CinemaLatestMain PostSouth cinema

ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

ವಿಶ್ವದ್ಯಾದಂತ ಕನ್ನಡ `ಕೆಜಿಎಫ್’ ಸಿನಿಮಾ ಸೆನ್ಸೆಷನಲ್ ಕ್ರಿಯೇಟ್ ಮಾಡಿದೆ. ಪ್ರಶಾಂತ್ ನೀಲ್ ಮತ್ತು ಯಶ್ ಸೂಪರ್ ಹಿಟ್ ಚಿತ್ರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಕ್ಸಸ್ ಬೆನ್ನೆಲ್ಲೆ `ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್‌ಟಿಆರ್ ಒಟ್ಟಿಗೆ ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ಮಾಸ್ಟರ್‌ ಮೈಂಡ್ ಪ್ರಶಾಂತ್ ನೀಲ್ ಮುಂದೆ ಏನ್ಮಾಡ್ತಾರೆ ಎಂಬ ಪ್ರಶ್ನೆಗೆ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಜ್ಯೂ.ಎನ್‌ಟಿಆರ್‌ಗೆ ಆ್ಯಕ್ಷನ್ ಕಟ್ ಹೇಳೋದಕ್ಕೆ ನೀಲ್ ರೆಡಿಯಾಗಿದ್ದಾರೆ. ಆದರೆ ಈ ಚಿತ್ರದ ಕುರಿತು ಯಾವುದೇ ಅಪ್‌ಡೇಟ್ ಹೊರ ಬಿದ್ದಿಲ್ಲ. ಈ ನಡುವೆ ಪ್ರಶಾಂತ್ ನೀಲ್ ದಂಪತಿ ನಿನ್ನೆ ಜ್ಯೂ.ಎನ್‌ಟಿಆರ್ ನಿವಾಸಕ್ಕೆ ಭೇಟಿ ನೀಡಿ, ಅವರ ಕುಟುಂಬದವರೊಂದಿಗೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

 

View this post on Instagram

 

A post shared by Jr NTR (@jrntr)

ಒಂದೇ ದಿನ ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವದ ದಿನವಾಗಿದ್ದು, ಈ ಸಂಭ್ರಮವನ್ನ ಒಟ್ಟಿಗೆ ಸೆಲೆಬ್ರೇಟ್ ಮಾಡಿದ್ದಾರೆ. ನೀಲ್ ಮತ್ತು ಜ್ಯೂ.ಎನ್‌ಟಿಆರ್ ತಮ್ಮ ಪತ್ನಿಯರೊಂದಿಗೆ ಪೋಸ್ ನೀಡಿದ್ದು, ಹೊಸ ಆರಂಭಕ್ಕೆ ಚಿಯರ್ಸ್ ಎಂದಿದ್ದಾರೆ. ಈ ಸೆಲೆಬ್ರೇಷನ್‌ನಲ್ಲಿ `ಕೆಜಿಎಫ್’ ಛಾಯಾಗ್ರಾಹಕ ಭುವನ್ ಗೌಡ ಪಾಲ್ಗೋಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗ್ತಿದೆ. ಇದನ್ನೂ ಓದಿ: ರಶ್ಮಿಕಾ ನಟನೆಯ ಸಾಮಿ.. ಸಾಮಿ ಹಾಡಿಗೆ ಜಬರ್ದಸ್ತ್ ಹೆಜ್ಜೆ ಹಾಕಿದ ವೃದ್ಧೆ

`ಕೆಜಿಎಫ್ 2′ ಸೂಪರ್ ಸಕ್ಸಸ್‌ನಲ್ಲಿರೋ ನೀಲ್, ಪ್ರಭಾಸ್ ನಟನೆಯ `ಸಲಾರ್’ನಲ್ಲಿ ಬ್ಯುಸಿಯಾಗಿದ್ದಾರೆ. ಬಳಿಕ ಜ್ಯೂ.ಎನ್‌ಟಿಆರ್ ಮತ್ತು ನೀಲ್ ಕಾಂಬಿನೇಷನ್ ಚಿತ್ರ ಬರಲಿದೆ. ಸದ್ಯ ಫೋಟೋ ನೋಡಿ ಫಿದಾ ಆಗಿರೋ ಫ್ಯಾನ್ಸ್, ಇವರಿಬ್ಬರ ಡೆಡ್ಲಿ ಕಾಂಬಿನೇಷನ್ ನೋಡಲು ಕಾಯ್ತಿದ್ದಾರೆ.

Leave a Reply

Your email address will not be published.

Back to top button