ಬೆಂಗಳೂರು: ಮೂವತ್ತು ವರ್ಷದ ಬಳಿಕ ಶನಿ ತನ್ನ ಪಥವನ್ನ ಬದಲಾವಣೆ ಮಾಡುತ್ತಿದ್ದಾನೆ. ಧನಸ್ಸು ರಾಶಿಯಿಂದ ಮಕರ ರಾಶಿಗೆ ಬದಲಾವಣೆ ಮಾಡುತ್ತಿದ್ದು, ಧನಸ್ಸು, ಮಕರ ಮತ್ತು ಕುಂಭ ರಾಶಿಗಳ ಮೇಲೆ ಗಾಢ ಪರಿಣಾಮ ಬೀರಲಿದೆ.
ಜೊತೆಗೆ ರಾಜಕೀಯ ನಾಯಕರಾದ ನರೇಂದ್ರ ಮೋದಿ, ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ಸೇರಿದಂತೆ ಈ ನಾಯಕರ ಶನಿಪಥ ಬದಲಾವಣೆ ಸಂದರ್ಭದಲ್ಲಿ ಇವರ ರಾಶಿಗಳಿಗೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ರೇಣುಕಾರಾಧ್ಯ ಅವರು ರಾಶಿ ಫಲಾಫಲವನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಮಕರ, ಕುಂಭ, ಧನಸ್ಸು ರಾಶಿ ಮೇಲೆ ಶನಿಯ ಗಾಢ ಪ್ರಭಾವ- ರೇಣುಕಾರಾಧ್ಯ ಗುರೂಜಿ ಭವಿಷ್ಯ
ನರೇಂದ್ರ ಮೋದಿ, ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ, ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿಯವರ ರಾಶಿಗಳ ಮೇಲೆ ಶನಿಕಾಟ ಯಾವ ರೀತಿ ಇದೆ ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ.
* ದೇವೇಗೌಡ: ಮಾಜಿ ಪ್ರಧಾನಿ ದೇವೇಗೌಡರಿಗೆ ಏಳೂವರೆ ವರ್ಷಗಳ ಕಾಲ ಶನಿ ಕಾಟ ಇರಲಿದೆ. ದೇವೇಗೌಡರದ್ದು ಕುಂಭ ರಾಶಿ. ಈ ಹಿನ್ನೆಲೆಯಲ್ಲಿ ಕುಂಭ ರಾಶಿಯ ಮೇಲೆ ಶನಿ ಕಾಟ ಗಾಢವಾಗಿ ಬೀರಲಿದೆ. ಶನಿಕಾಟದಿಂದ ಪ್ರಮುಖ, ಮುಖ್ಯವಾದದನ್ನ ದೇವೇಗೌಡರು ಕಳೆದುಕೊಳ್ಳಲಿದ್ದಾರೆ. ಆರೋಗ್ಯ ಸಮಸ್ಯೆ ಮತ್ತು ಜನವಿರೋಧಿ ಆಗಲಿದೆ. ಪಕ್ಷದಲ್ಲಿ ಸಮಸ್ಯೆ, ಹೊಂದಾಣಿಕೆ ಇರಲ್ಲ. ವೈಯಕ್ತಿಕ ಜಾತಕ ಚೆನ್ನಾಗಿದ್ದರೆ ಶನಿಕಾಟದಿಂದ ಪಾರಾಗಬಹುದು. ಪರಿಹಾರಕ್ಕಾಗಿ ಕಾಲ ಭೈರವೇಶ್ವರ, ಶನೇಶ್ವರ ಆರಾಧನೆ ಮತ್ತು ಹನುಮನ ಆರಾಧನೆ ಮಾಡಬೇಕು. ವೃದ್ಧರಿಗೆ ಮತ್ತು ಅನಾಥರಿಗೆ ಸಹಾಯ ಮಾಡಬೇಕು.
* ಪ್ರಧಾನಿ ನರೇಂದ್ರ ಮೋದಿ ಭವಿಷ್ಯ: ಮೋದಿ ಅವರದ್ದು ವೃಶ್ಚಿಕ ರಾಶಿ. ಶನಿಬಲ ಚೆನ್ನಾಗಿದ್ದು, ಗ್ರಹಗತಿಗಳು ಚೆನ್ನಾಗಿವೆ. ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯ. ಯಾವುದೇ ಹಿನ್ನಡೆ ಇಲ್ಲ.
* ಸಿಎಂ ಯಡಿಯೂರಪ್ಪ: ಯಡಿಯೂರಪ್ಪನವರದ್ದು ವೃಶ್ಚಿಕ ರಾಶಿ. ಶನಿ ಬಲ ಇದೆ, ಸುಭದ್ರವಾದ ಸರ್ಕಾರ ಕೊಡುತ್ತಾರೆ. ಅಭಿವೃದ್ಧಿ ಕಾರ್ಯ ಮಾಡುವುದಕ್ಕೆ ಆಗಲ್ಲ.
* ಕುಮಾರಸ್ವಾಮಿ: ಮಿಥುನ ರಾಶಿ ಇರುವುದರಿಂದ ಕುಮಾರಸ್ವಾಮಿಗೆ ಅಷ್ಟಮ ಶನಿ ಕಾಟ ಇದೆ. ಅಷ್ಟಮ ಶನಿಕಾಟದಿಂದ ಆರೋಗ್ಯದ ಸಮಸ್ಯೆ, ಸೋಲು, ನಷ್ಟ, ನಿರಾಸೆ, ಅನಗತ್ಯ ಮಾತುಗಳಿಂದ ಹಿನ್ನಡೆ. ಶನಿಕಾಟದಿಂದ ಜನವಿರೋಧಿ ಇದೆ. ಪರಿಹಾರಕ್ಕಾಗಿ ಮಾತನ್ನ ಹಿಡಿತದಲ್ಲಿ ಇಟ್ಟುಕೊಂಡು ಮಾತಾಡಬೇಕು ಹಾಗೂ ಗಣಪತಿ ಹೋಮ ಮಾಡಬೇಕು.
* ಡಿ.ಕೆ ಶಿವಕುಮಾರ್: ಡಿಕೆ ಶಿವಕುಮಾರ್ ಅವರದ್ದು ಮೇಷ ರಾಶಿ, ಅವರಿಗೆ ದಶಮ ಶನಿ ಇದೆ. ಅನುಕೂಲಕರ ವಾತಾವರಣ ಇರಲಿದೆ. ಮೂಲಜಾತಕದ ಸಮಸ್ಯೆ, ಮೂಲನಜಾತಕದಲ್ಲಿ ವಿಘ್ನ, ಕಾನೂನು ಸಮಸ್ಯೆಗಳು ತೊಡಕುಗಳು ಎದುರಾಗಲಿದೆ. ಹಿತ ಶತ್ರುಕಾಟವಾಗಲಿದೆ. ಪರಿಹಾರಕ್ಕಾಗಿ ಮೂಲ ಜಾತಕದ ಪರಿಣಾಮ ಸರಿ ಮಾಡಿಕೋಬೇಕು.
* ಸಿದ್ದರಾಮಯ್ಯನ ಭವಿಷ್ಯ: ತುಲಾ ರಾಶಿ ಮೂಲ ಜಾತಕದ ಬಲ ಇದೆ. ನಂಬಿದವರು ಕೈ ಬಿಟ್ಟು ಹೋಗುತ್ತಾರೆ. ಪಕ್ಷ ವಿರೋಧಿ ಚಟುವಟಿಕೆಗಳು ಎದುರಾಗಲಿವೆ. ಪರಿಹಾರಕ್ಕಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮಾಡಿದರೆ ಉತ್ತಮ.