ಹಲವು ದಿನಗಳಿಂದ ನಟ ನಾಗಚೈತನ್ಯ ಮತ್ತು ನಟಿ ಶೋಭಿತಾ ಡೇಟಿಂಗ್ ನಲ್ಲಿದ್ದಾರೆ ಎಂದು ಸುದ್ದಿ ಹರಡಿತ್ತು. ಈ ಕುರಿತು ನಾಗಚೈತನ್ಯ ಅವರ ಮಾಜಿ ಪತ್ನಿ ಸಮಂತಾ ಕೂಡ ಪರೋಕ್ಷವಾಗಿ ಈ ಜೋಡಿಗೆ ಟಾಂಗ್ ಕೊಟ್ಟಿದ್ದರು. ಹಾಗಾಗಿ ಇಬ್ಬರ ಮಧ್ಯೆ ಏನೋ ನಡೀತಾ ಇದೆ ಎಂಬ ಗಾಸಿಪ್ ಕೂಡ ಹರಿಬಿಡಲಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ ಶೋಭಿತಾ. ನಾಗಚೈತನ್ಯ ಜೊತೆ ಲವ್ವೂ ಇಲ್ಲ ಡೇಟಿಂಗ್ ಕೂಡ ನಡೆದಿಲ್ಲ ಎಂದಿದ್ದಾರೆ.
ವಾಹಿನಿಯೊಂದರ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಶೋಭಿತಾ, ‘ನಾನು ಈವರೆಗೂ ನಾಗಚೈತನ್ಯ ಅವರನ್ನು ಭೇಟಿಯಾಗಿದ್ದು ಕೇವಲ ಎರಡೇ ಎರಡು ಬಾರಿ. ಅದೂ ಹಾಯ್, ಬೈ ಲೆಕ್ಕದಲ್ಲಿ ಮಾತ್ರ. ತೀರಾ ಪರಿಚಯವೂ ಇಲ್ಲ. ಕ್ಲೋಸ್ ಕೂಡ ಇಲ್ಲ. ನಾನು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎನ್ನುವ ಸುದ್ದಿ ಹೇಗೆ ಹರಡಿತೋ ಗೊತ್ತಿಲ್ಲ. ಈ ವಿಷಯ ನನಗೂ ತಲುಪಿದಾಗ ಅಚ್ಚರಿ ಆಯಿತು. ಶಾಕ್ ಕೂಡ ಆಯಿತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:ಅಸ್ಸಾಂ ಪ್ರವಾಹ ಪೀಡಿತರ ಸಂಕಷ್ಟಕ್ಕೆ ಮಿಡಿದ ಆಮೀರ್ ಖಾನ್
ನಾಗಚೈತನ್ಯ ಮತ್ತು ಶೋಭಿತಾ ವಿಚಾರವಾಗಿ ಕಳೆದ ಎರಡು ವಾರಗಳಿಂದಲೂ ಸುದ್ದಿ ಆಗುತ್ತಿದೆ. ಸಮಂತಾ ಮಾಡಿರುವ ಕಾಮೆಂಟ್ ಗೆ ಶೋಭಿತಾ ಕೂಡ ರಿಯ್ಯಾಕ್ಟ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಎಲ್ಲ ವಿಚಾರಗಳಿಗೂ ಶೋಭಿತಾ ತೆರೆ ಎಳೆದಿದ್ದಾರೆ. ನಾಗಚೈತನ್ಯ ಜೊತೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.