ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೊಸ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವ ಸುದ್ದಿಯನ್ನು ಈ ಹಿಂದೆ ಪಬ್ಲಿಕ್ ಟಿವಿ ಡಿಜಿಟೆಲ್ ಬ್ರೇಕ್ ಮಾಡಿತ್ತು. ಆದರೆ, ನಿರ್ದೇಶಕರು ಇನ್ನೂ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡದೇ ಇರುವ ಕಾರಣಕ್ಕಾಗಿ ಈ ಸುದ್ದಿ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ ಎಂದು ಬರೆಯಲಾಗಿತ್ತು. ಆದರೆ, ಇದೀಗ ರಜನಿ ಜತೆ ಶಿವರಾಜ್ ಕುಮಾರ್ ಸಿನಿಮಾ ಮಾಡುವುದು ಪಕ್ಕಾ ಆಗಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?
ರಜನಿ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಶಿವಣ್ಣನ ಮನೆಗೆ ನೆಲ್ಸನ್ ದಿಲೀಪ್ ಕುಮಾರ್ ಭೇಟಿ ನೀಡಿ, ಕಥೆ ಮತ್ತು ಪಾತ್ರದ ವಿವರಣೆಯನ್ನೂ ನೀಡಿದ್ದಾರೆ. ಪಾತ್ರವು ತೆರೆಯ ಮೇಲೆ ತುಂಬಾ ಹೊತ್ತು ಇಲ್ಲದೇ ಇದ್ದರೂ ಅದೊಂದು ಪವರ್ ಫುಲ್ ಪಾತ್ರವಾಗಿದ್ದು, ಆ ಪಾತ್ರವನ್ನು ಶಿವರಾಜ್ ಕುಮಾರ್ ಒಪ್ಪಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್
ಸಾಮಾನ್ಯವಾಗಿ ಶಿವರಾಜ್ ಕುಮಾರ್ ಪರಭಾಷಾ ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಳ್ಳುವುದಿಲ್ಲ. ಆದರೆ, ರಜನಿ ಮೇಲಿರುವ ಗೌರವದಿಂದಾಗಿ ಈ ಚಿತ್ರವನ್ನು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ರಜನಿ ನಟನೆಯ ಸಿನಿಮಾ ತೆರೆಯ ಮೇಲೆ ಬರುತ್ತಿದೆ. ಇದನ್ನೂ ಓದಿ : ಹಾಲಿವುಡ್ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್
ಈ ಹಿಂದೆ ಬಾಲಕೃಷ್ಣ ನಟನೆಯ ‘ಗೌತಮಪುತ್ರ ಶಾತಕರ್ಣಿ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಅದನ್ನು ಬಿಟ್ಟರೆ, ಪರಭಾಷಾ ಸಿನಿಮಾಗಳಲ್ಲಿ ನಟಿಸುವಂತೆ ಅವಕಾಶ ಬಂದರೂ, ನಿರಾಕರಿಸಿದ್ದಾರೆ. ಹಾಗಾಗಿ ಸೂಪರ್ ಸ್ಟಾರ್ ನಟನೆಯ 169ನೇ ಚಿತ್ರದಲ್ಲಿ ಶಿವರಾಜ್ ಕುಮಾರ್ ಇರಲಿದ್ದಾರಾ ಎನ್ನುವ ಕುತೂಹಲ ಅವರ ಅಭಿಮಾನಿಗಳದ್ದು.