ಉಡುಪಿ: ಶಿರೂರು ಶ್ರೀಗಳ ಜೊತೆ ನನಗೆ ಆತ್ಮೀಯ ಸಂಪರ್ಕವಿತ್ತು. ಗುರುವಾರ ಬೆಂಗಳೂರಲ್ಲಿ ಇದ್ದ ಕಾರಣ ಅಂತ್ಯಕ್ರಿಯೆಗೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಇಂದು ಶ್ರೀಗಳ ಸಮಾಧಿಗೆ ತೆರಳಿ ಆರ್ಶೀವಾದ ಪಡೆದಿದ್ದೇನೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಶ್ರೀಗಳ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ಕುರಿತು ಯಾವುದೇ ವಿಚಾರಗಳು ನನ್ನ ಗಮನಕ್ಕೆ ಬಂದಿಲ್ಲ. ಇದರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ಈ ಹಿಂದೆ ಶ್ರೀಗಳನ್ನು ಭೇಟಿ ಮಾಡಿದ್ದೆ, ಅವರೊಂದಿಗೆ ಆತ್ಮೀಯತೆಯಿಂದ ಇದ್ದೇವು. ಹಾಗಾಗಿ ಆ ಆತ್ಮೀಯತೆಗಾಗಿ ಬಂದ್ದಿದ್ದೇನೆ ಹೊರತು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಬಂದಿಲ್ಲ ಎಂದರು.
Advertisement
ಶ್ರೀಗಳ ಸಾವಿನ ಬಗ್ಗೆ ಕುರಿತು ತನಿಖೆ ನಡೆಸುವುದು ಜಿಲ್ಲಾಡಳಿತ ಮತ್ತು ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಸಂಬಂಧಿಸಿದ್ದು, ನಾನು ಇದರಲ್ಲಿ ಭಾಗಿಯಾಗುವುದಿಲ್ಲ. ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ ಬೇರೆಯವರ ಬಗ್ಗೆ ಮಾತನಾಡುವುದಿಲ್ಲ ಎಂದರು.
Advertisement
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮತ್ತು ಅಭಯ ಚಂದ್ರ ಜೈನ್ ಆಗಮಿಸಿ ಶ್ರೀಗಳ ಸಮಾಧಿಗೆ ನಮನ ಸಲ್ಲಿಸಿದರು.