ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ (Gruhalakshmi Scheme) ಮೂರು ವರ್ಷ ತುಂಬುತ್ತಿರುವ ಹೊತ್ತಲ್ಲೇ ಇದೀಗ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಬಿಗ್ ಶಾಕ್ ಕಾದಿದೆ.
ಹೌದು, ಗೃಹಲಕ್ಷ್ಮೀ ಮರು ಪರಿಶೀಲನೆಗೆ ಸರ್ಕಾರ ನಿರ್ಧರಿಸಿದ್ದು, ಇಂದು (ಆ.31) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ಇದರ ಬೆನ್ನಲ್ಲೇ ಶಾಕ್‌ವೊಂದನ್ನು ನೀಡಲಿದೆ. ಮರು ಪರಿಶೀಲನೆಗಾಗಿ ಸರ್ವೆ ಆರಂಭವಾದರೆ ಆ ಸಮಯದಲ್ಲಿ ಫಲಾನುಭವಿಗಳ ಖಾತೆಗೆ ದುಡ್ಡು ಬರೋದು ಡೌಟ್ ಎನ್ನಲಾಗ್ತಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಉದ್ಯಮಿ ಕಿಡ್ನ್ಯಾಪ್ ಆರೋಪ; ಆಂಧ್ರದ ಮೈದುಕುರ್ ಶಾಸಕರ ವಿರುದ್ಧ FIR
ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಇಂದು ಗೃಹಲಕ್ಷ್ಮೀ ಮರುಪರಿಶೀಲನೆ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದು, ಅದಾದ ಬಳಿಕ ಮೂರು ದಿನದಲ್ಲಿ ಸರ್ವೆ ಆರಂಭವಾಗಲಿದೆ. ಸರ್ವೆ ಆರಂಭವಾಗಿ ಅನರ್ಹರನ್ನ ಪತ್ತೆ ಹಚ್ಚಿದ ಬಳಿಕ ಗೃಹಲಕ್ಷ್ಮೀ ಹಣ ಪಾವತಿ ಆಗಲಿದೆ. ಹೀಗಾಗಿ ಒಂದು ತಿಂಗಳ ಒಳಗೆ ಸರ್ವೆ ಮುಗಿಸಲು ಸರ್ಕಾರ ಸೂಚನೆ ನೀಡಲಿದ್ದು, ಆದರೆ ಒಂದೇ ತಿಂಗಳಲ್ಲಿ ಮುಗಿಯೋದು ಕಷ್ಟ ಎನ್ನಲಾಗ್ತಿದೆ.
