ಮುಂಬೈ: ಪೊಲೀಸ್ ಠಾಣೆಯಲ್ಲೇ ಮಹಿಳೆಯೊಬ್ಬಳು ಶಿವಸೇನೆಯ (Shiv Sena) ಯುವ ನಾಯಕ ಸಿದ್ದೇಶ್ ಅಭಂಗೇ (Siddhesh Abhange) ಅವರ ಹಲ್ಲೆ ನಡೆಸಿದ ಘಟನೆ ಥಾಣೆಯಲ್ಲಿ ನಡೆದಿದೆ.
ಸೋಮವಾರ (ಸೆ.28) ರಾತ್ರಿ ನಗರದ ಕೋಪ್ರಿ ಪೊಲೀಸ್ ಠಾಣೆಯಲ್ಲಿ ಈ ಹಲ್ಲೆ ನಡೆದಿದೆ. ಅಭಂಗೇ ಮತ್ತು ಜವಳಿ ಉದ್ಯಮದಲ್ಲಿ ತೊಡಗಿರುವ ಕೆಲವು ಮಹಿಳೆಯರ ನಡುವಿನ ಹಣಕಾಸಿನ ವಿವಾದವೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ. ಘಟನೆಯ ಬಳಿಕ ಆ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ | ಕತ್ತು ಹಿಸುಕಿ ಗಂಡನಿಂದಲೇ ಹೆಂಡತಿಯ ಕೊಲೆ
ಹಣಕಾಸಿನ ವಿವಾದ ಬಗೆಹರಿಸಿಕೊಳ್ಳಲು ಮಹಿಳೆಯರ ಗುಂಪು ಹಾಗೂ ಅಭಂಗೇ, ಕೋಪ್ರಿ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ, ಮಹಿಳಾ ಉದ್ಯಮಿಯೊಬ್ಬಳು ತನ್ನ ಸಹಚರನ ಜೊತೆ ಸೇರಿ ಅಭಂಗೇ ಮೇಲೆ ಹಲ್ಲೆ ನಡೆಸಿದ್ದಾಳೆ. ತಕ್ಷಣ ಠಾಣೆಯಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ (FIR) ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಎರಡೂ ಕಡೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೇಲೂರು | ಆಸ್ತಿಗಾಗಿ ತಮ್ಮನನ್ನೇ ಚಾಕು ಇರಿದು ಹತ್ಯೆಗೈದ ಅಣ್ಣ

