಿ ಕೊಲೆ
